ಆನ್ ಲೈನ್ ಬೆಟ್ಟಿಂಗ್ ನಿಂದ ಒಂದೇ ಕುಟುಂಬದ ಮೂವರು ಬಲಿಯಾಗಿರುವ ಘಟನೆ ಮೈಸೂರು ತಾಲ್ಲೂಕಿನ ಹಂಚ್ಯಾ ಗ್ರಾಮದಲ್ಲಿ ನಡೆದಿದೆ.. ಅಣ್ಣ ಜೋಶಿ ಆಂಥೋನಿ, ಸಹೋದರ ಜೋಬಿ ಆಂಥೋನಿ, ಈತನ ಪತ್ನಿ ಸ್ವಾತಿ ಅಲಿಯಾಸ್ ಶರ್ಮಿಳಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜೋಬಿ ಮತ್ತು ಶರ್ಮಿಳಾ ಅಪಾರ ಸಾಲದಲ್ಲಿ ಸಿಲುಕಿದ್ದರು. ಜೋಶಿ ಆಂಥೋನಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಸಹೋದರ ಮತ್ತು ಅವರ ನಾದಿನಿ ಆತ್ಮಹತ್ಯೆಗೆ ಶರಣಾಗಿದ್ಧಾರೆ.
ಜೋಶಿ ಆಂಟೋನಿ ತನ್ನ ತಮ್ಮ ಜೋಬಿ ಆಂಥೋನಿ ಮತ್ತು ನಾದಿನಿ ಶರ್ಮಿಳಾ ಮೇಲೆ ಮೋಸದ ಆರೋಪ ಹೊರಿಸಿ ನೇನು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಜೋಶಿ ಆಂಥೋನಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಸಹೋದರ ಜೋಬಿ ಆತನ ಪತ್ನಿ ಆರ್ಮಿಳಾ ಮೋಸದಿಂದ ನನ್ನ ಸಹೋದರಿ ಮೂಲಕ ಊರು ತುಂಬ ಸಾಲ ಪಡೆದು ಮೋಸ ಮಾಡಿದ್ದಾರೆ.
ನನ್ನ ಸಾವಿಗೆ ತಮ್ಮ ಜೋಬಿ ಆಂಥೋನಿ ಮತ್ತು ಆತನ ಪತ್ನಿ ಶರ್ಮಿಳಾ ಕಾರಣ. ಅವರಿಗೆ ಶಿಕ್ಷೆ ಕೊಡಿಸಿ ಎಂದು ವಿಡಿಯೋದಲ್ಲಿ ಹೇಳಿ ನೇಣಿಗೆ ಶರಣಾಗಿದ್ದಾನೆ. ನಿನ್ನೆ ತಮ್ಮ ನಾದಿನಿ ಮೇಲೆ ಆರೋಪಿಸಿ ಜೋಶಿ ಆಂಥೋನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಶರ್ಮಿಳಾ ವಿರುದ್ಧ ಆಂಥೋನಿ ಸಾಲದ ಆರೋಪ ಮಾಡಿದ್ದನು. ಐಪಿಎಲ್ ಆಟ ಆಡಿ ಸಾಲ ಮಾಡಿ ತಂಗಿಗೆ ಮೋಸ ಮಾಡಿದ್ದಾರೆ. ನನ್ನ ಸಾವಿಗೆ ತಮ್ಮ ಹಾಗೂ ಆತನ ಹೆಂಡತಿ ಕಾರಣ ಎಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಂಥೋನಿ ಸಾವಿನ ವಿಚಾರ ತಿಳಿದು ಇಂದು ಶರ್ಮಿಳಾ ಹಾಗೂ ಆತನ ಪತಿ ನೇಣಿಗೆ ಶರಣಾಗಿದ್ದಾರೆ.