ಕೊರಟಗೆರೆ:
ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೊರಟಗೆರೆಯಲ್ಲಿ ಹೊನಲು ಬೆಳಕಿನ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ. ನಾಳೆಯಿಂದ ಎರಡು ದಿನಗಳ ಕಾಲ ಕೊರಟಗೆರೆ ಪಟ್ಟಣದ ಜ್ಯೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಡಾ.ಜಿ ಪರಮೇಶ್ವರ್ ಕಪ್ ಪಂದ್ಯಾವಳಿ ನಡೆಯಲಿದ್ದು, ರಾಜ್ಯದ 24 ಪ್ರತಿಷ್ಠಿತ ತಂಡಗಳು ಈ ಟೂರ್ನಿಯಲ್ಲಿ ಭಾಗಿಯಾಗಲಿವೆ. ಈ ಬಗ್ಗೆ ಪಟ್ಟಣ ಪಂಚಾಯ್ತಿ ಸದಸ್ಯ ನಂದೀಶ್ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೊರಟಗೆರೆ ಪಟ್ಟಣದಲ್ಲಿ ಆಯೋಜನೆ ಮಾಡಲಾಗಿರೋ ಪರಮೇಶ್ವರ್ ಕಪ್ ಬಗ್ಗೆ ಮಾಹಿತಿ ತಿಳಿಸಲು ಪಟ್ಟಣದ ರಾಜೀವ್ ಗಾಂಧಿ ಭವನದಲ್ಲಿ ಸುದ್ದಿಗೋಷ್ಠಿ ಆಯೋಜನೆ ಮಾಡಲಾಗಿತ್ತು. ಪತ್ರಿಕಾಗೋಷ್ಠಿಯಲ್ಲಿ ಕ್ರಿಕೆಟ್ ಟೂರ್ನಿ ಬಗ್ಗೆ ಕಾಂಗ್ರೆಸ್‌ನ ಮುಖಂಡರು ಮಾಹಿತಿಯನ್ನು ಹಂಚಿಕೊಂಡರು. ಪಟ್ಟಣ ಪಂಚಾಯ್ತಿಯ ಮತ್ತೊಬ್ಬ ಸದಸ್ಯರಾಗಿರೋ ನರಸಿಂಹಪ್ಪ ಮಾತನಾಡಿ, ಡಾ.ಅಂಬೇಡ್ಕರ್ ಜಯಂತಿ ಅಂಗವಾಗಿ ಪರಮೇಶ್ವರ್ ಕಪ್‌ನನ್ನು ಆಯೋಜನೆ ಮಾಡಲಾಗಿದ್ದು, ಇದು ಕೊರಟಗೆರೆ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರೋ ವಿಶೇಷವಾಗಿದೆ. ಟೂರ್ನಿಯಲ್ಲಿ ಗೆದ್ದ ಮ್ಯಾನ್ ಆಫ್ ದ ಮ್ಯಾಚ್ ಗೆ ಟಿವಿಎಸ್ ಬೈಕ್‌ನನ್ನು ಬಹುಮಾನವಾಗಿ ನೀಡಲಾಗುವುದು ಎಂದು ತಿಳಿಸಿದರು.
ಇನ್ನು ಈ ಕ್ರಿಕೆಟ್ ಟೂರ್ನಿಯಲ್ಲಿ ಬೆಂಗಳೂರು, ಹಾಸನ, ತುಮಕೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದಲೂ ಭಾಗವಹಿಸುತ್ತಾರೆ, ಪರಮೇಶ್ವರ್ ಟೂರ್ನಿಯಲ್ಲಿ ಪ್ರಥಮ ಬಹುಮಾನವಾಗಿ 2 ಲಕ್ಷದ 22 ಸಾವಿರದ ಇನ್ನೂರ ಇಪ್ಪೇರಡು, ಎರಡನೇ ಬಹುಮಾನ ಒಂದು ಲಕ್ಷದ ಹನ್ನೋಂದು ಸಾವಿರದ ನೂರಾ ಹನ್ನೋಂದು ರೂಪಾಯಿ ಸೇರಿ ತೃತೀಯ ಬಹುಮಾನ, ಚತುರ್ಥ ಬಹುಮಾನ ನೀಡಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರ್ಕೆರೆ ಶಂಕರ್ ತಿಳಿಸಿದ್ರು. ಅಲ್ಲದೇ ಕ್ರಿಕೆಟ್ ಪಂದ್ಯ ಆಯೋಜಿಸಲು ಉತ್ತೇಜನ ನೀಡುವ ನಿಟ್ಟಿನಲ್ಲಿ ಪರಮೇಶ್ವರ್ ಮಾತಿನಂತೆ ಈ ಟೂರ್ನಿಯನ್ನು ನಡೆಸಲಾಗುವುದು ಎಂದು ತಿಳಿಸಿದರು.