ಕೊಪ್ಪಳ : ಕೊಪ್ಪಳದಲ್ಲಿ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ | ಆರೋಪಿಗಳಿಗಾಗಿ ಹುಡುಕಾಟ

ಕೊಪ್ಪಳ:

ನಕ್ಷತ್ರ ವೀಕ್ಷಣೆಗೆ ಬಂದಿದ್ದ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ವೆಸಗಿರುವಂತಹ ಘಟನೆಯೊಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪೂರ ಗ್ರಾಮದ ಬಳಿ ನಡೆದಿದೆ.

ಗಂಗಾವತಿ ತಾಲೂಕಿನ ಸಾಣಾಪೂರ ಗ್ರಾಮದ ಕಾಲುವೆ ಬಳಿ ಈ ಘಟನೆ ನಡೆದಿದೆ. ರೆಸಾರ್ಟ್‌ನಲ್ಲಿ ತಂಗಿದ್ದ ಅಮೇರಿಕ ಹಾಗೂ ಇಸ್ರೇಲ್‌, ಒಡಿಸಾ ಮೂಲದ ಪ್ರವಾಸಿಗರನ್ನು ನೆನ್ನೆ ರಾತ್ರಿ ನಕ್ಷತ್ರ ವೀಕ್ಷಣೆಗೆ ತುಂಗಾಭದ್ರಾ ಕಾಲುವೆ ಬಳಿ ರೆಸಾರ್ಟ್‌ ಒಡತಿ ಕರೆತಂದಿದ್ದರು. ಎಲ್ಲರೂ ಸೇರಿ ಗೀಟಾರ್‌ ಬಾರಿಸುತ್ತ ಪಾರ್ಟಿ ಮಾಡುತ್ತಿದ್ದಾಗ, ಸ್ಕೂಟರ್‌ ನಲ್ಲಿ ಬಂದ ಮೂವರು ಯುವಕರು ಪ್ರವಾಸಿಗರ ಹತ್ತಿರ ಹಣಕ್ಕೆ ಡಿಮ್ಯಾಂಡ್‌ ಮಾಡಿ ನೀಡದಿದ್ದಾಗ ಹಣದ ಬ್ಯಾಗ್‌ ಅನ್ನು ಕಸಿದುಕೊಂಡಿದ್ದಾರೆ.

ಈ ವೇಳೆ ಗಲಾಟೆ ಉಂಟಾಗಿ ಯುವಕರು ಪ್ರವಾಸಿಗರನ್ನು ಕಾಲುವೆಗೆ ತಳ್ಳಿದ್ದಾರೆ, ನಂತರ ಇಸ್ರೇಲ್‌ ನ ಮಹಿಳೆ ಹಾಗೂ ರೆಸಾರ್ಟ್‌ ಒಡತಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಕಾಲುವೆಗೆ ಬಿದ್ದ ಡ್ಯಾನಿಯಲ್‌ ಮತ್ತು ಪಂಕಜ್‌ ಪಟೇಲ್‌ ಎಂಬುವವರು ಈಜಿ ದಡ ಸೇರಿದ್ದು, ಇನ್ನೋರ್ವ ಒಡಿಸಾ ಮೂಲದ ವ್ಯಕ್ತಿ ಬಿಬಾಸ್‌ ಎಂಬುವರು ನಾಪತ್ತೆಯಾಗಿದ್ದು ಹುಡುಕಾಟ ಆರಂಭಿಸಲಾಗಿದೆ.

ಇನ್ನು ಸಂತ್ರಸ್ತ ಮಹಿಳೆಯರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲಾಗ್ತಿದೆ,‌ ಘಟನಾ ಸ್ಥಳಕ್ಕೆ ಐಜಿ ಲೋಕೆಶ್‌ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .ಕೊಪ್ಪಳ ಎಸ್‌ ಪಿ ನೇತೃತ್ವದಲ್ಲಿ 6 ತಂಡಗಳ ರಚನೆ ಮಾಡಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

Author:

...
Editor

ManyaSoft Admin

share
No Reviews