ಬಾಯಲ್ಲಿಟ್ಟರೆ ಕರಗುವ ಸಾಂಪ್ರದಾಯಿಕ ಶೈಲಿಯ ಹಾಲುಬಾಯಿ ಮಾಡುವ ವಿಧಾನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಆರೋಗ್ಯ-ಜೀವನ ಶೈಲಿ

ಹಾಲುಬಾಯಿ ಕರ್ನಾಟಕದ ವಿಶಿಷ್ಟ ಸಿಹಿ ತಿನಿಸು. ಹಾಲುಬಾಯಿ ಅಕ್ಕಿಯಿಂದ ತಯಾರಿಸುವ ಖಾದ್ಯ. ಹಾಲುಬಾಯಿಯನ್ನು ಹಲವಾರು ಮನೆಗಳಲ್ಲಿ ಹಬ್ಬದ ಸಿಹಿ ಅಥವಾ ವಿಶೇಷ ಕಾರ್ಯಕ್ರಮಗಳನ್ನು ಆಚರಿಸಲು ತಯಾರಿಸಲಾಗುತ್ತದೆ. ಮೂಲತಃ, ಇದು ಉಡುಪಿ ಮತ್ತು ಮಂಗಳೂರು ಪಾಕಪದ್ಧತಿಯ ಜನಪ್ರಿಯ ಖಾದ್ಯಗಳಲ್ಲಿ ಒಂದಾಗಿದೆ. ಮಲೆನಾಡು ಮತ್ತು ಕರಾವಳಿಯ ಭಾಗಗಳಲ್ಲಿ ಇದನ್ನು ಅಕ್ಕಿ ಮಣ್ಣಿ ಎನ್ನುವ ಹೆಸರಿನಿಂದ ಕರೆಯುತ್ತಾರೆ. 

ಹಾಲುಬಾಯಿಯನ್ನು ಹೇಗೆ ತಯಾರಿಸಲಾಗುವುದೆಂದರೆ:

ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೆನೆಸಿಟ್ಟು, ನಂತರ  ಮಿಕ್ಸಿ ಜಾರಿಗೆ ಅಕ್ಕಿ ಹಾಗೂ ತೆಂಗಿನ ಹಾಲನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು , ಒಂದು ಬಾಣಲೆಗೆ ತುಪ್ಪ  ಹಾಕಿ  ಅದಕ್ಕೆ ರುಬ್ಬಿದ ಹಿಟ್ಟು ಹಾಕಿಕೊಳ್ಳಿ, ತದನಂತರ ದಪ್ಪ ತೆಂಗಿನಹಾಲು ಅಗತ್ಯವಿರುವಷ್ಟು ಬೆಲ್ಲ, ಏಲಕ್ಕಿ ಪುಡಿಯನ್ನು ಸೇರಿಸಿ ಸಣ್ಣಗೆ ಉರಿಯಲ್ಲಿ ಬೇಯಿಸಿಕೊಳ್ಳಿ . ಈ ಮಿಶ್ರಣವು ಗಂಟಾಗದಂತೆ ನೋಡಿಕೊಂಡು  ಸ್ವಲ್ಪ ಸಮಯದ ನಂತರ ಹಿಟ್ಟು ದಪ್ಪಗಾಗುತ್ತದೆ, ಇದಕ್ಕೆ ಒಂದೆರಡು ಚಮಚ ತುಪ್ಪ ಹಾಕಿ ಮತ್ತೆ ಚೆನ್ನಾಗಿ ಕಲಸಿಕೊಳ್ಳಿ.ಈ ಹಿಟ್ಟು ಗಟ್ಟಿಯಾಗುತ್ತಿದ್ದಂತೆ ಒಂದು ದೊಡ್ಡದಾದ ಪ್ಲೇಟಿನ ಮೇಲೆ ಬಾಳೆಎಲೆ ಇಟ್ಟು ತುಪ್ಪ ಸವರಿಕೊಳ್ಳಿ. ಇದಕ್ಕೆ ಈ ಮಿಶ್ರಣವನ್ನು ಹಾಕಿ ಹರಡಿಕೊಳ್ಳಿ. ತಣ್ಣಗಾದ ಬಳಿಕ ಬೇಕಾದ ಆಕಾರದಲ್ಲಿ ಕತ್ತರಿಸಿದರೆ ಅಕ್ಕಿ ಹಾಲುಬಾಯಿ ಸವಿಯಲು ಸಿದ್ಧ. ಗೋಡಂಬಿ ಅಥವಾ ಬಾದಾಮಿ ತುಂಡನ್ನು ಹಾಲುಬಾಯಿಯ ಮೇಲೆ ಜೋಡಿಸಬಹುದು.

ಹಾಲುಬಾಯಿಯಲ್ಲಿ ಬಳಸುವ ಬೆಲ್ಲ ನೈಸರ್ಗಿಕ ವಾಗಿರುವುದರಿಂದ ಸಕ್ಕರೆ ಖಾಯಿಲೆ ಹೊಂದಿರುವವರೂ ಸಹ ಹಾಲುಬಾಯಿಯನ್ನು ಆತಂಕವಿಲ್ಲದೆ ತಿನ್ನಬಹುದು. ತೆಂಗಿನ ಹಾಲಿನ ಬಳಕೆಯಿಂದಾಗಿ ಬೇಗ ಹಾಳಾಗುತ್ತದೆ. ಆದ್ದರಿಂದ ಇದನ್ನು ಉಪಹಾರ ಗೃಹಗಳು ಅಥವಾ ಬೇಕರಿಗಳಲ್ಲಿ ಸಂಗ್ರಹಿಸಿ ಇಡುವುದಿಲ್ಲ. 

 

Author:

...
Editor

ManyaSoft Admin

Ads in Post
share
No Reviews