ಕುಣಿಗಲ್‌ : ವಾಮಚಾರ ಮಾಡಿ ತಗ್ಲಾಕೊಂಡ ಅಸಾಮಿ..!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತುಮಕೂರು

ಕುಣಿಗಲ್ : 

ಮನೆಯಲ್ಲಿ ಯಾರು ಇಲ್ಲದೆ ವೇಳೆ ವಾಮಾಚಾರ ಮಾಡಿದ್ದ ಆಸಾಮಿಯನ್ನು ಪೊಲೀಸರು ಬಂಧಿಸಿರುವ ಘಟನೆ ಕುಣಿಗಲ್‌ ತಾಲೂಕಿನ ಹುಲಿಯೂರು ದುರ್ಗ ವ್ಯಾಪ್ತಿಯಲ್ಲಿ ನಡೆದಿದೆ. ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಆರ್ ಬ್ಯಾಡರಹಳ್ಳಿ ಗ್ರಾಮದ ಚಂದ್ರಮ್ಮ ಎಂಬುವವರ ಮನೆಯಲ್ಲಿ ಯಾರು ಇಲ್ಲದ ವೇಳೆ ಬಂದ ಅದೇ ಗ್ರಾಮದ ಮೋಟೆಗೌಡ ಎಂಬಾತ ಮನೆಯ ಗೇಟ್ ಮೂಲಕ ಕೋಳಿ ಮೊಟ್ಟೆ, ನಿಂಬೆಹಣ್ಣು, ಅರಿಶಿನ, ಕುಂಕುಮ ತೆಗೆದುಕೊಂಡು ಬಂದು, ಕೋಳಿ ರಕ್ತ ಮತ್ತು ಬಟ್ಟೆಯನ್ನು ಎಸೆದು ವಾಮಾಚಾರ ಮಾಡಿದ್ದಾನೆ.

ವಾಮಾಚಾರದಿಂದ ಆತಂಕಕ್ಕೆ ಒಳಗಾದ ಚಂದ್ರಮ್ಮ ಮನೆಯವರು ಕೂಡಲೇ ಹುಲಿಯೂರು ದುರ್ಗ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಬೆನ್ನಲ್ಲೇ  ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿದ ಪೊಲೀಸರು ಮೋಟೆಗೌಡ ಅಲಿಯಾಸ್‌ ಕೃಷ್ಣಮೂರ್ತಿ ಎಂಬಾತನನ್ನು ಹುಲಿಯೂರು ದುರ್ಗ ಪೊಲೀಸರು ಬಂದಿಸಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆ ಚಂದ್ರಮ್ಮ ಮನೆಯಲ್ಲಿ ಖದೀಮರು 25 ಗ್ರಾಂ ಚಿನ್ನಾಭರಣ ಹಾಗೂ ಒಂದು ಲಕ್ಷ ನಗದು ಹಣವನ್ನು ದೋಚಿ ಪರಾರಿಯಾಗಿದ್ದರು. ಇದರಿಂದ ಅಲರ್ಟ್‌ ಆದ ಚಂದ್ರಮ್ಮನ ಮನೆಯವರು ಸುರಕ್ಷತೆಗಾಗಿ ಮನೆಗೆ ಸಿಸಿ ಕ್ಯಾಮೆರಾವನ್ನು ಅಳವಡಿಸಿದ್ದರು. ಸಿಸಿ ಕ್ಯಾಮೆರಾ ಹಾಕಿದ್ದರಿಂದ ವಾಮಾಚಾರ ಮಾಡಿದ ವ್ಯಕ್ತಿಯನ್ನು ಬಂಧಿಸಲು ಪೊಲೀಸರಿಗೆ ಸಹಾಯವಾಗಿದೆ, ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Author:

share
No Reviews