
ಸ್ಥಳೀಯರು ಪಾವಗಡದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ KSRTC ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿರುವುದು.ತುಮಕೂರು
ಮಧುಗಿರಿ:
KSRTC ಬಸ್ ಡಿಕ್ಕಿಯಾಗಿ ವೃದ್ಧನೋರ್ವ ಸಾವನ್ನಪ್ಪಿರುವ ಘಟನೆ ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ವೃದ್ಧನ ಮೇಲೆ ಬಸ್ ಹರಿದಿದ್ದು ವೃದ್ಧನ ತಲೆ ನಜ್ಜುಗುಜ್ಜಾಗಿದೆ. 50 ವರ್ಷದ ನಾರಾಯಣಪ್ಪ ಮೃತ ದುರ್ದೈವಿಯಾಗಿದ್ದಾರೆ. ಸ್ಥಳಕ್ಕೆ ಮಿಡಿಗೇಶಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅತಿವೇಗದಿಂದ ಬಂದ KSRTC ಬಸ್ ವೃದ್ಧನ ತಲೆ ಮೇಲೆ ಹರಿದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದಿನದಿಂದ ದಿನಕ್ಕೆ ಬಸ್ ಚಾಲಕರ ಅಜಾಗರುಕತೆಯಿಂದ ಅಪಘಾತಗಳು ಜರುಗುತ್ತಿದ್ದು, ಸ್ಥಳೀಯರ ಆಕ್ರೋಶದ ಕಟ್ಟೆ ಹೊಡೆದಿದೆ. ಅಪಘಾತದಲ್ಲಿ ವೃದ್ಧ ಸಾವನ್ನಪ್ಪುತ್ತಿದ್ದಂತೆ ಗ್ರಾಮಸ್ಥರು ಬಸ್ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪಾವಗಡದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ KSRTC ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಇನ್ನು ಘಟನಾ ಸ್ಥಳಕ್ಕೆ ಮಿಡಿಗೇಶಿ ಪೊಲೀಸರು ಧಾವಿಸಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.