ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಕೊನೆಯ ಘಟದತ್ತ ತಲುಪಿದೆ. ಪ್ರಯಾಗ್ರಾಜ್ನಲ್ಲಿ 2025ರ ಜನವರಿ 14ರಿಂದ ಮಹಾ ಕುಂಭ ಮೇಳ ಆರಂಭವಾಗಿದ್ದು, 2025ರ ಫೆಬ್ರವರಿ 26ರಂದು ಮುಕ್ತಾಯಗೊಳ್ಳಲಿದೆ. ವಿಶ್ವ ವಿಖ್ಯಾತ ಮಹಾಕುಂಭಮೇಳ ಭಕ್ತರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ದಿನ ಕಳೆದಂತೆ ಭಕ್ತ ಸಾಗರ ತ್ರಿವೇಣಿ ಸಂಗಮದಲ್ಲಿ ಮಿಂದು ಪುನೀತರಾಗುತ್ತಿದ್ದಾರೆ. ಕುಂಭಮೇಳದ ಪ್ರಯುಕ್ತ ಪ್ರಯಾಗರಾಜ್ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವ ಭಕ್ತಾದಿಗಳ ಸಂಖ್ಯೆ ನಿರೀಕ್ಷೆಗೂ ಮೀರಿ ಗಣನೀಯವಾಗಿ ಏರಿಕೆಯಾಗುತ್ತಿದೆ. ವಿಶ್ವ ವಿಖ್ಯಾತ ಈ ಮಹಾಕುಂಭಮೇಳ ಮುಕ್ತಾಯಕ್ಕೆ ಇನ್ನೇನು ಕೇವಲ ೩ನೇ ದಿನಗಳು ಬಾಕಿ ಇದೆ.
ಇದುವರೆಗೆ ಸುಮಾರು 60 ಕೋಟಿಗೂ ಅಧಿಕ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ. ಮಹಾಕುಂಭಮೇಳ 144 ವರ್ಷಗಳ ಶತಮಾನದ ಸಂಭ್ರಮ. ಕೋಟ್ಯಂತರ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಹೀಗೆ ಧಾರ್ಮಿಕ ಲೋಕವೇ ಅನಾವರಣಗೊಂಡಿರೋ ಮಹಾಕುಂಭಮೇಳ ಮುಕ್ತಾಯಗೊಳ್ಳಲು ಕೆಲ ದಿನಗಳಷ್ಟೇ ಬಾಕಿ ಇದೆ. ಕಳೆದ ಜನವರಿ13ರಿಂದ ಆರಂಭವಾಗಿರೋ ಪ್ರಯಾಗ್ರಾಜ್ ಮಹಾಕುಂಭಮೇಳ ಕೊನೆಯ ಘಟ್ಟಕ್ಕೆ ಬಂದು ತಲುಪಿದೆ. ಇಂದು 42 ದಿನಕ್ಕೆ ಕಾಲಿಟ್ಟ ಮಹಾಕುಂಭಮೇಳ ಫೆಬ್ರವರಿ 26 ಮಹಾಶಿವರಾತ್ರಿಯ ದಿನ ಮುಕ್ತಾಯಗೊಳ್ಳಲಿದೆ. ಈಗಾಗಲೇ ತ್ರಿವೇಣಿ ಸಂಗಮದಲ್ಲಿ 60 ಕೋಟಿಗೂ ಅಧಿಕ ಭಕ್ತರು ಮಿಂದೇಳಿದ್ದಾರೆ. ಪುಣ್ಯಸ್ನಾನದಿಂದ ಪಾಪ-ಕರ್ಮಗಳು ಕಳೆಯುತ್ತವೆ ಅನ್ನೋದು ಭಕ್ತರ ನಂಬಿಕೆಯಾಗಿದೆ.
ಕೋಟಿ ಕೋಟಿ ಭಕ್ತರನ್ನ ತನ್ನತ್ತ ಸೆಳೆಯುತ್ತಿರೋ ಪ್ರಯಾಗ್ರಾಜ್ ಮಹಾಕುಂಭಮೇಳಕ್ಕೆ ಈಗಾಗಲೇ ಬಾಲಿವುಡ್ನ ಸೂಪರ್ಸ್ಟಾರ್ಗಳು ಆಗಮಿಸಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಈ ಲಿಸ್ಟ್ಗೆ ಬಾಲಿವುಡ್ನ ಮಿಲ್ಕಿ ಬ್ಯೂಟಿ ತಮನ್ನಾ ಕೂಡ ಸೇರಿದ್ದಾರೆ. ಮಹಾ ಕುಂಭಮೇಳಕ್ಕೆ ಆಗಮಿಸಿದ ತಮನ್ನಾ ಹಾಗೂ ಕನ್ನಡದ ನಟ ವಸಿಷ್ಟ ಸಿಂಹ ಒಟ್ಟಾಗಿ ಪುಣ್ಯ ಸ್ನಾನ ಮಾಡಿದ್ದಾರೆ.