KORATAGERE: ಸಿದ್ದರಬೆಟ್ಟದ ದಾಸೋಹ ಭವನದಲ್ಲಿ ನಿರ್ವಹಣೆಯ ಕೊರತೆ

ಸಿದ್ದರಬೆಟ್ಟದ ದಾಸೋಹ ಭವನದಲ್ಲಿ ನಿರ್ವಹಣೆಯ ಕೊರತೆ
ಸಿದ್ದರಬೆಟ್ಟದ ದಾಸೋಹ ಭವನದಲ್ಲಿ ನಿರ್ವಹಣೆಯ ಕೊರತೆ
ತುಮಕೂರು

ಕೊರಟಗೆರೆ: 

ಸಿದ್ದರಬೆಟ್ಟ…ಸುಪ್ರಸಿದ್ದ ಪುಣ್ಯಕ್ಷೇತ್ರ, ಸಸ್ಯ ಸಂಜೀವಿನಿ ಎಂದೇ ಹೆಸರಾಗಿರೋ ಈ ಕ್ಷೇತ್ರ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಬೂದಗವಿ ಗ್ರಾಮ ಪಂಚಾಯ್ತಿಯ ವ್ಯಾಪ್ತಿಗೆ ಬರುತ್ತೆ. ಆದ್ರೆ ಈ ಸಿದ್ದರಬೆಟ್ಟ ಕ್ಷೇತ್ರದಲ್ಲಿ ದಾಸೋಹ ಭವನ ನಿರ್ವಹಣೆ ಇಲ್ಲದೇ 3 ವರ್ಷದಿಂದ ಅನಾರೋಗ್ಯಕ್ಕಿಡಾಗಿದ್ದು. ಇಲ್ಲಿ ನಿರ್ವಹಣೆಯೇ ಮರೀಚಿಕೆಯಾಗಿದೆ.

ಹೌದು ಸಿದ್ದರಬೆಟ್ಟ ಪುಣ್ಯಕ್ಷೇತ್ರ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಪ್ರಥಮ ದರ್ಜೆ ಸಹಾಯಕರನ್ನ ಇಓ ಆಗಿ ನೇಮಿಸಿದ್ದಾರೆ, ಆದ್ರೆ ಇಲ್ಲಿನ ದಾಸೋಹ ಭವನದಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ದಾನಿಗಳು ಶ್ರೀ ಕ್ಷೇತ್ರಕ್ಕೆ ಬರೋ ಭಕ್ತರಿಗೆ ಅನುಕೂಲ ಆಗಲೆಂದು ಅಕ್ಕಿ ನೀಡಿದ್ದಾರೆ, ಆದ್ರೆ ದಾಸೋಹದ 20 ಟನ್‌ ರಷ್ಟು ಅಕ್ಕಿ ಇಲಿ ಹೆಗ್ಗಣಗಳ ಪಾಲಾಗಿದ್ದು, ಅಕ್ಕಿಯಲ್ಲಿ ಉಳುಗಳು, ಇಲಿ ಹೆಗ್ಗಣಗಳ ಪಿಚ್ಚಿಗೆಗಳು ಬಿದ್ದಿವೆ, ಅಲ್ದೇ ದಾಸೋಹಕ್ಕೆ ಕೆಂಪು ಬಣ್ಣದ ಕಲುಷಿತ ನೀರು ಬಳಸ್ತಿದ್ದು, ಬರುವ ಭಕ್ತರಿಗೂ ಸಹ  ಈ ನೀರನ್ನೇ ನೀಡ್ತಾ ಇದಾರೆ, ಅಲ್ದೇ ಊಟಕ್ಕೆ ಬಳಸೋ ತಟ್ಟೆಗಳು ಸಹ ಧೂಳು ಹಿಡಿದಿದ್ರು ಅಧಿಕಾರಿಗಳು ಮಾತ್ರ ದಿವ್ಯನಿರ್ಲಕ್ಷ್ಯ ತೋರಿಸ್ತಾ ಇದಾರೆ,

ಇನ್ನು ಅಡುಗೆ ಭಟ್ಟರಿಲ್ಲದೇ ಸಹಾಯಕರಿಂದಲೇ ಅಡುಗೆ ತಯಾರು ಮಾಡಿಸ್ತಾ ಇದ್ದು, ಅಲ್ದೇ ಭಕ್ತರಿಗೆ ಕೆಂಪು ಬಣ್ಣದ ಕಲುಷಿತ ನೀರನ್ನೇ ಪೂರೈಕೆ ಮಾಡ್ತಾ ಇದಾರೆ. ಈ ಬಗ್ಗೆ ಪತ್ರಕರ್ತರು ಕಾರ್ಯ ನಿರ್ವಹಣಾ ಅಧಿಕಾರಿ ಸೌಭಾಗ್ಯಮ್ಮನಿಗೆ ಪ್ರಶ್ನಿಸಿದ್ರೇ ಇರುವುದು ಇದೇ ನೀರು ನಾವೇನು ಮಾಡೋಣ ಅಂತಾ ಉಢಾಫೆ ಉತ್ತರ ನೀಡ್ತಿದ್ದಾರೆ.

ಇನ್ನಾದ್ರೂ ಸಂಬಂಧಪಟ್ಟ ಮುಜರಾಯಿ ಇಲಾಖೆಯವ್ರು ಇದ್ರ ಬಗ್ಗೆ ಗಮನವಹಿಸಿ ಸೂಕ್ತ ಕ್ರಮ ಕೈಗೊಳ್ತಾರಾ ಕಾದು ನೋಡಬೇಕಿದೆ.

Author:

share
No Reviews