ಪಾವಗಡ : ಬಳಕೆ ಇಲ್ಲದೇ ವ್ಯರ್ಥವಾಗಿ ಬಿದ್ದಿರೋ ಘನ ತ್ಯಾಜ್ಯ ಘಟಕ

ಘನ ತ್ಯಾಜ್ಯ ಘಟಕ
ಘನ ತ್ಯಾಜ್ಯ ಘಟಕ
ತುಮಕೂರು

ಪಾವಗಡ :

ಪ್ರಜಾ ಶಕ್ತಿ ಅಂದ್ರೆ ನೊಂದವರ ದನಿಯಾಗಿ ಕೆಲಸ ಮಾಡುವ ಕೆಲಸವನ್ನು ಮಾಡುತ್ತಿದ್ದು, ಪ್ರತಿ ವಾರ ಜಿಲ್ಲೆಯ ಒಂದೊಂದು ತಾಲೂಕಿಗೆ ಸಂಚಾರ ಮಾಡಿ, ಅಲ್ಲಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಮಾಡುತ್ತಿದೆ. ಕಳೆದ ವಾರ ತುಮಕೂರು ಜಿಲ್ಲೆಯ ಗಡಿ ತಾಲೂಕಾದ ಪಾವಗಡ ತಾಲೂಕಿನಲ್ಲಿ ಸಂಚಾರ ಮಾಡಿತ್ತು. ಪ್ರಜಾಶಕ್ತಿ ಸಂಚಾರದಲ್ಲಿ ಪಾವಗಡದಲ್ಲಿ ಹಲವು ಸಮಸ್ಯೆಗಳು ನಮ್ಮ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ಅಧಿಕಾರಿಗಳು, ಶಾಸಕರು ಏನ್‌ ಮಾಡ್ತಾ ಇದ್ದಾರೆ ಎಂಬ ಪ್ರಶ್ನೆ ಕಾಡತೊಡಗಿತು. ನಾವ್‌ ಯಾಕಪ್ಪ ಹೀಗೆ ಹೇಳ್ತಾ ಇದ್ದೀವಿ ಅಂದ್ರೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರೋ ಘನ ತ್ಯಾಜ್ಯ ಘಟಕ ಯಾವುದಕ್ಕೂ ಬಳಸದೇ ವ್ಯರ್ಥವಾಗಿ ಬಿದ್ದಿದೆ.

ಪಾವಗಡ ತಾಲೂಕಿನ ಕನ್ನಮೇಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಲು ಕನ್ನಮೇಡಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಘನ ತ್ಯಾಜ್ಯವನ್ನು ನಿರ್ಮಾಣ ಮಾಡಲಾಗಿದೆ. ಸುಸಜ್ಜಿತವಾದ ಘನ ತ್ಯಾಜ್ಯಾ ಘಟಕವನ್ನು ನಿರ್ಮಾಣ ಮಾಡಿದರು ಮಾತ್ರ ಅಲ್ಲಿ ಕಸವನ್ನು ವಿಲೇವಾರಿ ಮಾಡದೇ ವ್ಯರ್ಥ ಮಾಡಲಾಗ್ತಿದೆ. ಇದಲ್ಲದೇ ತ್ಯಾಜ್ಯ ವಿಲೇವಾರಿ ಘಟಕದ ಮುಂದೆ ಒಂದು ಹೊಂಡ ನಿರ್ಮಾಣವಾಗಿದ್ದು, ಹೋಗಲು ರಸ್ತೆ ಕೂಡ ಇಲ್ಲದಾಗಿದ್ದು. ಘನ ತ್ಯಾಜ್ಯ ಘಟಕ ಯಾವುದಕ್ಕೂ ಯೂಸ್‌ ಆಗದೇ ವೇಸ್ಟ್‌ ಆಗಿ ಬಿದ್ದಿದೆ. ಇದರಿಂದ ಗ್ರಾಮಗಳಲ್ಲಿ ಕಸದ ಸಮಸ್ಯೆ ಅನ್ನೋದು ಸಾಮಾನ್ಯವಾಗಿ ಉದ್ಬವಿಸುತ್ತಿದೆ.

ಇನ್ನು ಈ ಘನ ತ್ಯಾಜ್ಯ ಘಟಕವನ್ನು ಬಳಸದೇ ಬಿಟ್ಟಿದ್ದಾರೆ. ಇದಕ್ಕೆ ಕನಿಷ್ಠ ಪಕ್ಷ ಒಂದು ಬೀಗವನ್ನು ಕೂಡ ಹಾಕಿಲ್ಲ. ಇದರಿಂದ ಕುಡುಕರು ತ್ಯಾಜ್ಯ ಘಟಕವನ್ನು ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ. ಇದೆಲ್ಲಾ ನೋಡುತ್ತಿದ್ದರೆ ಅಧಿಕಾರಿಗಳು ದುಡ್ಡು ಹೊಡೆಯಲು ಬಿಲ್‌ ಮಾಡಿಸಿಕೊಳ್ಳಲು ಈ ಘಟಕವನ್ನು ನಿರ್ಮಾಣ ಮಾಡಿದ್ದಾರಾ ಎಂಬ ಅನುಮಾನ  ಮೂಡುತ್ತಿದೆ.

ಅದೇನೆ ಆಗಲಿ ಸೌಲಭ್ಯ ಬೇಕು ಅಂತಾ ಪ್ರತಿಭಟನೆ ಮಾಡ್ತೀರಾ. ಆದ್ರೆ ಇಲ್ಲಿ ಇರೋ ಸೌಲಭ್ಯವನ್ನು ಬಳಸಿಕೊಳ್ಳದಿರೋದು ಮಾತ್ರ ದುರಂತವೇ ಸರಿ. ಇನ್ನಾದ್ರು ಘನ ತ್ಯಾಜ್ಯ ಘಟಕವನ್ನು ಉಪಯೋಗ ಮಾಡುವಂತಾಗಿ, ಇಲ್ಲಿನ ಗ್ರಾಮಸ್ಥರು ಕಸದ ಸಮಸ್ಯೆಯಿಂದ ಮುಕ್ತಿ ಪಡೆಯಬೇಕಿದೆ.

 

Author:

...
Editor

ManyaSoft Admin

Ads in Post
share
No Reviews