ಶಿರಾ : ಕಾರ್ಮಿಕರ ಭವನ ನಿರ್ಮಾಣಕ್ಕೆ ಅನುದಾನ ಕೊಟ್ಟ ಶಾಸಕ ಜಯಚಂದ್ರ

ಕಾರ್ಮಿಕರಿಗೆ ಕಿಟ್‌ ವಿತರಿಸಿದ ಶಾಸಕ ಟಿ.ಬಿ ಜಯಚಂದ್ರ
ಕಾರ್ಮಿಕರಿಗೆ ಕಿಟ್‌ ವಿತರಿಸಿದ ಶಾಸಕ ಟಿ.ಬಿ ಜಯಚಂದ್ರ
ತುಮಕೂರು

ಶಿರಾ:

ಶಿರಾ ನಗರದ ಕೋಟೆ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಸಕ ಟಿ,ಬಿ ಜಯಚಂದ್ರ ಕಾರ್ಮಿಕರ ಕಿಟ್‌ ವಿತರಿಸಿದರು. ಈ ವೇಳೆ ನಗರಸಭೆ ಸದಸ್ಯರು , ಕಾರ್ಮಿಕ ನಿರೀಕ್ಷಕ ಸೈಯದ್, ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷರಾದ ನಾಗರಾಜ್, ಬೇಬಿರಾಣಿ, ನಗರ ಅಶ್ರಯ ಸಮಿತಿ ಸದಸ್ಯೆ ಜಯಲಕ್ಷ್ಮಿ ಸೇರಿ ಮತ್ತಿತರ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಶಾಸಕ ಟಿ.ಬಿ.ಜಯಚಂದ್ರ, ಶಿರಾ ನಗರದಲ್ಲಿ ಸುಸಜ್ಜಿತವಾದ ಕಾರ್ಮಿಕರ ಭವನ ನಿರ್ಮಾಣಕ್ಕೆ ಅನುದಾನವನ್ನು ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ಕಟ್ಟಡ ಕಾರ್ಮಿಕರಿಗೆ ಶಿರಾ ನಗರದಲ್ಲಿ ಮೂರು ಎಕರೆ ಜಾಗದಲ್ಲಿ ನಿವೇಶನ ಕೊಡಲಾಗುವುದು. ಅಲ್ಲದೇ ಕಟ್ಟಡ ಕಾರ್ಮಿಕರು ಸೌಲಭ್ಯ ಪಡೆಯಲು ಮಂಡಳಿಯ ಸದಸ್ಯರಾಗಿ ಸದಸ್ಯತ್ವವನ್ನು ಪಡೆದು ಪ್ರತಿವರ್ಷ ನವೀಕರಣ ಮಾಡಿಕೊಂಡು ಇರುವ ಸೌಲಭ್ಯಗಳನ್ನು ಪಡೆಯಬೇಕಿದೆ ಎಂದರು.

Author:

share
No Reviews