ಮಧುಗಿರಿ: ಬಂಗಾರು ಕಾಟಮಲಿಂಗೇಶ್ವರ ಜಾತ್ರೆಯಲ್ಲಿ ಭಾಗಿಯಾದ ವಿ.ಸೋಮಣ್ಣ

ಕಾಟಮಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಸಚಿವ ವಿ, ಸೋಮಣ್ಣ, ಶಾಸಕ ಸುರೇಶ್‌ ಗೌಡ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ಕಾಟಮಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಸಚಿವ ವಿ, ಸೋಮಣ್ಣ, ಶಾಸಕ ಸುರೇಶ್‌ ಗೌಡ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ತುಮಕೂರು

ಮಧುಗಿರಿ:

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಪುರವರ ಹೋಬಳಿಯ ಕೊಂಡವಾಡಿ ಗ್ರಾಮದ ಬಂಗಾರು ಕಾಟಮಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ತಾಲೂಕಿನ ೫೩ ಹಳ್ಳಿಯ ಬುಡಕಟ್ಟು ಸಮುದಾಯದ ಜನರು ಒಂದಾಗಿ ಸೇರಿ ಈ ಜಾತ್ರೆಯನ್ನು ಆಚರಣೆ ಮಾಡುತ್ತಿದ್ದು, ೧೦೧ ಎಡೆಗಳನ್ನ ಇಟ್ಟು ಭಕ್ತಿಪೂರ್ವಕವಾಗಿ ದೇವರ ಆರಾಧನೆ ಮಾಡಲಾಯಿತು.

ಇನ್ನು ಈ ಜಾತ್ರಾ ಮಹೋತ್ಸವದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ ಗೌಡ, ಬಿಜೆಪಿ ಮುಖಂಡ ಎಲ್‌.ಸಿ. ನಾಗರಾಜು ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

ಕಾಟಮಲಿಂಗೇಶ್ವರನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ಇಲ್ಲಿನ ಬುಡಕಟ್ಟು ಸಮುದಾಯದ ಜನರು ತಮ್ಮ ದೈನಂದಿನ ಕೆಲಸದಲ್ಲಿ ದೇವರನ್ನು ಕಾಣುತ್ತಿದ್ದು, ಇವತ್ತು ಇಂತಹ ಅಧ್ಬುತ ಕಾರ್ಯಕ್ರಮವನ್ನು ನೋಡುವ ಭಾಗ್ಯ ನನಗೆ ಸಿಕ್ಕಿದೆ. ಇಂತಹ ಅವಕಾಶವನ್ನು ಎಲ್.ಸಿ ನಾಗರಾಜು ಕಲ್ಪಿಸಿಕೊಟ್ಟಿದ್ದಾರೆ ಎಂದರು.

ದೇಶದ ಸಂಸ್ಕೃತಿ ಮತ್ತು ಪರಂಪರೆ ಉಳಿಯಬೇಕಾದರೆ ಧಾರ್ಮಿಕ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕು. ಭಾಗದಲ್ಲಿ ನೀರಾವರಿ ಯೋಜನೆ ಹಾಗೂ ಅಭಿವೃದ್ಧಿಗೆ ಬದ್ಧನಾಗಿದ್ದು, ಈ ಭಾಗದ ದೇವಸ್ಥಾನಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ವಾಗ್ದಾನ ಮಾಡಿದರು.

ತಾಲೂಕಿನ 53 ಹಳ್ಳಿಯ ಬುಡಕಟ್ಟಿನ ಸಮುದಾಯಗಳು ನೂರಾರು ವರ್ಷಗಳಿಂದ ಕಾಟಮಲಿಂಗೇಶ್ವರ ಜಾತ್ರೆಯನ್ನು ಶಿವರಾತ್ರಿ ಸಮೀಪದ ಅಮಾವಾಸ್ಯೆ ದಿನ ಹಮ್ಮಿಕೊಂಡು ಬಂದಿದ್ದಾರೆ. ಕೊರಟಗೆರೆ, ಗೌರಿಬಿದನೂರು ಸೇರಿದಂತೆ ಪಕ್ಕದ ಆಂದ್ರದಿಂದ ನೂರಾರು ಭಕ್ತರು ಸೇರಿ ವಿಜೃಂಭಣೆಯಿಂದ ಜಾತ್ರೆಯನ್ನು ಆಚರಣೆ ಮಾಡಲಾಗುತ್ತಿದೆ. ಕಳೆದ 3 ದಿನಗಳಿಂದ ಹಬ್ಬದ ರೀತಿ ಜಾತ್ರೆ ನಡೆಯುತ್ತಿದ್ದು ಶಿವ ಮತ್ತು ವಿಷ್ಣುವಿನ ಆರಾಧಕರು 101 ಹೆಡೆ ಇಟ್ಟು ವಿಶೇಷ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷವಾಗಿದೆ ಅಂತಾ ಎಲ್‌.ಸಿ.ನಗಾರಾಜು ತಿಳಿಸಿದರು.

ಸಂದರ್ಭದಲ್ಲಿ ಸ್ಪೂರ್ತಿ ಚಿದಾನಂದ್, ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಪುರಸಭೆ ಸದಸ್ಯ ಎಂ.ಆರ್ ಜಗನ್ನಾಥ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

Author:

...
Editor

ManyaSoft Admin

Ads in Post
share
No Reviews