ಕೊರಟಗೆರೆ : ಡಿಕೆ ಸಂವಿಧಾನ ವಿರೋಧಿ ಹೇಳಿಕೆ | ಕೊರಟಗೆರೆಯಲ್ಲಿ ಬಿಜೆಪಿ ಪ್ರತಿಭಟನೆ

ಕೊರಟಗೆರೆಯಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ ಮಾಡಿರುವುದು.
ಕೊರಟಗೆರೆಯಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ ಮಾಡಿರುವುದು.
ತುಮಕೂರು

ಕೊರಟಗೆರೆ : 

ರಾಜ್ಯ ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯ ಮತ್ತು ಇತ್ತೀಚೆಗೆ ಖಾಸಗಿ ವಾಹಿನಿಯೊಂದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ನೀಡಿರುವ ಸಂವಿಧಾನ ವಿರೋಧಿ ಹೇಳಿಕೆಯನ್ನು ಖಂಡಿಸಿ ಕೊರಟಗೆರೆ ಪಟ್ಟಣದ ಎಸ್‌ ಎಸ್‌ ಆರ್‌ ವೃತ್ತದಿಂದ ತಾಲೂಕು ಕಚೇರಿವರರೆಗೆ ಬಿಜೆಪಿ ಪಕ್ಷದಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಸರ್ಕಾರ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

ಬಿಜೆಪಿ ಮಂಡಲ ತಾಲೂಕು ಅಧ್ಯಕ್ಷ ರುದ್ರೇಶ್‌ ಮಾತನಾಡಿ, ಕಾಂಗ್ರೆಸ್‌ ಸರ್ಕಾರದ ಮುಖವಾಡ ಕಳಚಿ ಬಿದ್ದಿದ್ದು, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿಂದಲೂ ನೆಹರೂ, ರಾಹುಲ್‌ಗಾಂಧೀ, ಮಲ್ಲಿಕಾರ್ಜುನ್‌ ಖರ್ಗೆ ನೇತೃತ್ವದ ಸರ್ಕಾರ ಚುಕ್ಕಾಣಿ ಹಿಡಿದ ದಿನದಿಂದಲೂ ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡೋದ್ರಲ್ಲೇ ಸೀಮಿತವಾಗಿದೆ. ಸಂವಿಧಾನ ವಿರೋಧಿ ಡಿ.ಕೆ ಶಿವಕುಮಾರ್‌ ನಿಲುವನ್ನು ಬಿಜೆಪಿ ಪಕ್ಷ ಖಂಡಿಸಿದ್ದು, ದಲಿತರ ಮತ್ತು ಹಿಂದುಳಿದ ವರ್ಗಕ್ಕೆ ಸಂವಿಧಾನ ನೀಡಿರುವ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ರಾಜ್ಯ ಸರ್ಕಾರ ಮಾಡ್ತಿದೆ ಎಂದು ಆರೋಪಿಸಿದರು.

ಇನ್ನು ತಾಲೂಕು ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಪವನ್‌ ಕುಮಾರ್‌ ಮಾತನಾಡಿ ಮುಂಚಿನಿಂದಲೂ ಕಾಂಗ್ರೇಸ್‌ ಸರ್ಕಾರ ಬಂದರೆ ತುಘಲಕ್‌ ಸರ್ಕಾರ ಬಂದಾಗೆ ಆಗುತ್ತೆ ಅಂತ ಹೇಳುತ್ತಿದ್ದು, ಯಾವಾಗಲೂ ಇವರ ನಿರ್ಧಾರಗಳು ಜನ ವಿರೋಧಿ ಆಗಿರುತ್ತೆ, ಇದರಿಂದ ಜನಸಾಮಾನ್ಯರಿಗೆ ಅನಾನುಕೂಲವೇ ಜಾಸ್ತಿ ಆಗ್ತಿದೆ. ಅಲ್ಲದೇ ಕೆಪಿಸಿಸಿ ಅಧ್ಯಕ್ಷರಾಗಿ ಹಾಗೂ ಉಪ ಮುಖ್ಯಮಂತ್ರಿಗಳಾಗಿ ಕೂಡ ಸಂವಿಧಾನ ಬದಲಾಯಿಸ್ತಿವಿ ಅಂತ ಹೇಳ್ತಿದ್ದು, ರಾಜ್ಯಪಾಲರು ಸರ್ಕಾರದ ಈ ದುರಾಡಳಿತಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.

ಒಟ್ಟಿನಲ್ಲಿ ಡಿಕೆಶಿ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಕೇವಲ ರಾಜ್ಯದಲ್ಲಿ ಮಾತ್ರವಲ್ಲ, ರಾಷ್ಟ್ರದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಕಾಂಗ್ರೆಸ್‌ಗೆ ಇದು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.

Author:

...
Editor

ManyaSoft Admin

share
No Reviews