ಕೊರಟಗೆರೆ:
ಬೇಸಿಗೆ ಆರಂಭವಾಗಿದ್ದು, ಈಗಾಗಲೇ ಹಲವೆಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಕಳೆದ ವರ್ಷ ಸಮೃದ್ಧಿ ಮಳೆಯಾಗಿದ್ದು, ಕೆರೆ- ಕಟ್ಟೆಗಳು ತುಂಬಿ ಹರಿದಿದ್ದವರು, ಆದ್ರೆ ರಣಬಿಸಿಲಿನಿಂದಾಗಿ ಕೆರೆ ಕಟ್ಟೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ನಗರ ಪ್ರದೇಶಗಳಲ್ಲಿ ನೀರಿಗಾಗೊ ಟ್ಯಾಂಕರ್ ಮೊರೆ ಹೋದ್ರೆ ಹಳ್ಳಿಗಳ್ಳಿಗಳಲ್ಲಿ ದೂರದ ಪ್ರದೇಶಗಳಿಗೆ ಹೋಗಿ ನೀರನ್ನು ತರುವ ಪರಿಸ್ಥಿತಿ ಇದ್ರೆ, ಇನ್ನು ಹಲವೆಡೆ ಹಳ್ಳದ ಕಲುಷಿತ ನೀರೇ ಅವರಿಗೆ ಆಧಾರವಾಗಿದೆ.
ಇನ್ನು ತುಮಕೂರಿನಲ್ಲೂ ನೀರಿನ ಅಭಾವ ಶುರುವಾಗಿದ್ದು, ಕೊರಟಗೆರೆ ತಾಲೂಕಿನ ಬುಕ್ಕಾಪಟ್ಟಣ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಹಾಲಿಂಗನಹಟ್ಟಿಯಲ್ಲಿ ನೀರಿಗಾಗಿ ಜನರರು ಪರದಾಡುವಂತಾಗಿದೆ. ಈ ಗ್ರಾಮದ ಜಿವಾಸಿಗಳು ಕುಡಿಯುವ ನೀರಿಗಾಗಿ ಸುಮಾರು ಒಂದೂವರೆ ಕಿಲೋ ಮೀಟರ್‌ವರೆಗೂ ನಡೆದುಕೊಂಡು ಹೋಗಿ ನೀರನ್ನು ತರುವ ದುಸ್ಥಿತಿ ಎದುರಾಗಿದೆ.
ಗ್ರಾಮದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಮನೆ ಮನೆಗೆ ನಲ್ಲಿಗಳನ್ನು ಹಾಕಲಾಗಿದೆ. ಆದ್ರೆ ಈ ಯೋಜನೆ ಸಂಪೂರ್ಣ ವಿಫಲವಾಗಿರುವ ಆರೋಪ ಕೇಳಿ ಬಂದಿದ್ದು, ನಲ್ಲಿಗಳಲ್ಲಿ ನೀರು ಬರ್ತಾ ಇಲ್ಲ ಎಂದು ಆಕ್ರೋಶ ಹೊರಹಾಕ್ತಿದ್ದಾರೆ. ಅಲ್ದೇ ಗ್ರಾಮದ ಹೊರವಲಯದಲ್ಲಿರೋ ಜಮೀನುಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿರೋ ಮನೆಗಳಿಗೆ ಜಲ ಜೀವನ್ ಮಿಷನ್ ಯೋಜನೆ ನೀಡಲಾಗಿಲ್ಲ, ನಮಗೆ ನೀರು ಕೊಡಿ ಅಂತಾ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡ್ರೆ ಕಿವಿಯೇ ಮೇಲಿಯೇ ಹಾಕಿಕೊಳ್ತಿಲ್ಲ ಎಂದು ನಾಗರಿಕರು ಆಕ್ರೋಶ ಹೊರಹಾಕ್ತಿದ್ದಾರೆ.