ಮಧುಗಿರಿ : ದಂಡಿನ ಮಾರಮ್ಮ ತೆಪ್ಪೋತ್ಸವ ನಡೆದ ಕೆರೆಯಲ್ಲಿ ಇನ್ಮುಂದೆ ಬೋಟಿಂಗ್...!

 ಕೆರೆಯಲ್ಲಿ ಬೋಟಿಂಗ್ ಮಾಡಿದ ಸಚಿವ K N ರಾಜಣ್ಣ
ಕೆರೆಯಲ್ಲಿ ಬೋಟಿಂಗ್ ಮಾಡಿದ ಸಚಿವ K N ರಾಜಣ್ಣ
ತುಮಕೂರು

ಮಧುಗಿರಿ:

ಮಧುಗಿರಿ ಜನರ ಆರಾಧ್ಯ ದೈವ ದಂಡಿನಮಾರಮ್ಮ ತೆಪ್ಪೋತ್ಸವ ನಡೆದ ಬೆನ್ನಲ್ಲೇ ಭಕ್ತರಿಗೆ, ಪ್ರವಾಸಿಗರಿಗೆ ಮತ್ತೊಂದು ಶುಭ ಸುದ್ದಿ ಸಿಕ್ಕಿದೆಹೌದು ಬರೋಬ್ಬರಿ 50 ವರ್ಷಗಳ ಬಳಿಕ ದಂಡಿನಮಾರಮ್ಮ ತೆಪ್ಪೋತ್ಸವವನ್ನು ಅದ್ಧೂರಿಯಾಗಿ ನಡೆಸಲಾಗಿದ್ದು, ಇದೀಗ ತೆಪ್ಪೋತ್ಸವ ನಡೆದ ಮಧುಗಿರಿಯ ಚೋಳೇನಹಳ್ಳಿ ಕೆರೆಯಲ್ಲಿ ಬೋಟಿಂಗ್ಗೆ ಚಾಲನೆ ನೀಡಲಾಗಿದೆ. ಸುತ್ತಲೂ ಬೆಟ್ಟ ಮಧ್ಯದಲ್ಲಿ ಕೆರೆಬೋಟಿಂಗ್ನಲ್ಲಿ ರೈಡ್ಮಾಡಿ ಪ್ರಕೃತಿ ಸೌಂದರ್ಯವನ್ನು ಪಡೆಯುವ ಅವಕಾಶ ಸಿಕ್ಕಿದ್ದು, ಜನರಂಥೂ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಏಕಶಿಲಾ ಬೆಟ್ಟಕ್ಕೆ ಹೆಸರುವಾಸಿಯಾಗಿರೋ ಮಧುಗಿರಿಯ ಚೋಳೇನಾ ಕೆರೆ ಪ್ರವಾಸಿ ತಾಣವಾಗಿ ಮಾರ್ಪಡುತ್ತಿದೆ. ಹೀಗಾಗಿ ಸಹಕಾರಿ ಸಚಿವ ಕೆ.ಎನ್ರಾಜಣ್ಣ ಕೆರೆಯಲ್ಲಿ ಬೋಟಿಂಗ್ಗೆ ಚಾಲನೆ ನೀಡಿದರು. ಬೋಟಿಂಗ್ಗೆ ಚಾಲನೆ ನೀಡಿದ ಬಳಿಕ ಒಂದು ರೌಂಡ್ಸ್ಕೆರೆಯಲ್ಲಿ ಬೋಟಿಂಗ್ನಲ್ಲಿ ಜಾಲಿ ರೈಡ್ಮಾಡಿ ಫುಲ್ಎಂಜಾಯ್ಮಾಡಿದರು. ಇಷ್ಟು ದಿನ ರಾಜಕೀಯ ಜಂಜಾಟದಲ್ಲೇ ಬ್ಯೂಸಿಯಾಗಿದ್ದ ಸಚಿವ ರಾಜಣ್ಣ ಬೋಟಿಂಗ್ಗೆ ಚಾಲನೆ ನೀಡುವ ನೆಪದಲ್ಲಿ ತನ್ನ ಆಪ್ತರ ಜೊತೆ ಬೋಟಿಂಗ್ನಲ್ಲಿ ಜಾಲಿ ರೈಡ್ಮಾಡಿ ರಿಲ್ಯಾಕ್ಸ್ಮೂಡಿಗೆ ಜಾರಿದ್ರುಸದ್ಯ ಕೆರೆಯಲ್ಲಿ ತಾತ್ಕಾಲಿಕವಾಗಿ ಬೋಟಿಂಗ್ವ್ಯವಸ್ಥೆ ಕಲ್ಪಿಸಲಾಗಿದ್ದುಮುಂದಿನ ದಿನಗಳಲ್ಲಿ ಕೆರೆಯಲ್ಲಿ ಶಾಶ್ವತವಾಗಿ ದೋಣಿ ವಿಹಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಕೆ,ಎನ್ರಾಜಣ್ಣ ತಿಳಿಸಿದ್ದಾರೆ.

ಇನ್ನು ಸಾಮಾನ್ಯ ಜನರು ಬೋಟಿಂಗ್ಅಲ್ಲಿ ಹೋಗಬೇಕು ಅಂದರೆ ಬೀಚ್ಗೇ ಹೋಗಬೇಕುಯುವಕರಂಥೂ ಹೋಗಿ ಎಂಜಾಯ್ಮಾಡುತ್ತಾರೆಆದರೆ ಹಳ್ಳಿಯಲ್ಲಿರೋ ಜನರು, ಬಡವರು ಅಷ್ಟು ದೂರ ಹೋಗಿ ಬೋಟಿಂಗ್ಮಾಡಲು ಸಾಧ್ಯವಾಗೋದಿಲ್ಲಆದರೀಗ ತಾಲೂಕಿನಲ್ಲೇ ಬೋಟಿಂಗ್ಆರಂಭಿಸುತ್ತಿರೋದಕ್ಕೆ ಮಧುಗಿರಿ ಜನರಂಥೂ ಫುಲ್ಖುಷ್ಆಗಿದ್ದಾರೆ.

Author:

share
No Reviews