ಮಂಡ್ಯ : ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಮತ್ತಷ್ಡು ಏರಿಕೆ | 17,544 ಕ್ಯೂಸೆಕ್ ಒಳಹರಿವು

ಮಂಡ್ಯ : ಇಂದು ಕಾವೇರಿ ಜಲಾನಯನ ಪ್ರದೇಶದಲ್ಲಿ ಸಂಭವಿಸಿರುವ ನಿರಂತರ ಮಳೆಯ ಪರಿಣಾಮವಾಗಿ ಕನ್ನಂಬಾಡಿ ಕೆಆರ್‌ಎಸ್‌ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಡ್ಯಾಂನ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ನೆನ್ನೆ 102.00 ಅಡಿ ಇದ್ದ ಡ್ಯಾಂನ ನೀರಿನ ಮಟ್ಟ ಇಂದು 103.70 ಅಡಿಗೆ ಏರಿಕೆಯಾಗಿದೆ. ಗರಿಷ್ಠ ನೀರಿನ ಮಟ್ಟ 124.80 ಅಡಿಯಾಗಿರುವ ಕೆಆರ್‌ಎಸ್ ಡ್ಯಾಂಗೆ ಇಂದು 17,544 ಕ್ಯೂಸೆಕ್ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಇದರಿಂದಾಗಿ ಜಲಾಶಯದಲ್ಲಿ ಈಗಾಗಲೇ 25.851 ಟಿಎಂಸಿ ನೀರು ಸಂಗ್ರಹವಾಗಿದೆ. ಇದು ಡ್ಯಾಂನ ಒಟ್ಟು ಸಾಮರ್ಥ್ಯವಾದ 49.452 ಟಿಎಂಸಿಯ ಅರ್ಧಕ್ಕಿಂತಲೂ ಹೆಚ್ಚಿನದಾಗಿದೆ.

ಇದಕ್ಕಾಗಿ, ಈಗ ಡ್ಯಾಂನಿಂದ 735 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ. ಜೂನ್ ತಿಂಗಳ ಮೊದಲ ದಿನವೇ ಡ್ಯಾಂ ಅರ್ಧಭರ್ತಿಯಾಗಿರುವುದು ರೈತರು ಹಾಗೂ ಕುಡಿಯುವ ನೀರಿನ ಅವಲಂಬಿತ ಪ್ರದೇಶಗಳಿಗೆ ಹರ್ಷದ ಸಂಗತಿಯಾಗಿದೆ.

ಇಂದಿನ ಕೆಆರ್‌ಎಸ್ ಸ್ಥಿತಿಗತಿ, ಗರಿಷ್ಠ ಮಟ್ಟ: 124.80 ಅಡಿ ಇಂದಿನ ನೀರಿನ ಮಟ್ಟ: 103.70 ಅಡಿ, ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ, ಪ್ರಸ್ತುತ ಸಂಗ್ರಹ: 25.851 ಟಿಎಂಸಿ ಮಳೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ನೀರಿನ ಮಟ್ಟದಲ್ಲಿ ಇನ್ನಷ್ಟು ಏರಿಕೆ ಸಂಭವಿಸುವ ಸಾಧ್ಯತೆ ಇದೆ.

 

Author:

...
Keerthana J

Copy Editor

prajashakthi tv

share
No Reviews