ಚಿಕ್ಕನಾಯಕನಹಳ್ಳಿ : ಸರ್ಕಾರಿ ಶಾಲೆಯ ದಾಖಲಾತಿಗೆ ಮುಗಿಬಿದ್ದ ಪೋಷಕರು

ಚಿಕ್ಕನಾಯಕನಹಳ್ಳಿ : ನಿನ್ನೆ ಇಂದ ರಾಜ್ಯಾದ್ಯಂತ ಶಾಲೆಗಳು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಅತ್ಯಂತ ಸಂಭ್ರಮದಿಂದ ಶಾಲೆಗಳತ್ತ ಮುಖಮಾಡಿದ್ರು. ಇತ್ತ ತುಮಕೂರು ಜಿಲ್ಲೆಯಾದ್ಯಂತ ಶಾಲೆಗಳು ಆಲಂಕಾರಗೊಂಡಿದ್ದವು. ವಿದ್ಯಾರ್ಥಿಗಳನ್ನು ಶಿಕ್ಷಕರು ಅತ್ಯಂತ ಸಂಭ್ರಮದಿಂದ ಸ್ವಾಗತಿಸಿದ್ರು. ಇದರ ನಡುವೆ ಚಿಕ್ಕನಾಯಕನಹಳ್ಳಿಯಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ಮುಗಿಬಿದ್ರು. ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯೋ ಸಮಯದಲ್ಲಿ ಹೀಗೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಮುಂದಾಗಿದ್ದನ್ನ ಕಂಡ ಶಿಕ್ಷಕರು ಸಂಸತಪಟ್ರು.

ಹೌದು, ಖಾಸಗಿ ಶಾಲೆಗಳ ಹೊರೆ, ಶುಲ್ಕದ ಭಾರ ಮತ್ತು ಬೋಧನೆಯ ಗುಣಮಟ್ಟದ ಬಗ್ಗೆ ಲೆಕ್ಕಹಾಕುತ್ತಿದ್ದ ಪೋಷಕರು ಈಗ ಸರ್ಕಾರಿ ಶಾಲೆಗಳತ್ತ ಮುಖಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇತ್ತೀಚೆಗೆ, ಚಿಕ್ಕನಾಯಕನಹಳ್ಳಿ ಪಟ್ಟಣದ ಶತಮಾನಗಳ ಇತಿಹಾಸ ಹೊಂದಿರುವ  ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಲ್ಲಿ ಅಂತಹದೊಂದು ದೃಶ್ಯ ಕಂಡುಬಂದಿತ್ತು.

ಇನ್ನು LKG ಇಂದ 7ನೇ ತರಗತಿಯವರೆಗೆ ಸಲ್ಲಿಸುವ ಪ್ರಸಕ್ತ ಶೈಕ್ಷಣಿಕ ವರ್ಷದ ದಾಖಲಾತಿಗಾಗಿ ನೂರಾರು ಪೋಷಕರು ಮುಂಜಾವಿನಿಂದಲೇ ಶಾಲೆಯ ಮುಂದೆ ಸರತಿಯಲ್ಲಿ ನಿಂತು ಮಕ್ಕಳನ್ನು ಅಡ್ಮಿಷನ್‌ ಮಾಡಿಸುತ್ತಿದ್ದರು. ಈ ಶಾಲೆಯ ಶಿಕ್ಷಕರ ಕಟ್ಟುನಿಟ್ಟಾದ ಬೋಧನಾ ಕ್ರಮ, ಶಿಸ್ತು, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳು, ಇತ್ತೀಚಿನ ಸುಧಾರಿತ ಮೂಲಸೌಕರ್ಯ ಎಲ್ಲವೂ ಪೋಷಕರ ಗಮನ ಸೆಳೆದಿದೆ ಎನ್ನಲಾಗಿದೆ. ಸರ್ಕಾರಿ ಶಾಲೆಯೊಂದಕ್ಕೆ ಈ ಮಟ್ಟದ ಸ್ಪಂದನೆ ದೊರೆತಿರುವುದು ಶಿಕ್ಷಣ ಕ್ಷೇತ್ರಕ್ಕೆ ಒಳ್ಳೆಯ ಬೆಳಕು ಚೆಲ್ಲಿದೆ ಎನ್ನಬಹುದು.

 

Author:

...
Keerthana J

Copy Editor

prajashakthi tv

share
No Reviews