ಸಿನಿಮಾ :
ಇಂದು ತಾಯಂದಿರ ದಿನ. ಈ ವಿಶೇಷ ದಿನವೇ, ವಾಸುಕಿ ವೈಭವ್ ತಮ್ಮ ಅಭಿಮಾನಿಗಳಿಗೆ ಒಂದು ಅಚ್ಚುಮೆಚ್ಚಾದ ಸುದ್ದಿ ನೀಡಿದ್ದಾರೆ. ಹೌದು! ವಾಸುಕಿ ವೈಭವ್ ಹಾಗೂ ಅವರ ಪತ್ನಿ ಬೃಂದಾ ವಿಕ್ರಮ್ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಷಯವನ್ನು ವಾಸುಕಿ ವೈಭವ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪೋಸ್ಟ್‌ನಲ್ಲಿ ಅವರ ಪತ್ನಿ ಬೃಂದಾ ಅವರ ಬೇಬಿ ಬಂಪ್ ಲುಕ್‌ಕೂಡಾ ರಿವೀಲ್ ಆಗಿದೆ. ವಾಸುಕಿ ವೈಭವ್ ಅವರು 2023ರ ನವೆಂಬರ್ 16ರಂದು ತಮ್ಮ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಬೃಂದಾ ವಿಕ್ರಮ್ ಅವರನ್ನು ವಿವಾಹವಾಗಿದ್ದರು. ಬೃಂದಾ ವಿಕ್ರಮ್ ಅವರು ಮೂಲತಃ ರಂಗಭೂಮಿ ಕಲಾವಿದೆ. ಹಲವಾರು ನಾಟಕಗಳಲ್ಲಿ ಅಭಿನಯಿಸಿದರೂ ಅಲ್ಲದೆ, ಸ್ಟೇಜ್ ಶೋಗಳಲ್ಲಿಯೂ ಭಾಗವಹಿಸಿದ್ದಾರೆ. ಜೊತೆಗೆ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನೂ, ವಾಸುಕಿ ಮತ್ತು ಬೃಂದಾ ಪರಿಚಯ ಬೆಳೆದಿದ್ದು ಸಹ ರಂಗಭೂಮಿಯಲ್ಲಿ.ವಾಸುಕಿ ವೈಭವ್ ತಮ್ಮ ಜರ್ನಿ ಆರಂಭಿಸಿದ್ದೇ ರಂಗಭೂಮಿಯಲ್ಲಿ. ಬೃಂದಾ ಜೊತೆ ವಾಸುಕಿ ಸಹ ಹಲವು ನಾಟಕಗಳಲ್ಲಿ ಪ್ರದರ್ಶನ ಮಾಡಿದ್ದಾರೆ. ಬೃಂದಾ ನಟಿಸಿರುವ ನಾಟಕಗಳಿಗೆ ಮ್ಯೂಸಿಕ್ ಸಹ ಕೊಟ್ಟಿದ್ದಾರೆ. ಆಗಿಂದಲೂ ಇಬ್ಬರು ನಡುವೆ ಒಳ್ಳೆಯ ಒಡನಾಟ ಬೆಳೆದು, ಅದು ಮದುವೆಗೆ ತಿರುಗಿ ಇದೀಗ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ.