ಉತ್ತರ ಕನ್ನಡ:
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ದುಂಡಸಿನಗರದ ಸರ್ಕಾರಿ ಆಸ್ಪತ್ರೆಯ ಬಳಿ ಕ್ಷುಲ್ಲಕ ಕಾರಣಕ್ಕೆ KSRTC ಬಸ್ ನಲ್ಲೇ ವ್ಯಕ್ತಿಗೆ ಚಾಕು ಇರಿದು ಹತ್ಯೆಗೈದಿರುವ ಘಟನೆ ನಡೆದಿದೆ.
ಗಂಗಾಧರ ಎನ್ನುವ ವ್ಯಕ್ತಿಯನ್ನು ಹತ್ಯೆಗೈಯಲಾಗಿದೆ. ಹೆಂಡತಿ ಜೊತೆ ಮಾವನ ಮನೆಯಿಂದ ಬೆಂಗಳೂರಿಗೆ ವಾಪಸ್ ಬರುತ್ತಿದ್ದ ವ್ಯಕ್ತಿ ಬಸ್ನಲ್ಲೇ ಕೊಲೆಯಾಗಿದ್ದಾನೆ. ಕೊಲೆ ಮಾಡಿದ ವ್ಯಕ್ತಿಯನ್ನು ಪ್ರೀತಮ್ ಡಿಸೋಜಾ ಎಂದು ತಿಳಿದುಬಂದಿದೆ. ಕೊಲೆ ಆರೋಪಿ ಪ್ರೀತಮ್ ಡಿಸೋಜಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಶಿರಸಿ ಸರ್ಕಾರಿ ಆಸ್ಪತ್ರೆ ಬಳಿ ಬಸ್ನಲ್ಲಿ ಸಣ್ಣ ಕಿರಿಕ್ ನಡೆದಿದ್ದು. ಈ ವೇಳೆ ಹೆಂಡತಿ ಜೊತೆ ಇದ್ದ ಗಂಗಾಧರ್ ಮೇಲೆ ಪ್ರೀತಮ್ ಡಿಸೋಜಾ ಚಾಕುವಿನಿಂದ ಅಟ್ಯಾಕ್ ಮಾಡಿ ಹತ್ಯೆ ಮಾಡಿದ್ದಾನೆ.
ಕೊಲೆಯಾದ ಗಂಗಾಧರ್ ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದವನು. ಈತನಿಗೆ ಕಳೆದ 6 ತಿಂಗಳ ಹಿಂದೆ ಶಿರಸಿಯ ಅಚ್ಚನಳ್ಳಿ ಮೂಲದ ಯುವತಿ ಜೊತೆ ವಿವಾಹವಾಗಿತ್ತು. ಇನ್ನು ಗಂಗಾಧರ್ ಹತ್ಯೆಗೆ ಆತನ ಹೆಂಡತಿಯ ಪ್ರೇಮ ಪ್ರಕರಣವೇ ಕೊಲೆಗೆ ಮುಖ್ಯ ಕಾರಣ ಅಂತ ಹೇಳಲಾಗ್ತಿದೆ.
ಇನ್ನು ಕೊಲೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಶಿರಸಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ. ಅಷ್ಟರಲ್ಲಾಗಲೇ ಕೊಲೆ ಆರೋಪಿ ಪ್ರೀತಮ್ ಸ್ಥಳದಿಂದ ಎಸ್ಕೇಪ್ ಆಗಿದ್ದ. ಆದರೆ ಮಿಂಚಿನ ವೇಗದಲ್ಲಿ ತನಿಖೆ ಆರಂಭಿಸಿದ ಪೊಲೀಸರು, ಕೇವಲ 2 ಗಂಟೆಯಲ್ಲೇ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕವಷ್ಟೇ ಕೊಲೆಗೆ ನಿಖರ ಕಾರಣ ಏನು ಅನ್ನೋದು ತಿಳಿದು ಬರಲಿದ