ಕೊರಟಗೆರೆ: ಹೊಳೆನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ವಿ. ಸೋಮಣ್ಣ ಪತ್ನಿ

ಹೊಳೆನಂಜುಂಡೇಶ್ವರಸ್ವಾಮಿ
ಹೊಳೆನಂಜುಂಡೇಶ್ವರಸ್ವಾಮಿ
ತುಮಕೂರು

ಕೊರಟಗೆರೆ:

ಮಹಾಶಿವರಾತ್ರಿ ಹಿನ್ನೆಲೆ ಬುಧವಾರ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಇತಿಹಾಸ ಪ್ರಸಿದ್ಧ ಹೊಳೆನಂಜುಂಡೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದಿದ್ದು, ಕೇಂದ್ರ ಸಚಿವ, ತುಮಕೂರು ಸಂಸದ ವಿ.ಸೋಮಣ್ಣ ಪತ್ನಿ ಶೈಲಜಾ ಸೋಮಣ್ಣ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ, ಹೊಳೆನಂಜುಂಡೇಶ್ವರನ ದರ್ಶನ ಪಡೆದರು.

ಲೋಕಸಭಾ ಚುನಾವಣೆಗೂ ಮುನ್ನ ವಿ.ಸೋಮಣ್ಣ ತಮ್ಮ ಕುಟುಂಬ ಸಮೇತ ಈ ಹೊಳೆನಂಜುಂಡೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು. ಇದೀಗ ವಿ.ಸೋಮಣ್ಣ ಅನುಪಸ್ಥಿತಿಯಲ್ಲಿ ಸೋಮಣ್ಣ ಪತ್ನಿ ಶೈಲಜಾ ಸೋಮಣ್ಣ ದೇವರ ದರ್ಶನ ಪಡೆದು ಪುನೀತರಾದರು. ಬಳಿಕ ಮಾತನಾಡಿದ ಅವರು, ಹೊಳೆನಂಜುಂಡೇಶ್ವರನ ಕೃಪೆಯಿಂದ ಲೋಕಸಭೆ ಚುನಾವಣೆಯಲ್ಲಿ ಸೋಮಣ್ಣ ಗೆಲುವು ಸಾಧಿಸಿದ್ದಾರೆ. ಇದೀಗ ಮೋದಿ ಸರ್ಕಾರದಲ್ಲಿ ಮಂತ್ರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಸೋಮಣ್ಣ ಅನುಪಸ್ಥಿತಿಯಲ್ಲಿ ದೇವಾಲಯಕ್ಕೆ ಬರಲು ಅವಕಾಶ ಸಿಕ್ಕಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿದರು. ಹಾಗೂ ಹೊಳೆನಂಜುಂಡೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಶೈಲಜಾ ಸೋಮಣ್ಣ ಅವರಿಗೆ ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದರು.

Author:

...
Editor

ManyaSoft Admin

Ads in Post
share
No Reviews