ಪಾವಗಡ: ಆಕಸ್ಮಿಕ ಬೆಂಕಿ ತಗುಲಿ ಧಗಧಗನೆ ಹೊತ್ತಿ ಉರಿದ ಹುಲ್ಲಿನ ಬಣವೆ..!

ಸಂಪೂರ್ಣ ಸುಟ್ಟು ಕರಕಲಾಗಿರುವ ಹುಲ್ಲಿನ ಬಣವೆ
ಸಂಪೂರ್ಣ ಸುಟ್ಟು ಕರಕಲಾಗಿರುವ ಹುಲ್ಲಿನ ಬಣವೆ
ತುಮಕೂರು

ಪಾವಗಡ:

ಪಾವಗಡ ತಾಲೂಕಿನ ಕಾರನಾಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ಅಗ್ನಿ ಅವಘಡ ಸಂಭವಿಸಿದ್ದು, ಬಡನಾಗಪ್ಪ ಎನ್ನುವವರ ಹುಲ್ಲಿನ ಬಣವೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಹುಲ್ಲಿನ ಬಣವೆ ಸಮೀಪದಲ್ಲಿ ಕಟ್ಟಿ ಹಾಕಿದ್ದ ಐದು ಹಸುಗಳ ಪೈಕಿ ಬೆಂಕಿಯ ತೀವ್ರತೆಗೆ ಒಂದು ಹಸು ಸಜೀವ ದಹನವಾಗಿದ್ದು, ಮತ್ತೊಂದು ಹಸು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ, ಹಸುಗಳನ್ನು ರಕ್ಷಿಸಲು ಬೆಂಕಿಗೆ ನುಗ್ಗಿದಂತಹ ರೈತ ಬಡನಾಗಪ್ಪ ಅವರಿಗೆ ಸುಟ್ಟ ಗಾಯಗಳಾಗಿದ್ದು, ಗಾಯಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

ಇನ್ನು ರಾಸುಗಳ ಮೇವಿಗಾಗಿ ಸಂಗ್ರಹಿಸಿದ್ದ ಎರಡು ದೊಡ್ಡ ಹುಲ್ಲಿನ ಬಣವೆಗಳು ಸುಟ್ಟು ಹೋಗಿದ್ದು,  ಪಕ್ಕದ ತೋಟದ ಮನೆಯಲ್ಲಿ ಶೇಖರಿಸಿದ್ದ ಶೇಂಗಾ, ಭತ್ತ ಹಾಗೂ ಇತರ ದವಸ ಧಾನ್ಯಗಳು  ಬೆಂಕಿಯಲ್ಲಿ ಸುಟ್ಟು ಬೂದಿಯಾಗಿವೆ. ಗ್ರಾಮದ ಸಮೀಪದ ಬೆಟ್ಟಕ್ಕೆ ಹತ್ತಿಕೊಂಡಿದ್ದ ಬೆಂಕಿ ಏಕಾಏಕಿ  ಹುಲ್ಲಿನ ಬಣವೆಗಳಿಗೆ ಆವರಿಸಿದ್ದರಿಂದ ಸುಮಾರು ನಾಲ್ಕೈದು ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನು ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಹೊರಕೆರಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

 

 

 

 

Author:

...
Editor

ManyaSoft Admin

Ads in Post
share
No Reviews