CRICKET : ಐಪಿಎಲ್ 2025ರ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 20 ರನ್‌ಗಳ ಜಯ ಸಾಧಿಸಿದ ನಂತರ ಮುಂಬೈ ಇಂಡಿಯನ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧದ ಕ್ವಾಲಿಫೈಯರ್ 2 ಪಂದ್ಯವನ್ನು ಅಧಿಕೃತವಾಗಿ ಲಗ್ಗೆಯಿಟ್ಟದೆ. ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಮುಂಬೈ, 20 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ ಭರ್ಜರಿ 228 ರನ್ ಗಳಿಸಿತು. ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರು ತಂಡದ ಗೆಲುವಿಗೆ ಬುನಾದಿ ಹಾಕಿದರೆ, ಉಳಿದ ಆಟಗಾರರು ಅದನ್ನು ಕಠಿಣಗೊಳಿಸಿದರು.
ರೋಹಿತ್ 50 ಎಸೆತಗಳಲ್ಲಿ 4 ಸಿಕ್ಸರ್, 9 ಬೌಂಡರಿಗಳೊಂದಿಗೆ 81 ರನ್ ಸಿಡಿಸಿದರು. ಜೊತೆಯಾಗಿ ಬೈರ್ಸ್ಟೋವ್ 22 ಎಸೆತಗಳಲ್ಲಿ 47 ರನ್, ಸೂರ್ಯಕುಮಾರ್ 33 ರನ್, ತಿಲಕ್ ವರ್ಮಾ 25, ಮತ್ತು ಹಾರ್ದಿಕ್ ಪಾಂಡ್ಯ (ನಾಟ್ ಔಟ್) 22 ರನ್ ಸೇರಿಸಿದರು.
ಗುಜರಾತ್ ಪರ ಪ್ರಸಿದ್ಧ್ ಕೃಷ್ಣ ಮತ್ತು ಸಾಯಿ ಕಿಶೋರ್ ತಲಾ 2 ವಿಕೆಟ್ ಪಡೆದರು, ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದರು. 229 ರನ್‌ಗಳ ಗುರಿ ಬೆನ್ನತ್ತಿದ ಗುಜರಾತ್ ಟೈಟನ್ಸ್, ಆರಂಭದಲ್ಲೇ ನಾಯಕ ಶುಭಮನ್ ಗಿಲ್ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಆದರೂ ಸಾಯಿ ಸುದರ್ಶನ್ ನೆಮ್ಮದಿಯಿಂದ ಆಟವಾಡಿ 49 ಎಸೆತಗಳಲ್ಲಿ 80 ರನ್ ಗಳಿಸಿದರು. ಅವರಿಗೆ ವಾಷಿಂಗ್ಟನ್ ಸುಂದರ್ ಉತ್ತಮ ಜೊತೆಯಾಟ ನೀಡಿದರೂ, ಬುಮ್ರಾದ ಯಾರ್ಕರ್‌ಗೆ ಕ್ಲೀನ್ ಬೌಲ್ಡ್ ಆದರು.
ಇದರ ಬೆನ್ನಲ್ಲೇ ಸುದರ್ಶನ್ ವಿಕೆಟ್ ಸಹ ಕುಸಿತವಾಗಿದ್ದು, ಗೆಲುವಿನ ಆಸೆ ನಿರಾಸೆಯಾಯಿತು. ನಂತರ ಶೆರ್ಫೇನ್ ರುದರ್ಫೋರ್ಡ್ (24), ರಾಹುಲ್ ತೆವಾಟಿಯಾ (16), ಶಾರುಖ್ ಖಾನ್ (13) ಪ್ರಯತ್ನಿಸಿದರೂ ವಿಫಲರಾದರು.
ಮುಂಬೈ ಪರ ಟ್ರೆಂಟ್ ಬೌಲ್ಟ್ 2 ವಿಕೆಟ್ ಕಿತ್ತರೆ, ಬುಮ್ರಾ, ಗ್ಲೀಸನ್, ಸ್ಯಾಂಟ್ನರ್ ಹಾಗೂ ಅಶ್ವನಿ ಕುಮಾರ್ ತಲಾ 1 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಫೈನಲ್ ಸ್ಥಾನಕ್ಕಾಗಿ ಪಂಜಾಬ್ ವಿರುದ್ಧ ಸೆಣಸಲಿದ್ದು, ಅಭಿಮಾನಿಗಳ ನಿರೀಕ್ಷೆ ತೂರಲಿದೆ. ಡೆವಿಲ್ ಶೈಲಿ ಪ್ರದರ್ಶಿಸಿದ ಮುಂಬೈ ತಂಡ ಈಗ ಟೈಟಲ್ ಗೆಲುವಿನತ್ತ ದೃಷ್ಟಿ ಹರಿಸಿದೆ.