ದೇಶ:
ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ರು. ಪ್ರವಾಸಕ್ಕೆಂದು ಬಂದಿದ್ದ 26 ಮಂದಿಯನ್ನು ಹತ್ಯೆಗೈದಿದ್ರು. ಉಗ್ರರ ದಾಳಿಯ ವಿರುದ್ಧ ಭಾರತ ಏಟಿನ ಏಟನ್ನು ನೀಡುತ್ತಿದೆ. ಪ್ರಧಾನಿ ಮೋದಿ ಅವರು ರಾಜತಾಂತ್ರಿಕ ಹಾದಿಯಲ್ಲಿ ಅನುಸರಿಯುವ ಮೂಲಕ ಪ್ರತಿನಿತ್ಯ ಒಂದಿಲ್ಲೊಂದು ಶಾಕ್ ನೀಡುತ್ತಿದೆ. ಈಗ ರಕ್ಷಣ ಸಚಿವ ಖ್ವಾಜಾ ಆಸೀಫ್ ಎಕ್ಸ್ ಖಾತೆಯನ್ನು ಬಂದ್ ಮಾಡುವ ಮೂಲಕ ಚಾಟಿ ಏಟು ನೀಡಿದೆ.
ನಿನ್ನೆ ತಾನೇ ದೇಶದ ಬಗ್ಗೆ ಪಾಕಿಸ್ತಾನದ ಯುಟ್ಯೂಬ್ ಚಾನಲ್‌ಗಳು ಸುಳ್ಳು ಸುದ್ದಿ ಹರಡುತ್ತಿರುವುದು ತಿಳಿದು ದೇಶದಲ್ಲಿ ಪಾಕಿಸ್ತಾನದ 16 ಯೂಟ್ಯೂಟ್ ಚಾನಲ್‌ಗಳಿಗೆ ನಿನ್ನೆಯಷ್ಟೆ ಕೇದ್ರ ಸರ್ಕಾರ ನಿರ್ಬಂಧ ಹಾಕಲಾಗಿತ್ತು. ಈ ಎಲ್ಲಾ ಚಾನಲ್‌ಗಳಿಗೆ ಒಟ್ಟಾರೆ 63 ಮಿಲಿಯನ್ ಚಂದಾದರರಿದ್ದರು. ಆದರೆ ಇದೀಗ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಅವರ ಎಕ್ಸ್ ಜಾಲತಾಣಕ್ಕೆ ಭಾರತದಲ್ಲಿ ತಡೆ ನೀಡಿದೆ ಮತ್ತೊಂದು ಶಾಕ್ ನೀಡಿದೆ.
ಕಳೆದ ವಾರವಷ್ಟೇ, ಪಾಕಿಸ್ತಾನ ರಕ್ಷಣಾ ಸಚಿವರು ಸಂದರ್ಶನದಲ್ಲಿ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗೆ ಬೆಂಬಲ ನೀಡಿ, ಫಂಡಿಂಗ್ಗೆ ಬೆಂಬಲ ನೀಡುತ್ತಿರುವ ಬಗ್ಗೆ ರಕ್ಷಣ ಸಚಿವ ಒಪ್ಪಿಕೊಂಡಿರುವ ವಿಡಿಯೋ ವೈರಲ್ ಆಗಿತ್ತು. ಇತ್ತೀಚಿಗೆ ಸ್ಕೈ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿದ್ದ ಆಸೀಫ್, ನಾವು ಸುಮಾರು ಮೂರು ದಶಕಗಳಿಂದ ಅಮೆರಿಕ ಸಂಯುಕ್ತ ಸಂಸ್ಥಾನಕ್ಕಾಗಿ ಮತ್ತು ಬ್ರಿಟನ್ ಸೇರಿದಂತೆ ಪಶ್ಚಿಮಕ್ಕಾಗಿ ಈ ಕೊಳಕು ಕೆಲಸವನ್ನು ಮಾಡುತ್ತಿದ್ದೇವೆ ಎನ್ನುವ ಮೂಲಕ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ, ತರಬೇತಿ ಮತ್ತು ಫಂಡಿಂಗ್ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದರು. ಇದರ ಬೆನ್ನಲ್ಲೆ ಇದೀಗ ಖ್ವಾಜಾ ಅವರ ಎಕ್ಸ್ ಖಾತೆಯನ್ನು ಭಾರತದಲ್ಲಿ ಬ್ಲಾಕ್ ಮೂಲಕ ಮತ್ತೊಮ್ಮೆ ಚಡಿ ಏಟು ನೀಡಿದೆ.