ಚಿಕ್ಕಬಳ್ಳಾಪುರ :
ಚಿಕ್ಕಬಳ್ಳಾಪುರ ಭಾಗದ ಯುವ ಪ್ರತಿಭೆಗಳೇ ಆಕ್ಟ್ ಮಾಡಿರೋ ಲೀಲಾ ಅಭಿ ಮೇಘಾ ಚಿತ್ರತಂಡ ಚಿಕ್ಕಬಳ್ಳಾಪುರ ನಗರದ ಬೆಸ್ಟ್ ಪಿಯು ಕಾಲೇಜಿಗೆ ಭೇಟಿಕೊಟ್ಟಿತು. ಸಿನಿಮಾ ನಾಯಕ ಅಮೃತಾಂಜನ್ ಸೇರಿದಂತೆ ಹಲವಾರು ಕಾಮಿಡಿ ಕಿರುಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದುಕೊಂಡಿರುವ ಕಾರ್ತಿಕ್ ರೆಡ್ಡಿ, ಜೊತೆಗೆ ಸಿನಿಮಾದ ನಾಯಕಿ, ನಿರ್ದೇಶಕ ಹಾಗೂ ರಾಜ್ ಡಾನ್ಸ್ ಅಕಾಡೆಮಿ ತಂಡ, ಶ್ರೀನಿವಾಸ್, ಹರೀಶ್ ಸೇರಿದಂತೆ ಎಲ್ಲಾ ಕಲಾವಿದರು ಭಾಗಿಯಾಗಿದ್ದರು.
ಈ ವೇಳೆ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿಗಳು ಚಿತ್ರತಂಡಕ್ಕೆ ಶುಭಹಾರೈಸಿದ್ರು. ನಟ, ನಟಿಯರನ್ನು ನೋಡಿ ಖುಷಿಪಟ್ಟರು. ಜೊತೆಗೆ ಕೆಲವು ವಿದ್ಯಾರ್ಥಿಗಳು ನಟ, ನಟಿಯರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು.
ಸಿನಿಮಾ ಅಂದ್ರೇನೆ ನಾವು ಊಹಿಸೋದು ಕೆಜಿಎಫ್ ಅಂತಹ ಸಿನಿಮಾಗಳನ್ನ. ಆದರೆ ಹೊಸಬರ ತಾರಾಗಣದಲ್ಲಿ ಮೂಡಿಬಂದಿರೋ ಈ ಚಿತ್ರ ಕಾಮಿಡಿಯಿಂದ ಕೂಡಿದ ಲವ್ ಸ್ಟೋರಿ ಆಗಿದೆ. ಈ ಚಿತ್ರದ ನಿರ್ದೇಶಕ ಹೇಮಂತ್ ಮಾತನಾಡಿ, ಈ ಸಿನಿಮಾ ಇಲ್ಲಿಯ ಸ್ಥಳೀಯ ಕಲಾವಿದರನ್ನೇ ಬಳಸಿಕೊಂಡು ಮಾಡಿರುವ ಚಿತ್ರವಾಗಿದೆ. ಸದಾ ಟೆನ್ಶನ್‌ನಲ್ಲಿರೋ ಜನರಿಗಾಗಿ ಒಂದಿಷ್ಟು ರಿಲ್ಯಾಕ್ಸ್ ಆಗುವ ರೀತಿಯ ಕಾಮಿಡಿಯನ್ನು ನೀಡುವ ಚಿತ್ರ ಇದಾಗಿದೆ ಎಂದು ತಿಳಿಸಿದರು.