ಮೈಸೂರು:
ಗೃಹಿಣಿಯೋರ್ವಳು ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವಂತಹ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಸಿಂಡೇನಹಳ್ಳಿಯಲ್ಲಿ ನಡೆದಿದೆ.
25 ವರ್ಷದ ರೇಷ್ಮಾ ಎಂಬುವರು ಆತ್ಮಹತ್ಯೆ ಶರಣಾಗಿರುವ ಮಹಿಳೆಯಾಗಿದ್ದಾರೆ. ಕಳೆದ 6 ವರ್ಷದ ಹಿಂದೆಯಷ್ಟೇ ಈರಯ್ಯನ ಕೊಪ್ಪಲು ನಿವಾಸಿ ಶ್ರೀನಿವಾಸ್ ಎಂಬುವವರ ಜೊತೆ ರೇಷ್ಮಾ ಮದುವೆಯಾಗಿತ್ತು. ಆದರೆ ರೇಷ್ಮಾ ಪತಿ ನಿತ್ಯ ಕುಡಿದು ಬಂದು ವರದಕ್ಷಿಣೆ ಕಿರುಕುಳ ನೀಡಿ ಜಗಳವಾಡುತ್ತಿದ್ದ ಇದರಿಂದ ಮನನೊಂದು ನೇಣಿಗೆ ಶರಣಾಗಿದ್ದಾಳೆ. ರೇಷ್ಮಾ ಸಾವಿಗೆ ಪತಿ ಹಾಗೂ ಆತನ ತಂದೆ ತಾಯಿ ಹಾಗೂ ಆತನ ಸಹೋದರ ಕಾರಣ ಎಂದು ರೇಷ್ಮಾ ಕುಟುಂಬಸ್ಥರು ಪತಿ ಕುಟುಂಬಸ್ಥರ ವಿರುದ್ದ ಆರೋಪಿಸುತ್ತಿದ್ದಾರೆ.
ಘಟನೆ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಣಸೂರು ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.