ಕೊರಟಗೆರೆ : ನಿಯಮಗಳನ್ನು ಗಾಳಿಗೆ ತೂರಿ ಕೈವಾರ ತಾತಯ್ಯ ಜಯಂತಿ..!

ಕೊರಟಗೆರೆ:

ರಾಜ್ಯದ ಸರ್ಕಾರಿ ಇಲಾಖೆಯಲ್ಲಿ ಮಹನೀಯರ ಜಯಂತಿಗಳನ್ನು ಗೌರವದಿಂದ ಆಚರಿಸುವುದು ಕಡ್ಡಾಯ ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾರ್ಗಸೂಚಿಯಂತೆ, 2025ನೇ ಸಾಲಿನ ಜಯಂತಿ ಉತ್ಸವಗಳನ್ನು ಸರಿಯಾದ ರೀತಿಯಲ್ಲಿ ಆಯೋಜಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೆ, ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ.

ಕೊರಟಗೆರೆ ತಾಲೂಕಿನ ಅಕ್ಕಿರಾಂಪುರ ಗ್ರಾಮ ಪಂಚಾಯ್ತಿಯಲ್ಲಿ ಶ್ರೀ ಕೈವಾರ ತಾತಯ್ಯ ಯೋಗಿ ನಾರೇಯಣರ ಜಯಂತಿ ಆಚರಣೆಯಲ್ಲಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿದೆ. ಸುಸಜ್ಜಿತ ಭಾವಚಿತ್ರವನ್ನು ಪ್ರದರ್ಶಿಸುವ ಬದಲಿಗೆ, ಕೇವಲ ಪ್ಲೇವುಡ್ ಅಥವಾ ವುಡ್ ಶೀಟ್ ಮೇಲೆ ಫೋಟೋ ಅಂಟಿಸಿ ಅವರ ಗೌರವವನ್ನು ತಗ್ಗಿಸುವ ರೀತಿಯಲ್ಲಿ ಕಾರ್ಯಕ್ರಮ ನಡೆಸಲಾಗಿದೆ.

ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿದಕ್ಕೆ ಸ್ಥಳೀಯರು ಹಾಗೂ ಕನ್ನಡಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹನೀಯರ ಆದರ್ಶ ಮತ್ತು ಅವರ ಕೊಡುಗೆಗಳಿಗೆ ಯೋಗ್ಯ ಗೌರವ ನೀಡುವ ಬದಲು, ಅನಾದರಯುಕ್ತವಾಗಿ ಆಚರಣೆ ಮಾಡಿರುವುದು ಅಪಮಾನದಂಶ ಎಂದು ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಮತ್ತು ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆಗ್ರಹಿಸಿದರು.


 

Author:

...
Editor

ManyaSoft Admin

Ads in Post
share
No Reviews