ಕೊರಟಗೆರೆ: ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಸಚಿವ ಪರಮೇಶ್ವರ್

ಗೃಹ ಸಚಿವ ಪರಮೇಶ್ವರ್‌ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೇರವೆರಿಸಿದರು.
ಗೃಹ ಸಚಿವ ಪರಮೇಶ್ವರ್‌ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೇರವೆರಿಸಿದರು.
ತುಮಕೂರು

ಕೊರಟಗೆರೆ:

ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜಿಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಪೇನಹಳ್ಳಿ ಕ್ರಾಸಿನ ಬಳಿ PWD ಇಲಾಖೆಯಿಂದ ಏರ್ಪಡಿಸಿದ್ದ 26 ಕೋಟಿ ವೆಚ್ಚದ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಗುದ್ದಲಿ ಪೂಜೆಯನ್ನು ನೇರವೆರಿಸಿದರು.

ನಂತರ ಗೃಹಸಚಿವ ಡಾ.ಜಿ ಪರಮೇಶ್ವರ್‌ರವರು ಮಾತನಾಡಿ ನಾನು ಕೊರಟಗೆರೆ ಕ್ಷೇತ್ರಕ್ಕೇ ಬಂದ ನಂತರ 5ನೇ ಸಲ ಮುಖ್ಯ ರಸ್ತೆ ಅಭಿವೃದ್ದಿ ಮಾಡುತ್ತಿದ್ದಿನಿ, 5 ವರ್ಷ ಬಾಳಿಕೆ ಬರುವಂತೆ ಗುತ್ತಿಗೆದಾರನೇ ಗುಣಮಟ್ಟದ ರಸ್ತೆ ನಿರ್ವಹಣೆ ಮಾಡಬೇಕು, ಇಲ್ಲಾ ಅಂದರೆ ನಾನು ಸುಮ್ಮನೇ ಇರೋವುದಿಲ್ಲ ಎಚ್ಚರಿಕೆ ಅಂದರು, ಹಾಗೂ ಗ್ರಾಮೀಣ ಭಾಗದ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡುವಂತೆ ಸಿಎಂ ಗೆ ನಾನು ಮನವಿ ಮಾಡಿದ್ದೇನೆ, ಗ್ಯಾರಂಟಿ ಯೋಜನೆ ಜೊತೆ ಗ್ರಾಮೀಣ ಭಾಗದ ಅಭಿವೃದ್ದಿಯು ಆಗಲಿದೆ. ಟೀಕೆ ಮಾಡೋರಿಗೆ ಅಭಿವೃದ್ದಿಯ ಉತ್ತರವನ್ನೇ ನೀಡೋಣ ಎಂದು ಹೇಳಿದರು.

ಬಜೆಟ್‍ನಲ್ಲಿ ತುಮಕೂರು ಜಿಲ್ಲೆ ಮತ್ತು ಕೊರಟಗೆರೆ ಕ್ಷೇತ್ರದ ನೀರಾವರಿ ಯೋಜನೆಗೆ ಹೆಚ್ಚಿನ ಅನುಧಾನ ಸಿಗಲಿದೆ. ಕೊರಟಗೆರೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮಾಡಲು ಈಗಾಗಲೇ ಸರಕಾರ ಚಿಂತನೆ ನಡೆಸುತ್ತಿದೆ. ಜಂಪೇನಹಳ್ಳಿ ಕ್ರಾಸ್‍ನಲ್ಲಿ ಕುಡಿಯುವ ನೀರು, ಹೈಮಾಸ್ಕ್ ಲೈಟ್ ವ್ಯವಸ್ಥೆ ಮಾಡಿಸುತ್ತೇನೆ. ಸರ್ಕಾರದಲ್ಲಿ ದುಡ್ಡಿಲ್ಲ ಅಭಿವೃದ್ದಿ ಕೆಲಸಗಳು ಆಗ್ತಿಲ್ಲ ಎಂಬ ತಪ್ಪು ಸಂದೇಶ ನೀಡ್ತಿದ್ದಾರೆ. 5 ಗ್ಯಾರಂಟಿಯ ಬಗ್ಗೆ ಟೀಕೆ ಮಾಡಿದೋರು ಈಗ ಅದರ ಲಾಭ ಪಡೆಯುತ್ತಿಲ್ಲವೇ ಎಂದರು. ಜಂಪೇನಹಳ್ಳಿಯಿಂದ ಶ್ರೀನಿವಾಸಪುರಕ್ಕೆ 6 ಕೋಟಿ, ಕೋಳಾಲದಿಂದ ತಿಮ್ಮಸಂದ್ರಕ್ಕೆ 11ಕೋಟಿ, ಮತ್ತು ಮಧುಗಿರಿಯಿಂದ ಹಿಂದುಪುರಕ್ಕೆ 8ಕೋಟಿ ವೆಚ್ಚದ ರಸ್ತೆಗೆ ಅನುದಾನ ನೀಡಿದ್ದೇನೆ ಎಂದರು.

ಇನ್ನು ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್, ಎಸ್ಪಿ ಅಶೋಕ್, ಕೊರಟಗೆರೆ ತಹಶೀಲ್ದಾರ್ ಮಂಜುನಾಥ.ಕೆ, ಪಿಡ್ಲ್ಯೂಡಿ ಎಇಇ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಗ್ರಾಪಂ ಅಧ್ಯಕ್ಷ ಪುಪ್ಪ ರವಿಕುಮಾರ್, ಮಾಜಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ, ಮುಖಂಡರಾದ ಮಹಾಲಿಂಗಪ್ಪ, ಟೈಗರ್ ನಾಗ್, ಪ್ರಸನ್ನಕುಮಾರ್, ಮಂಜುನಾಥ, ಕಿರಣ್, ರಂಗರಾಜು ಮುಂತಾದವರು ಉಪಸ್ಥಿತರಿದ್ದರು.

Author:

...
Editor

ManyaSoft Admin

Ads in Post
share
No Reviews