ಬಡಕನಹಳ್ಳಿಯ ಚರಂಡಿ ಅವ್ಯವಸ್ಥೆತುಮಕೂರು
ಮಧುಗಿರಿ:
ದಲಿತರ ಮೂಲಭೂತ ಸಮಸ್ಯೆ ಬಗ್ಗೆ ಗ್ರಾಮಪಂಚಾಯ್ತಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗದ ಘಟನೆ, ಮಧುಗಿರಿ ತಾಲೂಕಿನ ಪುರವರ ಹೋಬಳಿ ಕೋಡ್ಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಡಕನಹಳ್ಳಿಯಲ್ಲಿ ನಡೆದಿದೆ. ಈ ಗ್ರಾಮದ ದಲಿತರ ಮೂಲಭೂತ ಸಮಸ್ಯೆಗಳ ಬಗ್ಗೆ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಅಧಿಕಾರಿಗಳ ಮತ್ತು ತಹಶೀಲ್ದಾರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ದಲಿತರ ಕೇರಿಯಲ್ಲಿ ಚರಂಡಿ ನೀರು ಹರಿಯುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುವ ವೇಳೆ, ರಂಗದಾಮಯ್ಯ ಎಂಬಾತ ಸುದ್ದಿ ಮಾಡದಂತೆ ಅಡ್ಡಿಪಡಿಸಿದ ದೃಶ್ಯ ಕಂಡು ಬಂದಿತು. ಸುಮಾರು ೩ ವರ್ಷಗಳಿಂದ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಲು ಮನವಿ ಮಾಡುತ್ತಿದ್ದರೂ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಈ ಭಾಗದಲ್ಲಿ ಬಹುತೇಕ ದಲಿತ ಕುಟುಂಬಗಳೇ ವಾಸವಿದ್ದು ಇಲ್ಲಿ ನೀರು ಶೇಖರಣೆಯಾಗಿ ಮಕ್ಕಳಲ್ಲಿ ಜ್ವರ, ಕೆಮ್ಮೆ ಕಾಣಿಸಿಕೊಳ್ಳುತ್ತಿದೆ. ಗ್ರಾಮದ ರಂಗದಾಮಯ್ಯ ಎಂಬುವವರು ಗ್ರಾಮದಲ್ಲಿ ನಡೆಯುವ ದಲಿತರ ಅಭಿವೃದ್ಧಿ ಕಾರ್ಯಗಳಿಗೆ ಸುಖಾಸುಮ್ಮನೆ ಅಡ್ಡಿಪಡಿಸುತ್ತಿದ್ದಾರೆ.
ಇದರಿಂದ ಈ ಭಾಗದಲ್ಲಿ ಚರಂಡಿ ಕಲ್ಪಿಸಿಕೊಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಎಂದು ಗ್ರಾಮದ ಲಕ್ಷ್ಮಿನರಸಯ್ಯ, ನರಸಿಂಹಮೂರ್ತಿ, ತಿಪ್ಪೇಸ್ವಾಮಿ, ರತ್ನಮ್ಮ, ಸಣ್ಣಕ್ಕ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಪಿಡಿಒ ನಾಗವೇಣಿ ಎಂಬುವವರಿಗೆ ಸಂಪರ್ಕಿಸಿದರೆ ಈ ಬಗ್ಗೆ ನನಗೆ ಮಾಹಿತಿ ಇಲ್ಲ, ಕಡತ ತೆಗೆದು ಮೇಲಾಧಿಕಾರಿಗಳ ಗಮನಕ್ಕೆ ತಂದು ಸಾಧ್ಯವಾದಷ್ಟು ಬೇಗಾ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಬಡಕನಹಳ್ಳಿ ಚರಂಡಿ ಅಂತ್ಯದಲ್ಲಿ ಸರ್ವೆ ನಂ ಜಮೀನಿದ್ದು, ಜಮೀನಿನ ಮಾಲೀಕರು ನೀರು ಹರಿಯಲು ಹಾಗೂ ಚರಂಡಿ ನಿರ್ಮಿಸಿಲು ಬಿಡುತ್ತಿಲ್ಲ, ಈ ಬಗ್ಗೆ ತಹಶೀಲ್ದಾರ್ ಗಮನಕ್ಕೆ ಅರ್ಜಿ ನೀಡಿ ಒಂದು ವರ್ಷ ಕಳೆದರೂ ಸದರಿ ಅರ್ಜಿ ಗ್ರಾಮಪಂಚಾಯ್ತಿಗೆ ವರ್ಗಾಯಿಸಿದ್ದಾರೆ. ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರೆ ಸಮಸ್ಯೆ ಬಗ್ಗೆ ತಿಳಿಯುತ್ತದೆ ಮತ್ತು ಸಮಸ್ಯೆ ಪರಿಹಾರವಾಗುತ್ತದೆ.