ಕೊರಟಗೆರೆ :
ನಿಮ್ಮ ಪ್ರಜಾಶಕ್ತಿ ಟಿವಿ ಸುದ್ದಿ ಮಾಡಿ ಎಂದಿಗೂ ಸುಮ್ಮನೆ ಕೂರಲ್ಲ ಅನ್ನೋದಕ್ಕೆ ಇದು ಬೆಸ್ಟ್ ಎಕ್ಸಾಂಪಲ್. ಸಮಸ್ಯೆಗಳ ಬಗ್ಗೆ ಸುದ್ದಿ ಮಾಡೋದರ ಜೊತೆಗೆ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಪರಿಹಾರ ಕೊಡಿಸುವ ನಿಟ್ಟಿನಲ್ಲಿಯೂ ಕೆಲಸ ಮಾಡ್ತಿದೆ. ಇದೀಗ ನಿಮ್ಮ ಪ್ರಜಾಶಕ್ತಿ ಟಿವಿ ವರದಿಗೆ ಮತ್ತೊಂದು ಫಲಶೃತಿ ಸಿಕ್ಕಿದೆ.
ಹೌದು… ಕೊರಟಗೆರೆ ತಾಲೂಕಿನ ಕಸಬಾ ಹೋಬಳಿಯ ವಡ್ಡಗೆರೆ ಗ್ರಾಮ ಪಂಚಾಯ್ತಿ ಯಾದಗೆರೆ ಗ್ರಾಮದ ಸೇಂಟ್ ಮೆರಿಸ್ ಶಾಲೆಯಲ್ಲಿ ಫೀಸ್ ಬಾಕಿ ಉಳಿಸಿಕೊಂಡಿದ್ದಾರೆ ಅನ್ನೋ ಕಾರಣಕ್ಕೆ ಶಾಲೆಯ ಆಡಳಿತ ಮಂಡಳಿ ಬರೋಬ್ಬರಿ ೪೦ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸದೇ ಹೊರಗೆ ಕೂರಿಸಿದ್ದಂತಹ ಘಟನೆ ನಡೆದಿತ್ತು. ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ಫೀಸ್ ಬಾಕಿ ಉಳಿಸಿಕೊಂಡಿದ್ದಕ್ಕೆ ಮಕ್ಕಳಿಗೆ ಇದೆಂಥಾ ಶಿಕ್ಷೆ? ಎಂಬ ಶೀರ್ಷಿಕೆಯಡಿ ಸುದ್ದಿಯನ್ನು ಬಿತ್ತರಿಸಿತ್ತು. ಈ ಸುದ್ದಿ ಇದೀಗ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದೆ.
ಫೀಸ್ ಬಾಕಿ ಉಳಿಸಿಕೊಂಡಿದ್ದಕ್ಕೆ ಖಾಸಗಿ ಶಾಲೆ ೪೦ ವಿದ್ಯಾರ್ಥಿಗಳನ್ನು ಪರೀಕ್ಷೇಗೆ ಕೂರಿಸದೇ ಹೊರಗೆ ನಿಲ್ಲಿಸಿದ್ದ ಸುದ್ದಿ ರಾಜ್ಯಮಟ್ಟದಲ್ಲಿ ಗಮನ ಸೆಳೆದಿತ್ತು. ಹೀಗಾಗಿ ಮುಖ್ಯಮಂತ್ರಿಯ ವಿಶೇಷ ಅಧಿಕಾರಿ ಕಚೇರಿಯಿಂದ ಕೊರಟಗೆರೆ ಬಿಇಓಗೆ ನೋಟಿಸ್ ನೀಡಿ ಈ ಘಟನೆಯ ಬಗ್ಗೆ ಸ್ಪಷ್ಟನೆ ಕೇಳಲಾಗಿತ್ತು. ಅಷ್ಟೇ ಅಲ್ಲ, ಫೀಸ್ ವಿಚಾರಕ್ಕೆ ಪರೀಕ್ಷೆಗೆ ತಡೆನೀಡಿದ್ದ 40 ಮಕ್ಕಳಿಗೆ ಮತ್ತೆ ಪರೀಕ್ಷೆ ನೀಡಬೇಕು ಎಂದು ಇನ್ನು ಸಿಎಂ ಕಚೇರಿಯಿಂದ ಖಡಕ್ ಎಚ್ಚರಿಕೆ ಸಂದೇಶ ನೀಡಿತ್ತು. ಅಲ್ಲದೇ ಶಾಲೆಯಲ್ಲಿ ಅಗತ್ಯ ಶೌಚಾಲಯ , ಶುದ್ದ ಕುಡಿಯುವ ನೀರು ಮತ್ತು ಶಾಲಾ ಬಸ್ಸಿನಲ್ಲಿ ಸಿಸಿಟಿವಿ ಅಳವಡಿಸಲು ಈ ಪತ್ರದಲ್ಲಿ ಸೂಚಿಸಲಾಗಿತ್ತು.
ಈ ಬೆನ್ನಲ್ಲೇ ಕೊರಟಗೆರೆ ಬಿಇಓ ನಟರಾಜ್ ಎಚ್ಚೆತ್ತುಕೊಂಡಿದ್ದು, ಶಾಲಾ ಆಡಳಿತ ಮಂಡಳಿಯ ಜೊತೆ ಮಾತನಾಡಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸುವಂತೆ ಸೂಚಿಸಿದ್ದಾರೆ. ಬಳಿಕ ಯಾದಗೆರೆಯ ಸೇಂಟ್ ಮೇರಿಸ್ ಪಬ್ಲಿಕ್ ಶಾಲೆಯ ವಿರುದ್ಧದ ದೂರಿನ ಬಗ್ಗೆ ಸಿಎಂ ಕಚೇರಿಗೆ ಪತ್ರ ಬರೆದು ಸಂಪೂರ್ಣವಾಗಿ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಕೊನೆಗೂ ೪೦ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತಾಗಿದ್ದು, ಇನ್ನಾದ್ರೂ ಶಿಕ್ಷಣ ಇಲಾಖೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು.