MADHUGIRI: ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರಿದ್ರೂ ಸರಿಯಾಗಿ ಸಿಗದ ಆರೋಗ್ಯ ಸೇವೆ

ಸಾರ್ವಜನಿಕ ಆಸ್ಪತ್ರೆ ಮಧುಗಿರಿ
ಸಾರ್ವಜನಿಕ ಆಸ್ಪತ್ರೆ ಮಧುಗಿರಿ
ತುಮಕೂರು

ಮಧುಗಿರಿ: 

ಮಧುಗಿರಿ ತಾಲೂಕು ಹೇಳಿಕೇಳಿ ಬರಪೀಡಿತ ತಾಲೂಕು. ಸಾಮಾನ್ಯವಾಗಿ ಬಡಜನರೇ ಈ ತಾಲೂಕಿನಲ್ಲಿ ಹೆಚ್ಚಿದ್ದಾರೆ. ಆದ್ರೆ ಇಲ್ಲಿನ ಬಡರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಿಕೊಡಬೇಕಿದ್ದ ಸರಕಾರಿ ಆಸ್ಪತ್ರೆಯೇ ಅನಾರೋಗ್ಯ ಪೀಡಿತವಾಗಿದ್ದು, ರೋಗಿಗಳ ಹಿಡಿಶಾಪಕ್ಕೆ ಗುರಿಯಾಗ್ತಿದೆ.

ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಕಲ ಸೌಲಭ್ಯಗಳಿದ್ದರೂ ಇಲ್ಲಿ ಸೂಕ್ತ ವೈದ್ಯರ ಸೇವೆ ಸಿಗದೇ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಹೆರಿಗೆಗೆ ಬರುವ ಮಹಿಳೆಯರಿಗೆ ಬಿಳಿ ರಕ್ತ ಕಣ ಕಡಿಮೆ ಇದೆ. ಮಗು ತಲೆ ಕಾಣುತ್ತಿಲ್ಲ. ಮಗು ಹೊಟ್ಟೆಯಲ್ಲಿ ಕರುಳು ಸುತ್ತಿಕೊಂಡಿದೆ, ಎಮರ್ಜಿನ್ಸಿ ಇದೆ ತುಮಕೂರಿಗೆ  ಹೋಗಿ. ಹೀಗೆ ಏನೇನೋ ಕಾರಣಗಳನ್ನ ಹೇಳಿ ವಾಪಸ್ ಕಳಿಸ್ತಿದ್ದಾರಂತೆ.

ತುಮಕೂರು ಜಿಲ್ಲೆಯ ಇತರ ತಾಲೂಕುಗಳ ಸರ್ಕಾರಿ ಆಸ್ಪತ್ರೆಗಳಿಗೆ ಹೋಲಿಸಿದ್ರೆ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹೆರಿಗೆಗಳಾಗ್ತಿವೆ. ಏಪ್ರಿಲ್‌ ೨೦೨೪ರಿಂದ ಜನವರಿ 2025 ರ ಅಂತ್ಯದವರೆಗೆ ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ಕೇವಲ 159 ಹೆರಿಗೆಗಳಾಗಿವೆ. ಇನ್ನು ಕಳೆದ ವರ್ಷ ಮಧುಗಿರಿ ತಾಲೂಕಿನಲ್ಲಿ ಒಟ್ಟು 875 ಹೆರಿಗೆಗಳಾಗಿದ್ದು, ಇದರಲ್ಲಿ 716 ಹೆರಿಗೆಗಳು ಖಾಸಗಿ ಆಸ್ಪತ್ರೆಗಳಲ್ಲಿ ಆಗಿದ್ರೆ, ಕೇವಲ 159 ಹೆರಿಗೆಗಳು ಮಾತ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆದಿವೆ. ಶೇ.80 ರಷ್ಟು ಹೆರಿಗೆಗಳು ಖಾಸಗಿ ಆಸ್ಪತ್ರೆಯಲ್ಲಿ ನಡೆದಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಯ ಕಾರ್ಯವೈಖರಿಗೆ ಈ ಅಂಕಿ ಅಂಶವೇ ಸಾಕ್ಷಿಯಾಗಿದೆ.

ಇನ್ನು ಮಧುಗಿರಿ ಆಸ್ಪತ್ರೆಯಲ್ಲಿ ಸರಿಯಾದ ಆರೋಗ್ಯ ಸೇವೆ ಸಿಗದ ಕಾರಣ ರೋಗಿಗಳು ಮಧುಗಿರಿಯಿಂದ ಶಿರಾ ತಾಲೂಕು ಆಸ್ಪತ್ರೆಯತ್ತ ಮುಖ ಮಾಡ್ತಿದ್ದಾರೆ. ಇತ್ತೀಚೆಗೆ ಅನಿತಾ ಎಂಬ ಗರ್ಭೀಣಿ ಮಹಿಳೆ ಮಧುಗಿರಿ ಆಸ್ಪತ್ರೆಗೆ ದಾಖಲಾಗಿದ್ರು. ಆದ್ರೆ ಇಲ್ಲಿ ಮಗುವಿಗೆ ಅನಾರೋಗ್ಯ ಕಾಣಿಸಿದ್ರೆ ಸರಿಯಾದ ಐಸಿಯು ವ್ಯವಸ್ಥೆ ಇಲ್ಲ ಅನ್ನೋ ಕಾರಣಕ್ಕೆ ಶಿರಾ ಆಸ್ಪತ್ರೆಗೆ ಹೋಗಿ ಅಡ್ಮಿಟ್‌, ಅಲ್ಲಿ ಹೆರಿಗೆಯಾಗಿದೆ.

ಇನ್ನು ಈಗಾಗಲೇ ಬೇಸಿಗೆ ಆರಂಭವಾಗಿದ್ದು ಬಿಸಿಲು, ಬಿಸಿಗಾಳಿಯಿಂದ ಹೆರಿಗೆಯಾದ  ತಾಯಿ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.ವೈದ್ಯರನ್ನ ಕಾಣಲು ಬಂದ್ರೆ ವೈದ್ಯರು ಹಾಗೂ ಸಿಬ್ಬಂದಿ ಇಲ್ದೇ ತಾಯಿ ಮಗು ಸಾವು ನೋವಿನ ನಡುವೆ ಹೋರಾಡಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆಯಂತೆ. ಅದೇನೆ ಇರಲಿ.

ಸರ್ಕಾರ ಆರೋಗ್ಯ ಸೇವೆಗೆಂದೇ ಕೋಟ್ಯಾಂತರ ರೂಪಾಯಿಯನ್ನ ವ್ಯಯಿಸುತ್ತಿದೆ. ಆದ್ರೆ ಇಲ್ಲಿನ ಅಧಿಕಾರಿಗಳು ಮಾತ್ರ ಬದಲಾಗುತ್ತಿಲ್ಲ. ಇನ್ನಾದ್ರೂ ಸಂಭಂದಪಟ್ಟ ಅಧಿಕಾರಿಗಳು ಇದ್ರ ಬಗ್ಗೆ ಗಮನವಹಿಸಿ, ಸೂಕ್ತ ಕ್ರಮ ಕೈಗೊಳ್ಳುತ್ತಾರಾ ಅನ್ನೋದನ್ನ ಕಾದುನೋಡ್ಬೇಕಿದೆ.

 

 

 

 

Author:

...
Sub Editor

ManyaSoft Admin

Ads in Post
share
No Reviews