ಕೊರಟಗೆರೆ : ಪ್ರಜಾಶಕ್ತಿ ವರದಿಗೆ ಎಚ್ಚೆತ್ತ ಅಧಿಕಾರಿಗಳು | ಮರಗಳ ಮಾರಣಹೋಮಕ್ಕೆ ಬ್ರೇಕ್

ಅರಣ್ಯ ಇಲಾಖೆ ನೋಟಿಸ್‌ ನೀಡಿರುವುದು.
ಅರಣ್ಯ ಇಲಾಖೆ ನೋಟಿಸ್‌ ನೀಡಿರುವುದು.
ತುಮಕೂರು

ಕೊರಟಗೆರೆ:

ಕೊರಟಗೆರೆ ತಾಲೂಕು ಕಸಬಾ ಹೋಬಳಿ ತೀತಾ ಗ್ರಾಮ ಪಂಚಾಯಿತಿಯ ಮಾದವಾರದಿಂದ ಕ್ಯಾಮೇನಹಳ್ಳಿ ಕ್ರಾಸಿನವರೇಗೆ ರಸ್ತೆಯ ಅಗಲೀಕರಣದ ನೆಪದಿಂದ ಹತ್ತಾರು ವರ್ಷದಿಂದ ಬೆಳೆಸಿದ್ದ ನೂರಾರು ಮರಗಳಿಗೆ ಅಧಿಕಾರಿಗಳು ಕೊಡಲಿ ಪೆಟ್ಟು ಹಾಕ್ತಿದ್ದರು. ಈ ಬಗ್ಗೆ ಪ್ರಜಾಶಕ್ತಿಯು ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಗುತ್ತಿಗೆದಾರ ಹಾಗೂ ವ್ಯವಸ್ಥಾಪಕನ ವಿರುದ್ಧ ದೂರು ದಾಖಲಿಸಿದ್ದಾರೆ.

ಪಿಡ್ಲ್ಯೂಡಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಗುತ್ತಿಗೆದಾರನ ಕೆಂಗಣ್ಣಿಗೆ ಗುರಿಯಾಗಿದ್ದ ಮರಗಳನ್ನು ಗುತ್ತಿಗೆದಾರ ರಾತ್ರೋ ರಾತ್ರಿ ಗಿಡಗಳನ್ನು ನೆಲಕ್ಕೆ ಉರುಳಿಸುವ ಕೆಲಸವನ್ನು ಮಾಡುತ್ತಿದ್ದರು. ಇದರಿಂದ ಹತ್ತಾರು ವರ್ಷಗಳಿಂದ ಬೆಳೆಸಿದ್ದ ಮರಗಳು ನಾಶವಾಗುತ್ತಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಯಾವಾಗ ಈ ಬಗ್ಗೆ ಪ್ರಜಾಶಕ್ತಿ ವರದಿ ಮಾಡಿತ್ತೋ, ಕೂಡಲೇ ಕೊರಟಗೆರೆ ಅರಣ್ಯ ಇಲಾಖೆ ಸುರೇಶ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ, ರಸ್ತೆ ಅಕ್ಕಪಕ್ಕದ ಗಿಡಗಳ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಈ ಸಂಬಂಧ ತುಮಕೂರಿನ ಗುತ್ತಿಗೆದಾರ ನಾರಾಯಣಪ್ಪ ಮತ್ತು ಚಿತ್ರದುರ್ಗದ ವ್ಯವಸ್ಥಾಪಕ ಚನ್ನೇಗೌಡ ವಿರುದ್ದ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದ್ದು, ಸುಮಾರು 1500 ಕೆಜಿ ಹೊಂಗೆ, ರೈನ್ ಟ್ರೀ ಮತ್ತು ಇತರೆ ಮರಗಳ ಜೊತೆ ಇಟಾಚಿಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

 

Author:

...
Editor

ManyaSoft Admin

Ads in Post
share
No Reviews