ತುಮಕೂರು:
ತುಮಕೂರು ನಗರದ ಜೆ.ಸಿ ನಗರದಲ್ಲಿರೋ ಸಿದ್ದಿ ವಿನಾಯಕ ಮಾರ್ಕೆಟ್ ಜಾಗದ ವಿಚಾರ ದಿನದಿಂದ ದಿನಕ್ಕೆ ಗದ್ದಲ ಜೋರಾಗ್ತಾನೆ ಇದೆ. ಮೊನ್ನೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಸ್ಥಳ ವೀಕ್ಷಣೆ ಮಾಡಿ ಸುದ್ದಿಗೋಷ್ಠಿ ನಡೆಸುವ ಮೂಲಕ ಕಮಿಷನ್‌ಗಾಗಿ ಮಾಲ್ ನಿರ್ಮಾಣಕ್ಕೆ ಶಾಸಕ ಜ್ಯೋತಿ ಗಣೇಶ್ ಕುಮ್ಮಕ್ಕು ಇದೆ ಎಂದು ಆರೋಪ ಮಾಡಿದ್ರು. ಇದ್ರಿಂದ ಕೆರಳಿದ ಪ್ರಗತಿ ಪರ ಸಂಘಟನೆಗಳು ಕೋಮು ಬಣ್ಣ ಬಳಿಯದಂತೆ ಎಸ್‌ಪಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ರು.
ಹಿಂದೂಪರ ಸಂಘಟನೆಗಳ ಮುಖಂಡರು ನಡೆಸಿದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರೋ ಪ್ರಗತಿಪರ ಸಂಘಟನೆ ಮುಖಂಡರು, ಜೆ ಸಿ ರಸ್ತೆಯಲ್ಲಿ ಸಿದ್ಧಿ ವಿನಾಯಕ ಮಾರ್ಕೆಟ್ ಜಾಗೋ ವಿಷಯಕ್ಕೆ ಕೋಮು ಬಣ್ಣ ಬಳಿಯುತ್ತಿದ್ದಾರೆ ಎಂದು ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಸ್‌ಪಿ ಅಶೋಕ್‌ಗೆ ಪ್ರಗತಿಪರ ಸಂಘಟನೆಕಾರರು ಮನವಿ ಪತ್ರ ಸಲ್ಲಿಸಿದ್ರು. ಈ ವೇಳೆ ಮಾತನಾಡಿದ ಪ್ರಗತಿಪರ ಸಂಘಟನೆಗಳ ಮುಖಂಡ ನಗರ ಹೃದಯ ಭಾಗದಲ್ಲಿರುವ ನೂರಾರು ಕೋಟಿ ಬೆಲೆಬಾಳುವ ಜಾಗವನ್ನು ವಿಷಯ ಈಗಾಗಲೇ ನ್ಯಾಯದಲ್ಲಿ ವಿಚಾರಣೆ ಹಂತದಲ್ಲಿ. ಈ ಸಂದರ್ಭದಲ್ಲಿ ಈ ವಿಷಯವನ್ನು ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ ಚರ್ಚಿಸುವುದು ನ್ಯಾಯಾಂಗ ನಿಂದನೆಯಾಗುತ್ತದೆ. ಇದು ಸಾಮಾನ್ಯ ಜ್ಞಾನ ಇದ್ದು ಕಾನೂನು ಉಲ್ಲಂಘಿಸಿದ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಹೀಗಾಗಿ ಅವರ ವಿರುದ್ಧ ಕೂಡಲೇ ಕ್ರಮ ವಹಿಸಬೇಕೆಂದು ತಿಳಿಸಿದ್ರು.
ಇನ್ನುಮಂಜು ಬಾರ್ಗವ ಮತ್ತು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲ ಹಿಂದೂವಾದಿ ಪರ ಸಂಘಟನೆಗಳ ಖಂಡಿಸಿ ಮೇಲೆ ಸ್ವಯಂ ಪ್ರೇರಿತ ಮೋಕದ್ದಮೆ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ತುಮಕೂರು ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದರು.