ಮಧುಗಿರಿ : ಮಧುಗಿರಿಯಲ್ಲಿ ಕಣ್ಣಿನ ಆಸ್ಪತ್ರೆ, ಸಂಶೋಧನಾ ಕೇಂದ್ರ ಲೋಕಾರ್ಪಣೆ

ಮಧುಗಿರಿಯಲ್ಲಿ ಡಯಾಲಿಸಿಸ್ ಸೆಂಟರ್ ಹಾಗೂ ಕಣ್ಣಿನ ಆಸ್ಪತ್ರೆ, ಸಂಶೋಧನಾ ಕೇಂದ್ರ ಲೋಕಾರ್ಪಣೆ
ಮಧುಗಿರಿಯಲ್ಲಿ ಡಯಾಲಿಸಿಸ್ ಸೆಂಟರ್ ಹಾಗೂ ಕಣ್ಣಿನ ಆಸ್ಪತ್ರೆ, ಸಂಶೋಧನಾ ಕೇಂದ್ರ ಲೋಕಾರ್ಪಣೆ
ತುಮಕೂರು

ಮಧುಗಿರಿ:

ಮಧುಗಿರಿ ಪಟ್ಟಣದ ಸರ್ಕಾರಿ ಆಸ್ಪತ್ರೆ ರಸ್ತೆಯಲ್ಲಿ ಎಚ್. ಸಿ. ಬಸವರಾಜು ಹಾಗೂ  ಎಚ್. ಸಿ. ವೀರಭದ್ರಪ್ಪ ಸ್ಮರಣಾರ್ಥ ನೂತನವಾಗಿ ನಿರ್ಮಿಸಿರುವ ಡಯಾಲಿಸಿಸ್ ಸೆಂಟರ್ ಹಾಗೂ  ಶ್ರೀ ಶಾರದಾ ದೇವಿ ಕಣ್ಣಿನ ಆಸ್ಪತ್ರೆ, ಸಂಶೋಧನಾ ಕೇಂದ್ರದ ಶಾಖೆಯನ್ನು ಸಿದ್ದಗಂಗಾ ಮಠದ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಜಪನಾಂದ ಶ್ರೀಗಳು ಉದ್ಘಾಟಿಸಿದರು.

ವೇಳೆ ಪುರಸಭೆ ಅಧ್ಯಕ್ಷ  ಲಾಲಪೇಟೆ ಮಂಜುನಾಥ್ , ಸಿದ್ದಗಂಗಾ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ  ಕಾರ್ಯದರ್ಶಿ ಟಿ. ಎಂ. ಸ್ವಾಮಿ, ಡಾ. ಎಸ್. ಪರಮೇಶ್, ಸಿ. . . ಡಾ. ಎಂ. ಎನ್. ಸಂಜೀವ್ ಕುಮಾರ್, ಬೆಂಗಳೂರಿನ ಲಯನ್ಸ್ ಕ್ಲಬ್ ಅಧ್ಯಕ್ಷ  ಜಿ. ಎಸ್. ಮಲ್ಲೇಶಯ್ಯ ಸೇರಿ ಹಲವಾರು ಮಂದಿ ಭಾಗಿಯಾಗಿದ್ದರು.

ವೇಳೆ ಮಾತನಾಡಿದ ಸಿದ್ದಲಿಂಗ ಸ್ವಾಮೀಜಿ, ರೋಗಿಗಳು ದೇವರ ಸಮಾನರಾಗಿದ್ದು, ಅವರ ಸೇವೆಯಲ್ಲಿ ತೊಡಗಿಸಿಕೊಳ್ಳುವ ವೈದ್ಯ ವೃತ್ತಿ ಅತ್ಯಂತ ಪವಿತ್ರವಾದ ಶ್ರೇಷ್ಠ ವೃತ್ತಿ ಎಂದು ತಿಳಿಸಿದರು. ವೈದ್ಯರು ಹೃದಯವಂತಿಕೆಯಿಂದ ರೋಗಿಗಳ ಆರೈಕೆ ಮಾಡಿದಲ್ಲಿ ಅವರು ಚೇತರಿಸಿಕೊಂಡು ಗುಣಮುಖರಾಗುತ್ತಾರೆ. ಶ್ರೀ ಜಪಾನಂದ ಜಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಆಸ್ಪತ್ರೆಯು ಗ್ರಾಮೀಣ ಭಾಗದ ಬಡ ಜನರಿಗೆ ಉಪಯೋಗವಾಗಲಿ ಎಂದರು. ಹಾಗೂ ಮಧುಗಿರಿ ಬೆಳೆಯುತ್ತಿದ್ದು, ಮುಂದೆ ಜಿಲ್ಲೆಯಾಗಲಿದೆ ಭಾಗಕ್ಕೆ ಹೆಚ್ಚಿನ ಆಸ್ಪತ್ರೆಗಳ ಅಗತ್ಯವಿದ್ದು, ಆಸ್ಪತ್ರೆಯು ವಿಸ್ತಾರಗೊಳ್ಳಲಿ ಎಂದು ಹಾರೈಸಿದರು.

ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದ ಜೀ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ  ಉತ್ತಮ ಆರೋಗ್ಯ ಸೌಲಭ್ಯಗಳು ಸಿಗಬೇಕು ಎಂಬ  ಸದಾಶಯದೊಂದಿಗೆ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದಾರೆ. ಎಚ್. ಬಿ. ಶಿವಕುಮಾರ್ ಕುಟುಂಬದವರಿಗೆ ಬಡವರ ಸೇವೆ ಮಾಡುವ ಹೃದಯ ಶ್ರೀಮಂತಿಕೆಯು ಇದೆ ಎಂದರು.

Author:

share
No Reviews