MAHA KUMBAMELA: ನಾಳೆ ಮಹಾಕುಂಭಮೇಳಕ್ಕೆ ಕೊನೆಯ ಕ್ಷಣಗಣನೆ

ಮಹಾಕುಂಭಮೇಳ
ಮಹಾಕುಂಭಮೇಳ
ದೇಶ

ಉತ್ತರ ಪ್ರದೇಶದ ಪ್ರಯಾಗ್‌ರಾಜ್​ನಲ್ಲಿ ನಡೆಯುತ್ತಿರುವ 144 ವರ್ಷಗಳ ಬಳಿಕ ಮಹಾ ಕುಂಭಮೇಳ ಕೊನೆಯ ಘಟಕ್ಕೆದತ್ತ  ತಲುಪಿದೆ.ಫೆಬ್ರವರಿ 26ರಂದು ಈ ವಿಶ್ವದ ಅತೀ ದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ತೆರೆ ಬೀಳಲಿದೆ. ಇದುವರೆಗೆ ಸುಮಾರು 64 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ. ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ನಾಳೆ ತೆರೆ ಬೀಳಲಿದೆ. ವಿಶ್ವದ ಅತಿ ದೊಡ್ಡ ಧಾರ್ಮಿಕ ಸಭೆ ಮಹಾ ಕುಂಭಮೇಳಕ್ಕೆ ಶಿವರಾತ್ರಿಯಂದು  ಒಂದು ಕೋಟಿಗೂ ಅಧಿಕ ಜನರು ಭೇಟಿ ನೀಡುವ ನಿರೀಕ್ಷೆ ಇದೆ.

ಜನವರಿ 13 ರಂದು ಮಹಾಕುಂಭಮೇಳ ಪ್ರಾರಂಭದಿಂದ ಇಂದಿನವರೆಗೂ ಸುಮಾರು 64 ಕೋಟಿ ಭಕ್ತರು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಮಹಾ ಕುಂಭಮೇಳವು  ಮಹಾ ಶಿವರಾತ್ರಿಯ ದಿನದಂದು ಮುಕ್ತಾಯಗೊಳ್ಳುತ್ತದೆ.

ಮಹಾ ಶಿವರಾತ್ರಿ ಹಬ್ಬವನ್ನು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನಾಂಕದಂದು ಆಚರಿಸಲಾಗುತ್ತದೆ. ಕ್ಯಾಲೆಂಡರ್ ಪ್ರಕಾರ, ಮಹಾ ಶಿವರಾತ್ರಿ ಫೆಬ್ರವರಿ 26 ರಂದು ಬೆಳಿಗ್ಗೆ 11:08 ಕ್ಕೆ ಪ್ರಾರಂಭವಾಗಿ ಫೆಬ್ರವರಿ 27 ರಂದು ಬೆಳಿಗ್ಗೆ 08:54 ಕ್ಕೆ ಕೊನೆಗೊಳ್ಳುತ್ತದೆ. ಹೀಗಾಗಿ, ಮಹಾ ಕುಂಭವು ಫೆಬ್ರವರಿ 26 ರಂದು ಮಹಾ ಶಿವರಾತ್ರಿಯ   ದಿನದಂದು ಮುಕ್ತಾಯಗೊಳ್ಳುತ್ತದೆ ಮತ್ತು ಮಹಾ ಕುಂಭದ ಕೊನೆಯ ಸ್ನಾನವು ಅದೇ ದಿನ ನಡೆಯುತ್ತದೆ.

 

Author:

...
Sub Editor

ManyaSoft Admin

share
No Reviews