ಬೆಳಗಾವಿ:
ಅಕ್ಕನ ಮಗಳ ಮದುವೆಗೆ ರಜೆ ನೀಡದ ಹಿನ್ನೆಲೆ ಬಸ್ನಲ್ಲೇ ಚಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಡಿಪೋದ 2ನೇ ಘಟಕದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಔರಾದಿ ಎಂಬ ಗ್ರಾಮದ ಬಾಲಚಂದ್ರ ಹುಕ್ಕೋಜಿ ಎಂಬ ವ್ಯಕ್ತಿಯು ಕೆ ಎಸ್ ಆರ್ ಟಿ ಸಿ ಬಸ್ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು.
ಅಕ್ಕನ ಮಗಳ ಮದುವೆಗೆ ರಜೆ ಕೇಳಿದ್ದಕ್ಕೆ ಡಿಪೋ ಮ್ಯಾನೇಜರ್ ರಜೆ ನೀಡದ ಕಾರಣ, ಎಂದಿನಂತೆ ಬೆಳಿಗ್ಗೆ 6 ಗಂಟೆಗೆ ಕೆಲಸಕ್ಕೆ ಬಂದು, ಲಾಗ್ಶೀಟ್ ಕೂಡ ತೆಗೆದುಕೊಂಡು ಬಸ್ ತರಲು ಹೋಗಿ ಡಿಪೋವಿನ ಎರಡರಲ್ಲಿ ಘಟಕದಲ್ಲಿ ನಿಂತಿದ್ದ ಬಸ್ ಗಳ ಪೈಕಿ ಒಂದರಲ್ಲಿ ನೇಣಿಗೆ ಶರಣಾಗಿದ್ದಾರೆ. ಡಿಪೋ ಮ್ಯಾನೇಜರ್ ಸೇರಿದಂತೆ ಅಧಿಕಾರಿಗಳ ವಿರುದ್ಧ ಆಕ್ರೋಷ ವ್ಯಕ್ತವಾಗಿದೆ. ಬೇರೊಬ್ಬ ಚಾಲಕ ಬಸ್ ತರಲು ಹೋದಾಗ ಇದನ್ನು ನೋಡಿ ತಕ್ಷಣ ಪೋಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಇನ್ನು ಈ ಪ್ರಕರಣ ಬೆಳಗಾವಿಯ ಮಾರ್ಕೆಟ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.