ಮಧುಗಿರಿ: . ಕಾರು ಪಲ್ಟಿಯಾಗಿ ಮಹಿಳೆ ಸಾವು | 3 ಜನರಿಗೆ ಗಂಭೀರ ಗಾಯ

ಮಧುಗಿರಿ:

ಮದುವೆ ಮುಗಿಸಿಕೊಂಡು ಪಾವಗಡಕ್ಕೆ ವಾಪಾಸ್‌ ಹೋಗುತ್ತಿದ್ದಾಗ ಕಾರು ಪಲ್ಟಿ ಹೊಡೆದ ಪರಿಣಾಮ ಒಬ್ಬ ಮಹಿಳೆ ಸ್ಥಳದಲ್ಲೇ ಮೃತ ಪಟ್ಟಿದ್ದರೆ. ಜೆಡಿಎಸ್‌ ಮುಖಂಡ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಬೇಡತ್ತೂರು ಗೇಟ್‌ ಸಮೀಪ ಸಂಭವಿಸಿದೆ.

ಮೈಸೂರು ಮೂಲದ ಮಂಜುಳ (65) ಮೃತ ದುರ್ದೈವಿ. ಇನ್ನು ಅಪಘಾತದಲಿ ಶಿವಪ್ಪ ನಾಯ್ಕ (62), ಜಯಮ್ಮ(55) ಮತ್ತು ರಾಜೇಶ್ ಜೈನ್‌ (60) ಗಂಭೀರವಾಗಿ ಗಾಯಗೊಂಡಿದ್ದಾರೆ.  ಹೊಸದಾಗಿ ಖರೀದಿಸಿದ್ದ ಕಾರಿನಲ್ಲಿ ಭಾನುವಾರ ಸಂಬಂಧಿಕರ ಮದುವೆಗೆ ಹೋಗಿದ್ದ ಕುಟುಂಬ ಸದಸ್ಯರು ಮದುವೆ ಮುಗಿಸಿಕೊಂಡು ಕಾರಿನಲ್ಲಿ ವಾಪಸ್ ಬರುವಾಗ ಬೇಡತ್ತೂರಿನ ಬಳಿ ಈ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಪಾವಗಡದ ಸ್ಥಳೀಯ ಜೆಡಿಎಸ್ ಮುಖಂಡ ಶಿವಪ್ಪ ನಾಯಕ ಹಾಗೂ ಅವರ ಧರ್ಮಪತ್ನಿ ಗಂಭೀರವಾಗಿ ಗಾಯಗೊಂಡವರು. ಗಾಯಗೊಂಡು ನೀರಿನ ತೊಟ್ಟಿಗೆ ಬಿದ್ದ ಮಹಿಳೆ ಮೇಲೆ ಬರಲಾಗದೇ ಅಲ್ಲಿಯೇ ಸಾವಿಗೀಡಾಗಿದ್ದಾರೆ. ಶಿವಪ್ಪ ಅವರ ಕಾಲು ಮುರಿದುದರಿಂದ ತೊಟ್ಟಿಗೆ ಬಿದ್ದ ಮಹಿಳೆಯ ರಕ್ಷಣೆ ಮಾಡುವುದಕ್ಕೂ ಸಾಧ್ಯವಾಗಿಲ್ಲ. ನಂತರ ಗಾಯಾಳುಗಳನ್ನು ಸ್ಥಳೀಯರು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು. ಘಟನೆ ಸಂಬಂಧ ಮಿಡಿಗೇಶಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Author:

share
No Reviews