ಮಧುಗಿರಿ:
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಶ್ರಾವಂಡನಹಳ್ಳಿಯ ಧರ್ಮಶ್ರೀ ಪಬ್ಲಿಕ್ ಶಾಲೆಯಲ್ಲಿ ನವೀನ ಭಾರತ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಅತ್ಯಂತ ಸಂಭ್ರಮ, ಸಡಗರದಿಂದ ನಡೆಯಿತು. ವರ್ಷಪೂರ್ತಿ ಪಠ್ಯ ಚಟುವಟಿಕೆಗಳಲ್ಲಿ ಫುಲ್ ಬ್ಯೂಸಿಯಾಗಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಾರ್ಷಿಕೋತ್ಸವ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದ್ರು. ಪುಟಾಣಿಗಳ ನೃತ್ಯವೈಭವವನ್ನ ನೋಡಿ ಪೋಷಕರು ಫುಲ್ ಖುಷ್ ಆದರು.
ಈ ವೇಳೆ ಮಾತನಾಡಿದ ಧರ್ಮಶ್ರೀ ಪಬ್ಲಿಕ್ ಶಾಲಾ ಮುಖ್ಯಸ್ಥ ನವೀನ್ ಕುಮಾರ್ ಜಿ.ಆರ್, ಮಕ್ಕಳಿಗೆ ಶಿಕ್ಷಣದ ಜತೆ ಮನರಂಜನೆ ಅವಶ್ಯಕವಾಗಿದ್ದು ನಮ್ಮ ಸಂಸ್ಥೆಯು ಮಕ್ಕಳಿಗೆ ಪೂರಕ ವಾತರಣ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ಈ ಭಾಗದಲ್ಲಿ ಒಂದು ಶಿಕ್ಷಣ ಸಂಸ್ಥೆ ನಡೆಸಬೇಕು ಎಂಬುದು ನನ್ನ ಕನಸಿನ ಕೂಸಾಗಿತ್ತು. ಇದಕ್ಕೆ ನನ್ನ ಸ್ನೇಹಿತರು ಹಾಗೂ ಕುಟುಂಬಸ್ಥರು ಎಷ್ಟೇ ಕಷ್ಟ ಬಂದರು ಕೈ ಬಿಡದೆ ಈ ಸಂಸ್ಥೆಯನ್ನು ಬೆಳೆಸಲು ಸಹಕಾರ ನೀಡಿದ್ದಾರೆ. ಮಕ್ಕಳಲ್ಲಿ ಹೊಲಿಕೆ ಮಾಡುವದನ್ನು ತಪ್ಪಿಸಿ, ನಮ್ಮಿಂದಲ್ಲೂ ಸಾಧ್ಯ ಎಂಬ ಭಾವನೆಯನ್ನು ಮೂಡಿಸಬೇಕು. ಮಕ್ಕಳಿಗೆ ಶಿಕ್ಷಣದ ಜೊತೆ ದೇಶಾಭಿಮಾನ, ಸಂಸ್ಕಾರವೂ ಮುಖ್ಯ. ಪಠ್ಯದ ಜೊತೆ ಕ್ರೀಡೆ ಮತ್ತು ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಕೂಡ ಅವಶ್ಯಕ. ಮಕ್ಕಳ ಶಿಕ್ಷಣದ ವಿಚಾರದಲ್ಲಿ ರಾಜಿಯಾಗುವುದಿಲ್ಲ. ಇನ್ನಷ್ಟು ಶ್ರದ್ಧೆ ಮತ್ತು ಕಾಳಜಿ ವಹಿಸಿ ಕಲಿಕೆಗೆ ಪೂರಕ ವಾತವರಣ ಕಲ್ಪಿಸಲು ಶ್ರಮಿಸುತ್ತೇನೆ. ಇದು ನನ್ನ ಜೀವನದ ಕನಸಿಗೆ ಮತ್ತಷ್ಟು ಶಕ್ತಿ ತುಂಬಿದಂತಾಗಿದೆ ಎಂದರು.
ಇನ್ನು ನಿಸರ್ಗ ಜ್ಞಾನ ಮಂದಿರದ ಕಾರ್ಯದರ್ಶಿ ಶ್ರೀನಿವಾಸ್ ರೆಡ್ಡಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಒಂದು ಸಂಸ್ಥೆ ನಡೆಸುವುದು ಕಷ್ಟದ ಕೆಲಸ. ಇಂತಹ ಗಡಿ ಭಾಗದಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಸಂಸ್ಥೆ ನಡೆಸುತ್ತಿದ್ದು ಪೋಷಕರು ಇದಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದರು.
ಪಲ್ಲವಿ ಶಿವಕುಮಾರ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕರಾದ ನರಸಿಂಹ ರೆಡ್ಡಿ, ನರಸಿಂಹಯ್ಯ, ಶಿವರಾಮ ರೆಡ್ಡಿ, ಮುಖ್ಯ ಶಿಕ್ಷಕ ರಾಮಾಚಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.