ಕೊರಟಗೆರೆ:
ಕೊರಟಗೆರೆ ತಾಲೂಕು ಕೋಳಾಲ ಹೋಬಳಿಯ ಯಲಚಗೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗದ ಪಾಳು ಬಾವಿಯಲ್ಲಿ ಕಳೆದ ಮೂರು ದಿನದ ಹಿಂದೆ ಚಿರತೆಯೊಂದು ಬಿದ್ದಿದ್ದು. ಚಿರತೆಯನ್ನು ರಕ್ಷಣೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಹಾರ ಅರಸಿ ಅರಣ್ಯದಿಂದ ಊರಿಗೆ ಬಂದಿದ್ದ ಚಿರತೆಯೊಂದು ಕಳೆದ ಮೂರು ದಿನಗಳ ಹಿಂದೆ ಆಯಾತಪ್ಪಿ ಯಲಚಗೆರೆಯ ಪಾಳುಬಾವಿಗೆ ಬಿದ್ದಿದ್ದು, ಬಾವಿಯಲ್ಲಿ ಬಿದ್ದು ನರಳಾಡುತ್ತಿದ್ದ ಚಿರತೆಯನ್ನು ಕಂಡ ಗ್ರಾಮಸ್ಥರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣವೇ ಅರಣ್ಯ ಇಲಾಖೆಯ ಸುರೇಶ್ ಮತ್ತು ಪೊಲೀಸ್ ಇಲಾಖೆಯ PSI ಯೋಗಿಶ್ ನೇತೃತ್ವದ ತಂಡ ಸ್ಥಳಕ್ಕೇ ಆಗಮಿಸಿ, ಬಾವಿಯಲ್ಲಿ ಬಿದ್ದು ನರಳಾಡುತ್ತಿದ್ದ ಚಿರತೆಯನ್ನು ಯಲಚಗೆರೆ ಗ್ರಾಮಸ್ಥರ ಸಹಾಯದಿಂದ ಪಾಳುಬಾವಿಯೊಳಗೆ ಬೋನು ಬಿಟ್ಟು, ಅದರೊಳಗೆ ಚಿರತೆ ಬರುವ ತನಕ ತಡರಾತ್ರಿಯವರೆಗೆ ಕಾರ್ಯಚರಣೆ ನಡೆಸಿ ಚಿರತೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಿಗೆ ತೆಗೆದುಕೊಂಡು ಹೋಗಿ ಬಿಟ್ಟು ಬರುವಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಯಶಸ್ವಿಯಾಗಿದ್ದಾರೆ.