ಚಿಕ್ಕಬಳ್ಳಾಪುರ:
ಕೆಲವರು ಕ್ಷುಲ್ಲಕ ಕಾರಣಗಳಿಗೆ ಸಾವಿನ ಮನೆ ಸೇರುತ್ತಿದ್ದವರ ಸಂಖ್ಯೆ ಹೆಚ್ಚಾಗಿದೆ. ಒಂದೆಡೆ ಅನುಮಾನ ಮತ್ತೊಂದೆಡೆ ಗಂಭೀರವಲ್ಲದ ಕೇವಲ ಸಣ್ಣ ಸಣ್ಣ ವಿಚಾರಕ್ಕೆ ಪ್ರಾಣ ಕಳೆದುಕೊಳ್ಳುತ್ತಾರೆ. ಅದರಂತೆ ಪ್ರಿಯತಮೆಯೊಬ್ಬರು ತನ್ನ ಬಾಯ್ಫ್ರೆಂಡ್ ಬೇರೆ ಹುಡುಗಿ ಜೊತೆ ಚಾಟಿಂಗ್ ಮಾಡಿದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ತನ್ನ ಲವರ್ ಮತ್ತೊಬ್ಬ ಹುಡುಗಿ ಜೊತೆ ಚಾಟಿಂಗ್ ಮಾಡಿಕೊಂಡು ಆತ್ಮೀಯವಾಗಿದ್ದ ಎಂದು ಮನನೊಂದು 17 ವರ್ಷದ ಬಾಲಕಿ ಸುಚಿತ್ರಾ ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದ ಮಂಚೇನಹಳ್ಳಿ ತಾಲೂಕಿನ ಸಾದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಚಿತ್ರ ಪುರ ಗ್ರಾಮದ ಫೋಟೋಗ್ರಾಫರ್ ಆಗಿದ್ದ ಯುವಕನನ್ನು ಒಂದು ವರ್ಷದಿಂದ ಪ್ರೀತಿಸುತ್ತಿದ್ದಳು. . ಪ್ರಿಯಕರ ಆದರ್ಶ ಬೇರೊಬ್ಬಳ ಜತೆ ಮಾತನಾಡಿದ್ದಕ್ಕೆ ಪ್ರಿಯತಮೆ ಸುಚಿತ್ರಾ ಕೋಪಮಾಡಿಕೊಂಡಿದ್ದಳು. ಇದೇ ವಿಚಾರವಾಗಿ ನಿನ್ನೆ ಆದರ್ಶನ ಜೊತೆ ಪ್ರೇಯಸಿ ಸುಚಿತ್ರಾ ಜಗಳವಾಡಿದ್ದಳು. ಪ್ರಿಯಕರನ ನಡೆಯಿಂದ ಬೇಸರಗೊಂಡು ಸುಚಿತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತನ್ನ ಲವರ್ ಬೇರೆ ಹುಡುಗಿ ಜೊತೆ ಚಾಟಿಂಗ್ ಮಾಡಿಕೊಂಡು ಆತ್ಮೀಯವಾಗಿದ್ದ ಎಂಬ ಕಾರಣಕ್ಕೆ ಬಾಲಕಿ ಮನನೊಂದು ಮನೆಯ ಶೌಚಾಲಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ. ಇನ್ನು ಈ ಪ್ರಕರಣ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ