ತುಮಕೂರು:
ಸ್ಮಾರ್ಟ್ ಸಿಟಿ ಅಂತಾ ಹೆಸರುವಾಸಿಯಾಗಿರೋ ನಮ್ಮ ತುಮಕೂರು ಗ್ರೇಟರ್ ತುಮಕೂರು ಆಗಲು ಹೊರಟಿದೆ. ಆದ್ರೆ ನಮ್ಮ ನಗರ ಅದೆಷ್ಟು ಸ್ವಚ್ಛವಾಗಿದೆ ಎಂದ್ರೆ ಊಹಿಸಿಕೊಳ್ಳಲು ಅಸಾಧ್ಯ.. ನಮ್ಮ ತುಮಕೂರು ಸ್ವಚ್ಛ ನಗರ ಅಂತಾ ಕರೆಸಿಕೊಳ್ಳೋದು ಒಂದು ಕನಸಿನ ಮಾತೇ ಆಗಿದೆ. ಹೌದು ನಗರದ ಕಸದ ಸಮಸ್ಯೆ ಬಗ್ಗೆ ನಿಮ್ಮ ಪ್ರಜಾಶಕ್ತಿ ವರದಿ ಮಾಡ್ತಾ ಇದ್ರು ಕೂಡ ಜನರು ಹಾಗೂ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯವಹಿಸ್ತಾ ಇರೋದು ಕಂಡು ಬರ್ತಾ ಇದೆ.
ತುಮಕೂರು ನಗರದ ಕೋತಿ ತೋಪು ಬಳಿಯ ವಾರ್ಡ್ ನಂಬರ್ 9ರಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಂಡು ಬಂದಿದ್ದು ಸ್ವಚ್ಛತೆ ಎಂಬುದು ಮರಿಚೀಕೆಯಾಗಿದೆ. ಅಮಾನಿಕೆರೆ ಮಕ್ಕಳ ಆಟದ ಮೈದಾನದ ಪಕ್ಕದ ರಸ್ತೆಯಲ್ಲಿ ರಾಶಿ ರಾಶಿ ಕಸ ಬಿದ್ದಿದ್ದು, ಗಬ್ಬೇದು ನಾರುತ್ತಿದೆ. ಈ ರಸ್ತೆಯ ಪಕ್ಕದಲ್ಲೇ ಚೈತನ್ಯ ಟೆಕ್ನೋ ಸ್ಕೂಲ್ ಕೂಡ ಇದೆ. ಕಸದ ರಾಶಿಯಿಂದಾಗಿ ಶಾಲಾ ಮಕ್ಕಳು ಹಾಗೂ ತೋಟದ ನಿವಾಸಿಗಳಿಗೆ ಸಂಕಷ್ಟ ಎದುರಾಗಿದ್ದು ನಿತ್ಯ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಎದುರಾಗಿದೆ. ಅಲ್ದೇ ಕಸದ ಸಮಸ್ಯೆಯಿಂದ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಭೀತಿ ಇಲ್ಲಿನ ಜನರಲ್ಲಿದೆ.
ಇನ್ನು ನಿತ್ಯ ಮನೆ ಮುಂದೆಯೇ ಕಸದ ಗಾಡಿ ಬರುತ್ತೆ. ಆದ್ರೆ ಜನರು ಮಾತ್ರ ಕಸವನ್ನು ಗಾಡಿಗೆ ಹಾಕದೇ ಇಲ್ಲಿ ತಂದು ಸುರಿಯುತ್ತಾರೆ. ಬೆಳಗ್ಗೆ ಬಂದು ಕಸವನ್ನು ಪಾಲಿಕೆಯವರು ಎತ್ತಿಕೊಂಡು ಹೋಗ್ತಾರೆ. ಆದ್ರೆ ಅಮೇಲೆ ಬಂದು ಇಲ್ಲಿಗೆ ಕಸ ಹಾಗ್ತಾರೆ. ಇಲ್ಲಿ ಸಿಸಿ ಕ್ಯಾಮೆರಾ ಇದ್ರು ಕೂಡ ಯಾವುದೇ ಭಯ ಇಲ್ಲದೇ ಕಸವನ್ನು ಸುರಿದು ಹೋಗ್ತಾರೆ. ಕಸ ಸುರಿದು ಹೋಗುವ ಜನರಿಗೆ ದಂಡ ವಿಧಿಸುವ ಮೂಲಕ ಕಸದ ಸಮಸ್ಯೆಗೆ ಮುಕ್ತಿ ಕೊಡಿಸುವ ಕೆಲಸವನ್ನು ಪಾಲಿಕೆ ಮಾಡಬೇಕಿದೆ ಎಂದು ಇಲ್ಲಿನ ಸ್ಥಳೀಯರು ಆಗ್ರಹಿಸ್ತಾ ಇದ್ದಾರೆ.
ಒಟ್ನಲ್ಲಿ ನಮ್ಮ ತುಮಕೂರು ನಗರದಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇದ್ದು, ಪಾಲಿಕೆ ಕಸದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ದಂಡ ವಿಧಿಸುವ ಮೂಲಕ ಕಸದ ಸಮಸ್ಯೆಗೆ ಮುಕ್ತಿ ಕೊಡಿಸಬೇಕಿದೆ.