ಪಾವಗಡ : ಪ್ರತಿ ಜಿಲ್ಲೆ ಮತ್ತು ತಾಲೂಕಿನಲ್ಲಿ ಸಾರ್ವಜನಿಕರು ಮತ್ತು ರೈತರ ಅನುಕೂಲಕ್ಕಾಗಿ ಕೃಷಿ ಮಾರುಕಟ್ಟೆಯನ್ನು ಸ್ಥಾಪಿಸಲಾಗಿರುತ್ತೆ. ಅಂತಹ ಕೃಷಿ ಮಾರುಕಟ್ಟೆಯಲ್ಲಿ ಕಸ ವಿಲೇವಾರಿ ಮಾಡಿ, ಕೃಷಿ ಮಾರುಕಟ್ಟೆಯನ್ನು ಸ್ವಚ್ಚವಾಗಿಡುವ ಜವಾಬ್ದಾರಿ ಆಯಾ ಪುರಸಭೆ, ನಗರಸಭೆ, ಪಾಲಿಕೆಗೆ ಸೇರಿರುತ್ತದೆ. ಆದರೆ, ಪಾವಗಡದಲ್ಲಿರುವ ಕೃಷಿ ಮಾರುಕಟ್ಟೆ ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುತ್ತಿದ್ದು, ಮಾರಕ ರೋಗಗಳ ಆವಾಸ ಸ್ಥಾನವಾಗಿದೆ.
ಪಾವಗಡ ಇತ್ತೀಚೆಗೆ ಅಭಿವೃದ್ಧಿ ಹೊಂದುತ್ತಿರುವ ತಾಲೂಕು ಎನಿಸಿಕೊಳ್ಳುತ್ತಿದೆ. ದಿನೇ ದಿನೇ ನಗರ ಬೆಳೆಯುತ್ತಿದ್ದು, ಜನಸಂಖ್ಯೆ ಕೂಡ ಹೆಚ್ಚಾಗ್ತಾ ಇದೆ. ತಾಲೂಕಿನಲ್ಲಿರುವ ಕೃಷ್ಠಿ ಮಾರುಕಟ್ಟೆ ಮಾತ್ರ ಯಾಕೋ ಸ್ವಚ್ಛತೆ ಇಲ್ಲದೆ ಸೊರಗುತ್ತಿದೆ. ಅದು ಹೇಳಿ ಕೇಳಿ ಕೃಷಿ ಮಾರುಕಟ್ಟೆ. ಪ್ರತಿನಿತ್ಯ ಇಲ್ಲಿ ಟನ್ಗಟ್ಟಲೇ ವೆಸ್ಟೇಜ್ ಸೃಷ್ಠಿಯಾಗುತ್ತೆ. ಅಂತಹ ವೆಸ್ಟೇಜನ್ನು ತೆರವುಗೊಳಿಸುವ ಕಾರ್ಯವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು. ಆದರೆ ಪಾವಗಡದಲ್ಲಿ ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದು ಕೃಷ್ಟಿ ಮಾರುಕಟ್ಟೆ ದುರ್ನಾತ ಹೊಡೆಯುತ್ತಿದೆ.
ಇನ್ನು ಕೃಷಿ ಮಾರುಕಟ್ಟೆಯ ಅಕ್ಕ ಪಕ್ಕದಲ್ಲಿ ಜನರು ವಾಸಿಸುತ್ತಿದ್ದಾರೆ. ಮಾರುಕಟ್ಟೆಯಿಂದ ಹೊರಬರುತ್ತಿರುವ ಗಬ್ಬಿನಿಂದ ಅನೇಕ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಇತ್ತ ಗಬ್ಬೆದ್ದು ನಾರುತ್ತಿರುವ ಕೃಷಿ ಮಾರುಕಟ್ಟೆಯ ಕೂಗಳತೆಯ ದೂರದಲ್ಲಿಯೇ ಇಂದಿರಾ ಕ್ಯಾಂಟಿನ್ ಇದೆ. ಇಲ್ಲಿ ಸಾವಿರಾರು ಜನರು ತಿಂಡಿ, ಊಟಕ್ಕೆಂದು ಬರುತ್ತಾರೆ. ಕೃಷಿ ಮಾರುಕಟ್ಟೆಯ ಗಲೀಜಿನಿಂದಾಗಿ ಅಲ್ಲಿ ಕೂರುವ ನೊಣ, ಸೊಳ್ಳೆಗಳ ಕಾಟ ಇಂದಿರಾ ಕ್ಯಾಂಟಿನ್ ಗೆ ತಲುಪುತ್ತಿದೆ. ಇಲ್ಲಿ ಊಟ ಮಾಡಲು ಬಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ಕೃಷಿ ಮಾರುಕಟ್ಟೆಯನ್ನು ಸ್ವಚ್ಚಗೊಳಿಸುವ ಕೆಲಸ ಮಾಡಬೇಕಿದೆ.