ಕೊರಟಗೆರೆ : ಫೈನಾನ್ಸ್‌ ಗಳ ಕಾಟಕ್ಕೆ ವಿಶೇಷಚೇತನ ಮಕ್ಕಳೊಂದಿಗೆ ಊರನ್ನೇ ಬಿಟ್ಟ ದಂಪತಿ...!

ಮನೆಯನ್ನು ಫೈವ್‌ ಸ್ಟಾರ್‌ ಕಂಪನಿಯವರು ಸೀಜ್‌ ಮಾಡಿರುವುದು.
ಮನೆಯನ್ನು ಫೈವ್‌ ಸ್ಟಾರ್‌ ಕಂಪನಿಯವರು ಸೀಜ್‌ ಮಾಡಿರುವುದು.
ತುಮಕೂರು

ಕೊರಟಗೆರೆ :

ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ರಾಜ್ಯಾದ್ಯಂತ ಅಮಾಯಕ ಜೀವಗಳು ಬಲಿಯಾಗುತ್ತಿದ್ದರೆ, ಕೆಲವರು ಊರನ್ನೇ ಬಿಟ್ಟು ಹೋಗ್ತಿದ್ದಾರೆ. ಇತ್ತ ಗೃಹ ಸಚಿವರ ಸ್ವಕ್ಷೇತ್ರ ಕೊರಟಗೆರೆಯಲ್ಲೂ ಮೈಕ್ರೋ ಫೈನಾನ್ಸ್‌ಗಳ ಕಾಟ ಮೀತಿ ಮೀರಿದೆ, ಅದು ಎಷ್ಟರ ಮಟ್ಟಿಗೆ ಅಂದರೆ ಜೀವ ಕಳೆದು ಕೊಳ್ಳುವಷ್ಟು, ಊರನ್ನೇ ತೊರೆಯುವಷ್ಟು ಕಿರುಕುಳ ಕೊಡ್ತಾ ಇದ್ದಾರೆ. ಪ್ರತಿದಿನ ಬೆಳಗಾದರೆ ಮೈಕ್ರೋ ಫೈನಾನ್ಸ್‌ ಹಾವಳಿಗೆ ಅಷ್ಟು ಜನ ಬಲಿಯಾದ್ರು ಅಂತಾ ವರದಿಯಾಗುತ್ತಲೇ ಇವೆ. ಈ ನಡುವೆ ಗೃಹಸಚಿವರ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲೂ ಮೈಕ್ರೋ ಫೈನಾನ್ಸ್‌ ಕಾಟ ಎಲ್ಲೆ ಮೀರುತ್ತಿದೆ.

ತಮಿಳುನಾಡು ಮೂಲದ ಖಾಸಗಿ ಫೈನಾನ್ಸ್ ಗಳು ಕರ್ನಾಟಕದಲ್ಲಿ ಅದರಲ್ಲೂ ಕೊರಟಗೆರೆಯಲ್ಲಿ ನಾಯಿಕೊಡೆಗಳಂತೆ  ತಮ್ಮ ಆರ್ಭಟ ಮಾಡುತ್ತಿವೆ. ಈ ಫೈನಾನ್ಸ್‌ಗಳು ಅಮಾಯಕರು, ಬಡವರನ್ನೇ ಟಾರ್ಗೆಟ್‌ ಮಾಡ್ತಿವೆ. ಫೈನಾನ್ಸ್‌ ಕಂಪನಿಗಳ ಕಾಟಕ್ಕೆ ವಿಶೇಷಚೇತನ ಮಕ್ಕಳೊಂದಿಗೆ ದಂಪತಿ ಊರು ಬಿಟ್ಟಿದ್ದಾರೆ.

ಹೌದು, ಕೊರಟಗೆರೆ ತಾಲೂಕಿನ ಕುರಂಕೋಟೆ ಗ್ರಾಮದಲ್ಲಿ ಫೈನಾನ್ಸ್‌ಗಳ ಕಾಟ ತಾಳಲಾಗದೇ ಇಬ್ಬರು ವಿಶೇಷಚೇತನ ಮಕ್ಕಳೊಂದಿಗೆ ವಿನುತಾ, ಮಾರುತಿ ದಂಪತಿ ಊರನ್ನೇ ತೊರೆದಿದ್ದಾರೆ. ಈ ದಂಪತಿಗಳು ಮಕ್ಕಳ ಚಿಕಿತ್ಸೆಗೆಂದು ಫೈವ್‌ಸ್ಟಾರ್‌ ಎಂಬ ಮೈಕ್ರೋ ಫೈನಾನ್ಸ್‌ ಕಂಪನಿಯಲ್ಲಿ ಎರಡೂವರೆ ಲಕ್ಷ ಸಾಲ ಮಾಡಿದ್ದರು. ಆ ಸಾಲಕ್ಕೆ ಬಡ್ಡಿ ಸಮೇತ ಸುಮಾರು 4 ಲಕ್ಷದ 70 ಸಾವಿರ ಹಣವನ್ನು‌ ಫೈನಾನ್ಸ್ ಕಂಪನಿಗೆ ದಂಪತಿ ಕಟ್ಟಿದ್ದರು. ಇಷ್ಟು ಹಣ ಕಟ್ಟಿದ್ದರು ಕೂಡ ಇನ್ನು ಕಟ್ಟಬೇಕು ಎಂದು ಫೈನಾನ್ಸ್‌ ಸಿಬ್ಬಂದಿ ಕಾಟ ಕೊಡ್ತಾ ಇದ್ದು, ಮನೆಯನ್ನೇ ಸೀಜ್‌ ಮಾಡಿ, ಮನೆಯ ಮೇಲೆ ಈ ಸ್ವತ್ತು ಫೈವ್‌ ಸ್ಟಾರ್‌ ಕಂಪನಿಗೆ ಅಡಮಾನವಾಗಿದೆ ಎಂದು ಬರೆದಿದ್ದಾರೆ.

ಇದರಿಂದ ಅವಮಾನಗೊಂಡ ದಂಪತಿ ಮಕ್ಕಳ ಸಮೇತ ರಾತ್ರೋ ರಾತ್ರಿ ಊರು ಬಿಟ್ಟು ಬೆಂಗಳೂರಿಗೆ ಸೇರಿದ್ದಾರೆ. ಎಂದು ಸಂಬಂಧಿಕರು ಫೈನಾನ್ಸ್‌ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದೇನೆ ಆಗಲಿ, ಫೈನಾನ್ಸ್‌ ಕಂಪನಿಗಳು ಬಡ ಜೀವಿಗಳ ರಕ್ತ ಹೀರುತ್ತಿದ್ದು, ಬಡ ಕುಟುಂಬಗಳು ದಿಕ್ಕು ತೋರದೆ ಕಂಗಾಲಾಗಿ ಊರು ಬಿಡುತ್ತಿದ್ದಾರೆ. ಕೂಡಲೇ ಫೈನಾನ್ಸ್‌ ಕಂಪನಿಗಳಿಗೆ ಮೂಗುದಾರ ಹಾಕಬೇಕಿದೆ ಎಂದು ಸಾರ್ವಜನಿಕರ ಆಗ್ರಹವಾಗಿದೆ.

Author:

share
No Reviews