ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಜಾರಿ ಮಾಡುವಂತೆ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ ಆಗ್ರಹಿಸಿದ್ದಾರೆ. ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಕೊರಟಗೆರೆ ಒಕ್ಕೂಟ ಸುದ್ದಿಗೋಷ್ಟಿ ಮೂಲಕ ಒತ್ತಾಯಿಸಿದ್ರು. ಸುದ್ದಿಗೋಷ್ಟಿಯಲ್ಲಿ ದಲಿತ ಮುಖಂಡರಾದ ದೊಡ್ಡಯ್ಯ, ವೀರಕ್ಯಾತರಾಯ, ನರಸಿಂಹಮೂರ್ತಿ, ಶಿವರಾಮಯ್ಯ, ಜಗದೀಶ್, ಮಂಜುನಾಥ ಸೇರಿ ಹಲವರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ದಲಿತ ಸಂರಕ್ಷಣಾ ಸಮಿತಿ ರಾಜ್ಯ ಸಂಚಾಲಕ ಟೈಗರ್‌ನಾಗ್, ಒಳಮೀಸಲಾತಿ ಹೋರಾಟಗಾರರ ಮೇಲೆ ದಬ್ಬಾಳಿಕೆ ನಡೆಸಿರುವ ಡಿವೈಎಸ್ಪಿ ಶಿವಕುಮಾರ್ ನಡೆ ಖಂಡನೀಯ. ಕೊರಟಗೆರೆಯಿಂದ ಮಾರ್ಚ್ 19 ರಂದು ರಾಜ್ಯಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ನಾವು ಸಿದ್ದರಿದ್ದೇವೆ ಎಂದು ತಿಳಿಸಿದ್ರು. ಅಲ್ದೇ ಒಳಮೀಸಲಾತಿ ಪ್ರಕ್ರಿಯೆಯನ್ನು ಕರ್ನಾಟಕ ಸರ್ಕಾರ ತ್ವರಿತವಾಗಿ ಜಾರಿ ಮಾಡದೇ ಇದ್ದರೇ ಕೊರಟಗೆರೆ ಕ್ಷೇತ್ರದಿಂದಲೇ ಮತ್ತೇ ಹೋರಾಟದ ರೂಪುರೇಷು ಸಿದ್ದವಾಗುತ್ತೇ.ರಾಜ್ಯದ ಸಿಎಂ ಸಿದ್ದರಾಮಯ್ಯ ಮತ್ತು ಗೃಹಸಚಿವ ಡಾ.ಜಿ.ಪರಮೇಶ್ವರ್ ನಮ್ಮ ಮನವಿಯನ್ನು ಆಲಿಸಿ ಚುನಾವಣೆ ವೇಳೆ ನೀಡಿದ ಭರವಸೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ರು.
ಕೊರಟಗೆರೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ ಮಾತನಾಡಿ ದಲಿತಪರ ಸಂಘಟನೆಗಳ 35ವರ್ಷದ ಹೋರಾಟದ ಪ್ರತಿಫಲಕ್ಕೆ ಸುಪ್ರಿಂಕೋರ್ಟ್ ನಮ್ಮ ಪರವಾಗಿ ಆದೇಶ ಮಾಡಿದೆ.ರಾಜ್ಯ ಸರಕಾರ ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಬೇಕು. ಇಲ್ಲವಾದ್ರೇ ಹೋರಾಟ ಅನಿವಾರ್ಯ ಎಂದ್ರು.
ಕೊರಟಗೆರೆ ದಲಿತ ಮುಖಂಡ ವೆಂಕಟೇಶ್ ಮಾತನಾಡಿ ಒಳಮೀಸಲಾತಿ ಜಾರಿ ಮಾಡಿ ಅಥವಾ ಖುರ್ಚಿ ಖಾಲಿ ಮಾಡಿ ಎಂಬ ಧ್ಯೆಯದೊಂದಿಗೆ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ಸಮಾವೇಶ ಮಾರ್ಚ್19ರಂದು ಬೆಂಗಳೂರಿನ ಪ್ರೀಡಂಪಾರ್ಕ್‌ನಲ್ಲಿ ನಡೆಯಲಿದೆ. ಸುಪ್ರೀಂಕೋರ್ಟಿನ ಆದೇಶವನ್ನು ತೆಲಂಗಣ ಮತ್ತು ಆಂದ್ರಪ್ರದೇಶ ರಾಜ್ಯ ಜಾರಿಗೆ ತಂದಿವೆ. ಆದರೇ ಕರ್ನಾಟಕ ಸರ್ಕಾರ ರಾಜಕೀಯ ಕುತಂತ್ರದಿಂದ ಮೂಲೆಗುಂಪು ಮಾಡಿದೆ ಎಂದು ಆರೋಪ ಮಾಡಿದರು.