ಪಾವಗಡ:
ಪಾವಗಡ ಪಟ್ಟಣದ ಪುರಸಭೆಯ ವ್ಯಾಪ್ತಿಯ ಹೊಸ ಬಸ್ ನಿಲ್ದಾಣದಲ್ಲಿದ್ದ 22 ವಾಣಿಜ್ಯ ಸಂಕೀರ್ಣದ ಅಂಗಡಿಗಳ ಹರಾಜು ಪ್ರಕ್ರಿಯೆ ಯಶಸ್ವಿಯಾಗಿದೆ. ಹೊಸ ಬಸ್ ನಿಲ್ದಾಣದಲ್ಲಿದ್ದ ಅಂಗಡಿಗಳನ್ನು ಲೀಜ್‌ಗೆ ನೀಡಲಾಗಿದೆ. ಪಾವಗಡ ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭಾ ಅಧ್ಯಕ್ಷ ರಾಜೇಶ್ ಅವರ ಅಧ್ಯಕ್ಷತೆಯಲ್ಲಿ ವಾಣಿಜ್ಯ ಅಂಗಡಿಗಳ ಹರಾಜು ಪ್ರಕ್ರಿಯೆ ನಡೆದಿದ್ದು, ಈ ವೇಳೆ ಸದಸ್ಯರಾದ ಸುರೇಶ್ ಬಾಬು, ಮುಖ್ಯ ಅಧಿಕಾರಿ ಜಾಫರ್ ಷರೀಫ್, ವ್ಯವಸ್ಥಾಪಕ ಸಂತೋಷ್, ಕಂದಾಯ ಅಧಿಕಾರಿ ಪ್ರದೀಪ್ ಸೇರಿ ಹಲವಾರು ಮಂದಿ ಭಾಗಿಯಾಗಿಯಾಗಿದ್ದರು.
ಇನ್ನು ಕಳೆದ 25 ವರ್ಷಗಳ ಹಿಂದೆ ಕೇವಲ 800 ರಿಂದ 900 ರೂಪಾಯಿ ಬಾಡಿಗೆಗೆ ವಾಣಿಜ್ಯ ಮಳಿಗೆಗಳನ್ನು ನೀಡಲಾಗಿತ್ತು. ಈಗ ಅಂಗಡಿಗಳಿಗೆ ಪೈಪೋಟಿ ಹೆಚ್ಚಾಗೊರೋದರಿಂದ ಸುಮಾರು 30 ರಿಂದ 40 ಸಾವಿರಕ್ಕೆ ಹರಾಜು ಕೂಗಲಾಗಿದೆ. ಮುಂದಿನ 12 ವರ್ಷಗಳ ಅವಧಿಗೆ ಲೀಜ್ ನೀಡಲಾಗಿದ್ದು, ಈ ಮೂಲಕ ಪುರಸಭೆಗೆ ಮಹತ್ತರ ಆದಾಯ ಲಭಿಸಲಿದೆ.
ಈ ವೇಳೆ ಮಾತನಾಡಿದ ಪುರಸಭಾ ಅಧ್ಯಕ್ಷ ರಾಜೇಶ್, ಕಳೆದ 24 ವರ್ಷಗಳಿಂದ ಪುರಸಭೆ ವಾಣಿಜ್ಯ ಮಳಿಗೆಗಳು ಟೆಂಡರ್ ಆಗದೇ ವನವಾಸದ ಹಂತಕ್ಕೇ ಸೇರಿತ್ತು. ಇದೀಗ ವಾಣಿಜ್ಯ ಮಳಿಗೆಗಳ ಹರಾಜಿನಿಂದಾಗಿ ವಾಣಿಜ್ಯ ಮಳಿಗೆಗಳ ವನವಾಸಕ್ಕೆ ಮುಕ್ತಿ ಸಿಕ್ಕಂತಾಗಿದೆ. ಹೊಸ ಹರಾಜು ಪ್ರಕ್ರಿಯೆಯಿಂದಾಗಿ ಪುರಸಭೆಗೆ ಕೋಟಿಗಟ್ಟಲೆ ಆದಾಯ ಬರುವಂತಾಗಿದೆ. ವಾಣಿಜ್ಯ ಮಳಿಗೆಗಳ ಬಾಡಿಗೆ ಮೊತ್ತ 2 ಲಕ್ಷದಿಂದ 19 ಲಕ್ಷಕ್ಕೆ ಏರಿಕೆಯಾಗಿದೆ ಸಂತಸ ವ್ಯಕ್ತಪಡಿಸಿದರು.