ಪಾವಗಡ: ಪಾವಗಡದ ಹಿಂದುಳಿದ ವರ್ಗಗಳ ಹಾಸ್ಟೆಲ್ ನ ಸ್ಥಿತಿ ಅಯೋಮಯ

ಪಾವಗಡ ಭಾರತ ರತ್ನ ಡಾ.ಬಿ.ಆರ್‌ ಅಂಬೇಡ್ಕರ್‌ ವಸತಿ ನಿಲಯ
ಪಾವಗಡ ಭಾರತ ರತ್ನ ಡಾ.ಬಿ.ಆರ್‌ ಅಂಬೇಡ್ಕರ್‌ ವಸತಿ ನಿಲಯ
ತುಮಕೂರು

ಪಾವಗಡ:

ಹೌದು ತಾಲೂಕಿನ ಹಾಸ್ಟೆಲ್‌ ಗಳ ಚಿತ್ರಣವನ್ನು ನಿಮ್ಮ ಪ್ರಜಾ ಶಕ್ತಿ ಟಿವಿಯು ಬಯಲು ಮಾಡ್ತಾನೆ ಬಂದಿದೆ. ಇವತ್ತು ಕೂಡ ಮತ್ತೊಂದು ಹಾಸ್ಟೆಲ್ -ನ ಅವ್ಯವಸ್ತೆಯ ಮೇಲೆ ಪ್ರಜಾಶಕ್ತಿ ಟಿವಿ ಬೆಳಕು ಚೆಲ್ಲಿದ್ದು, ಈ ಹಾಸ್ಟೆಲ್‌ ನಲ್ಲಿ ಹೆಣ್ಣು ಮಕ್ಕಳಿಗೆ ಸುಸರ್ಜಿತ ಶೌಚಲಯವಿದ್ದರು ಕೂಡ ಶೌಚಲಯಕ್ಕಾಗಿ ಹೊರಗೆ ಹೋಗ್ತಿದ್ದಾರೆ. ಅಲ್ಲದೇ ಮಕ್ಕಳು ಮಲಗುವ ಕೋಣೆ ಗಬ್ಬು ನಾರುತ್ತಿದೆ. ಜೊತೆಗೆ ಮಕ್ಕಳು ಇಕ್ಕಟ್ಟಿನಲ್ಲಿರುವ ಕೋಣೆಯಲ್ಲೇ ವಿದ್ಯಾಭ್ಯಾಸ ಮಾಡ್ತಿದ್ದಾರೆ. ಇವೆಲ್ಲಾ ದೃಶ್ಯ ಕಂಡುಬಂದಿದ್ದು ಪಾವಗಡದ ಭಾರತ ರತ್ನ ಡಾ.ಬಿ.ಆರ್‌ ಅಂಬೇಡ್ಕರ್‌ ವಸತಿ ನಿಲಯದಲ್ಲಿರೋ ದಲಿತ ಹೆಣ್ಣುಮಕ್ಕಳಿರೋ ಹಾಸ್ಟೆಲ್‌ ನ ದುಸ್ಥಿತಿಯಾಗಿದೆ.

ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿ ನಿಲಯಗಳು ಬಡ ದಲಿತ ಹೆಣ್ಣು ಮಕ್ಕಳಿಗೆ ವರದಾನವಾಗುವ ಬದಲು ಮತ್ತಷ್ಟು ಸಮಸ್ಯೆಗೆ ಕಾರಣೀಭೂತವಾಗುತ್ತಿದೆ ಎಂದರೆ ತಪ್ಪಾಗಲ್ಲ. ಹೌದು ಪಾವಗಡದಲ್ಲಿರುವ ವಿದ್ಯಾರ್ಥಿ ನಿಲಯದಲ್ಲಿ 1 ರಿಂದ 5 ನೇ ತರಗತಿಯ ಸುಮಾರು 125 ಹೆಣ್ಣು ಮಕ್ಕಳು ಇದ್ದು, ಶೌಚಲಯವಿದ್ದರು ಪುಟಾಣಿ ಮಕ್ಕಳು ಶೌಚಲಯಕ್ಕಾಗಿ ಚೊಂಬು ಹಿಡಿದು ಹೊರ ಹೋಗುವ ಪರಿಸ್ಥಿತಿಯಾಗಿದೆ, ಇನ್ನು ಮಕ್ಕಳಿರುವ ಕೋಣೆಗಳು ಗಬ್ಬು ನಾರುತ್ತಿದ್ದು, ಆ ಇಕ್ಕಟ್ಟಿನಲ್ಲಿರುವ ಕೋಣೆಗಳಲ್ಲೇ ಮಕ್ಕಳು ವಿದ್ಯಾಭ್ಯಾಸ ಮಾಡ್ತಿದ್ದಾರೆ.

ಇನ್ನು ಇಲ್ಲಿನವರು ಮಕ್ಕಳ ಹಣ ಕಡತಗಳಲ್ಲಿ ಮಾತ್ರ ಲೆಕ್ಕ ತೋರಿಸಿ, ಮಕ್ಕಳಿಗೆ ಖರ್ಚು ಮಾಡಿದ ಹಣದ ಬಗ್ಗೆ ಓಚರ್ ಗಳನ್ನು ತೋರಿಸುತ್ತಾರೆ, ಹೌದು ಹೈಟೆಕ್‌ ವಸತಿ ನಿಲಯ ಎಂಬಂತೆ ಅನುದಾನ ಖರ್ಚು ಮಾಡ್ತಾರೆ ಆದರೆ ಯಾವುದೇ ಬದಲಾವಣೆಗಳು ಮಾತ್ರ ಕಂಡುಬಂದಿಲ್ಲ, ಕನಿಷ್ಟ ಮಕ್ಕಳಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳು ಸಹ ಸಿಗ್ತಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ವಸತಿ ನಿಲಯದ ಸಮಸ್ಯೆಯನ್ನು ಬಗೆಹರಿಸುತ್ತಾರಾ ಎಂದು ಕಾದುನೋಡಬೇಕಿದೆ.

 

Author:

...
Editor

ManyaSoft Admin

Ads in Post
share
No Reviews