ಮಧುಗಿರಿ :
ಸಂವಿಧಾನ ಪೀಠಿಕೆ ಫಲಕ, ಅಂಬೇಡ್ಕರ್ ಅವರ ಸಂದೇಶಗಳ ಫಲಕಗಳನ್ನು ಕಚೇರಿಗಳಲ್ಲಿ ಹಾಕುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬರು ಮನೆಯಲ್ಲಿಯೇ ಸಂವಿಧಾನ ಪೀಠಿಕೆ ಹಾಗೂ ಸಂದೇಶಗಳ ಫಲಕಗಳನ್ನು ಉದ್ಘಾಟನೆ ಮಾಡಿ ಮಾದರಿಯಾಗಿದ್ದಾರೆ. ಹೌದು ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಕಾಳೇನಹಳ್ಳಿ ಗ್ರಾಮದ ಪ್ರಗತಿಪರ ಚಿಂತಕ ಡಾ. ಕೆ ನರಸಿಂಹಪ್ಪ ಸ್ವಗೃಹದಲ್ಲಿ ಅಂಬೇಡ್ಕರ್ ಜಯಂತಿಯ ಅಂಗವಾಗಿ ಸಂವಿಧಾನ ಪೀಠಿಕೆ ಫಲಕ ಹಾಗೂ ಅಂಬೇಡ್ಕರ್ ಸಂದೇಶಗಳ ಫಲಕಗಳನ್ನು ಉದ್ಘಾಟನೆ ಮಾಡಲಾಯಿತು. ಈ ವೇಳೆ ಡಾ. ಕುಮಾರಸ್ವಾಮಿ ಬೆಜ್ಜೆಹಳ್ಳಿ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಖಜಾಂಚಿ ಶ್ರೀರಂಗಚಾರಿ, ವಕೀಲ ನರಸಿಂಹಮೂರ್ತಿ, ಮುಖಂಡರಾದ ಚಂದ್ರು ಸಂಜೀವ್ ಪುರ ಸೇರಿ ಹಲವರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಪ್ರಾದೇಶಿಕ ಸೇನಾಧಿಕಾರಿ ಲೆಫ್ಟಿನೆಂಟ್ ಭವ್ಯ ನರಸಿಂಹಮೂರ್ತಿ, ಅಂಬೇಡ್ಕರ್ ವಿರುದ್ಧ ತಪ್ಪು ಸಂದೇಶ ನೀಡುವುದು, ಸಂವಿಧಾನ ಬದಲಾವಣೆ ಸೇರಿದಂತೆ ಸಂವಿಧಾನದ ವಿರುದ್ಧ ಬಹಳಷ್ಟು ಶಕ್ತಿಗಳು ಬಂದಿವೆ. ಇಂತಹ ಸ್ಥಿತಿಯಲ್ಲಿ ಸಂವಿಧಾನ ಸಂರಕ್ಷಣೆ ಯುವ ಜನತೆ ಮೇಲಿದೆ ಎಂದು ಹೇಳಿದರು. ಅಲ್ಲದೇ ಸಾಮಾಜಿಕ ನ್ಯಾಯ ಸಂವಿಧಾನ ಕೊಟ್ಟಿರುವ ಸಂದೇಶ, ಅನೇಕತೆ ಎಂಬುದು ದೇಶದ ಬಲ ಇದರಿಂದ ಜನರ ಮದ್ಯೆ ಆಗುತ್ತಿರುವ ಬೇಧ ಬಾವ, ಜಾತಿ ಧರ್ಮದಿಂದ ಆಥಿಕ ಸ್ಥಿತಿ ಹಾಗೂ ಮನುಷ್ಯನ ಅವಕಾಶಗಳನ್ನು ಯಾರು ಕಿತ್ತುಕೊಳ್ಳಬಾರದು ಎಂದರು.
ನಮ್ಮ ದೇಶದಲ್ಲಿ ಭಾಷೆ, ನಡೆ, ನುಡಿಯಲ್ಲಿ ವೈವಿಧ್ಯತೆಯಿಂದ ಕೂಡಿದ್ದು ಇದಕ್ಕೆ ಸಂವಿಧಾನ ಎಂಬ ಶಕ್ತಿ ಕಾರಣವಾಗಿದೆ. ಯಾವುದೆ ಜಾತಿ ಧರ್ಮವಿದ್ದರೂ ಭಾರತೀಯ ಭ್ರಾತೃತ್ವ ಭಾವನೆ ಬೆಳಸಿಕೊಳ್ಳಬೇಕು. ಸಾಮಾಜಿಕ ನ್ಯಾಯ ಎತ್ತಿ ಹಿಡಿಬೇಕು ಎಂದರು.