ದೇಶ:
ಫಹಲ್ಗಾಮ್ ಉಗ್ರರ ದಾಳಿ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಆತಂಕ ಸೃಷ್ಟಿಯಾಗಿದೆ. ಇತ್ತ ದೇಶದಲ್ಲಿ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನಿಡಲೇಬೇಕು ಅನ್ನೋ ಕೂಗು ಕೇಳಿಬರ್ತಿದೆ. ಮತ್ತೊಂದೆಡೆ ಪ್ರಧಾನಿ ಮೋದಿ ರಾಜತಾಂತ್ರಿಕ ಹೋರಾಟಕ್ಕೆ ಮುಂದಾಗಿದ್ದಾರೆ. ಈ ಕಾರಣಕ್ಕೆ ಮನ್ನೆಚರಿಕೆಯಾಗಿ ಕಣಿವೆ ಪ್ರದೇಶದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ರಕ್ಷಣಾ ಮತ್ತು ಪ್ರವಾಸಿಗರ ಹಿತ ದೃಷ್ಟಿಯಿಂದ ಕಾಶ್ಮೀರದ ಕೆಲ ಪ್ರವಾಸಿ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಇನ್ನು ಪ್ರವಾಸಿಗರಿಗೆ ಎದುರಾಗುವ ಬೆದರಿಕೆ ಗಮನದಲ್ಲಿರಿಸಿಕೊಂಡು ಕಾಶ್ಮೀರದಲ್ಲಿರುವ 87 ಉದ್ಯಾನವನಗಳಲ್ಲಿ 48 ಪ್ರವಾಸಿ ತಾಣಗಳನ್ನು ಸಾರ್ವಜನಿಕರಿಗೆ ಮುಚ್ಚಲಾಗಿದೆ. ಈ ಪ್ರದೇಶದಲ್ಲಿ ಭದ್ರತಾ ಪರಿಶೀಲನೆ ಪ್ರಕ್ರಿಯೆ ಸಾಗಿದ್ದು, ಮುಂದಿನ ದಿನದಲ್ಲಿ ನಿರ್ಬಂಧಿತ ಪಟ್ಟಿಯಲ್ಲಿ ಮತ್ತಷ್ಟು ಸ್ಥಳಗಳು ಸೇರಬಹುದು ಎನ್ನಲಾಗಿದೆ.
ಪ್ರವಾಸಿಗರಿಗೆ ಬಂದ್ ಆಗಿರುವ ತಾಣಗಳಲ್ಲಿ ಕಾಶ್ಮೀರದಿಂದ ದೂರ ಇರುವ ಪ್ರದೇಶಗಳು ಸೇರಿದಂತೆ ಕಳೆದ 10 ವರ್ಷದಿಂದ ಮುಕ್ತವಾಗಿದ್ದ ಕೆಲವು ಹೊಸ ತಾಣಗಳು ಕೂಡ ಸೇರಿವೆ ಎನ್ನಲಾಗುತ್ತಿದ್ದು, ದೂಷ್‌ಪತ್ರಿ, ಕೊಕರ್‌ನಾಗ್, ಡುಕ್ಸಮ್, ಸಿಂಥನ್ ಟಾಪ್, ಅಚ್ಚಬಲ್, ಬಂಗುಸ್ ಕಣಿವೆ, ಮಾರ್ಗನ್ ಟಾಪ್ ಮತ್ತು ತೋಸಮೈದಾನ್ ಸೇರಿದಂತೆ ಹಲವು ಪ್ರದೇಶಗಳಿಗೆ ಪ್ರವೇಶಕ್ಕೆ ಅನುಮತಿ ಇಲ್ಲದಾಗಿದೆ.