ಮಧುಗಿರಿ : ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ

ಮಧುಗಿರಿ ಪೊಲೀಸ್‌ ಠಾಣೆ
ಮಧುಗಿರಿ ಪೊಲೀಸ್‌ ಠಾಣೆ
ತುಮಕೂರು

ಮಧುಗಿರಿ :

ಯುಗಾದಿ ಹಬ್ಬದ ವೇಳೆ ಎರಡು ಯುವಕರ ನಡುವೆ ಮಾರಾಮಾರಿ ನಡೆದಿದ್ದು, ಕಲ್ಲು ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ. ಯುಗಾದಿ ಹಬ್ಬ ಅಂದರೆ ಹಳ್ಳಿಯ ಹುಡುಗರಲ್ಲಿ ಜೋಶ್‌ ಬೇರೆ ರೀತಿಯಾಗಿಯೇ ಇರುತ್ತೆ. ಹುಡುಗರಂಥೂ ಮನೆಯಲ್ಲಿ ಹಬ್ಬ ಮಾಡುವುದಕ್ಕಿಂತ ಊರ ಹುಡುಗರೊಂದಿಗೆ ಹಬ್ಬ ಮಾಡುವುದು ಜಾಸ್ತಿ. ಈ ವೇಳೆ ಯುವಕರ ಗುಂಪುಗಳ ನಡುವೆ ಗಲಾಟೆ ನಡೆಯೋದು ಕಾಮನ್‌ ಆದರೆ, ತುಮಕೂರು ಜಿಲ್ಲೆ  ಮಧುಗಿರಿ ತಾಲೂಕಿನ ಬೆಂಕಿ ಪುರದಲ್ಲಿ ಎರಡು ಗ್ರಾಮಗಳ ಯುವಕರ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಕೆಲವೊಮ್ಮೆ ಚಿಕ್ಕ- ಚಿಕ್ಕ ಘಟನೆಗಳು ಹೊಡೆದಾಡಿಕೊಳ್ಳುವ ಮಟ್ಟಕ್ಕೆ ಹೋಗ್ತಾವೆ. ಹುಡುಗರು ಜೋಶ್‌ನಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಹಿಡಿದು ಹೊಡೆದಾಡಿಕೊಳ್ತಾರೆ, ಅನ್ನೋದಕ್ಕೆ ಇದೊಂದು ಘಟನೆ ಸಾಕ್ಷಿಯಾಗಿದೆ.

ಮಧುಗಿರಿ ತಾಲೂಕಿನ ಬೆಂಕಿಪುರ ಹಾಗೂ ಸಿದ್ದಾಪುರ ಗ್ರಾಮದ ಯುವಕರು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಮಾತಿಗೆ ಮಾತು ಬೆಳೆದು ಸಿದ್ದಾಪುರ ಗ್ರಾಮದ ಹುಡುಗರು ಹಾಗೂ ಬೆಂಕಿಪುರ ಗ್ರಾಮದ ಹುಡುಗರ ನಡುವೆ ಹೊಡೆದಾಟ ಜೋರಾಗಿದೆ. ಸಿದ್ದಾಪುರ ಗ್ರಾಮದ ಹುಡುಗರ ಮೇಲೆ ಬೆಂಕಿಪುರ ಗ್ರಾಮದ ಹುಡುಗರು ಕಲ್ಲು, ದೊಣ್ಣೆಯಿಂದ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಕಲ್ಲಿನಿಂದ ಯುವಕರ ತಲೆ ಅಂತಾಲೂ ನೋಡದೆ ಹಿಗ್ಗಾಮುಗ್ಗ ರಕ್ತ ಸುರಿಯುವಂತೆ ಹೊಡೆದಾಡಿದ್ದು, ಪ್ರಾಣ ಉಳಿಸಿಕೊಳ್ಳಲು ಯುವಕರು ಓಡಿದ್ದಾರೆ. ಇನ್ನು ಹಲ್ಲೆಯಿಂದ ಸಿದ್ದಾಪುರ ಗ್ರಾಮದ ಮೂವರು ಯುವಕರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರಾಮಾರಿಯ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. 

ಇನ್ನು ಯುವಕರ ಮಾರಾಮಾರಿ ಕಂಡು ಸ್ಥಳೀಯರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಹೊಡೆದಾಟವನ್ನು ಬಿಡಿಸಲು ಸ್ಥಳೀಯರು ಮುಂದಾಗಿದ್ದು, ಮಧ್ಯ ಬಂದವರ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ. ಸದ್ಯ ಈ ಸಂಬಂಧ ಮಧುಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಕಿಪುರ ಯುವಕರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು ಪ್ರಕರಣದ ತನಿಖೆ ಬಳಿಕ ಗಲಾಟೆಗೆ ಅಸಲಿ ಕಾರಣ ತಿಳಿದು ಬರಲಿದೆ.

Author:

...
Editor

ManyaSoft Admin

share
No Reviews