ಬಗೆ ಬಗೆಯ ಪಾಯಸ ಮಾಡುವ ವಿಧಾನ ಹೇಗೆ ಗೊತ್ತಾ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಆರೋಗ್ಯ-ಜೀವನ ಶೈಲಿ

* ಪಾಯಸ *

ಪಾಯಸವು ದಕ್ಷಿಣ ಭಾರತದ ಒಂದು ಪ್ರಸಿದ್ಧ ಸಿಹಿಯಾದ, ಸುವಾಸಿತವಾದ, ಹೆಚ್ಚಾಗಿ ಭೋಜನದ ಬಳಿಕ ತಿನ್ನುವ ತಿನಿಸಾಗಿದೆ. ಇದು ಹೆಚ್ಚಾಗಿ ಹಬ್ಬ, ವಿಶೇಷ ದಿನದಂದು ತಯಾರಿಸುತ್ತಾರೆ. ಪಾಯಸ ತುಂಬಾ ಮುಖ್ಯ ತಿನಿಸಾಗಿದ್ದು, ಇದನ್ನು ಮಗುವಿನ ಅನ್ನಪ್ರಾಶನದಲ್ಲೂ ಬಳಸುತ್ತಾರೆ. ಈಗಂತೂ ನೂರಾರು ಬಗೆಬಗೆಯ ಪಾಯಸಗಳನ್ನು ಮಾಡುವ ಕ್ರಮ ರೂಢಿಯಲ್ಲಿದೆಪಾಯಸ ಎಂಬುದು ದ್ರವರೂಪದ / ಅರೆ ಘನರೂಪದ ಸಿಹಿಭಕ್ಷ್ಯವಾಗಿದೆ. ಹಬ್ಬಗಳು ಮತ್ತು ಸಮಾರಂಭಗಳಲ್ಲಿ ಪಾಯಸ ಭೋಜನದ ಅವಿಭಾಜ್ಯ ಅಂಗ. ಹೊಟ್ಟೆ ತುಂಬಾ ಊಟ ಮಾಡಿದ್ದರೂ ಸಹ ಒಂದು ಕಪ್ ರುಚಿಯಾದ ಪಾಯಸವನ್ನು ಸಾಮಾನ್ಯವಾಗಿ ಯಾರೂ ನಿರಾಕರಿಸುವುದಿಲ್ಲ.

ಕರ್ನಾಟಕದಲ್ಲಿ ಅನೇಕ ರೀತಿಯ ಪಾಯಸಗಳು ಜನಪ್ರಿಯವಾಗಿವೆ. ಪಾಯಸಕ್ಕೆ ಬಳಸುವ ಮುಖ್ಯ ವಸ್ತುವನ್ನು ಆಧರಿಸಿ ಹೆಸರು ನೀಡಲಾಗುತ್ತದೆ. ಸಬ್ಬಕ್ಕಿ, ಶಾವಿಗೆ, ಅಕ್ಕಿ, ಬಾದಾಮಿ, ಬೇಳೆಗಳಾದ ಹೆಸರು ಬೇಳೆ, ಕಡಲೆ ಬೇಳೆ, ತರಕಾರಿಗಳಾದ ಕ್ಯಾರೆಟ್, ಸೋರೆಕಾಯಿ, ಪಡುವಲುಕಾಯಿ, ಕುಂಬಳಕಾಯಿ, ಹಣ್ಣುಗಳಾದ ಮಾವು, ಬಾಳೆಹಣ್ಣು, ಹಲಸು, ಕಿತ್ತಳೆ ಇತ್ಯಾದಿಗಳನ್ನು ಬಳಸಿ ಹಲವಾರು ರೀತಿಯಲ್ಲಿ ಪಾಯಸವನ್ನು ಮಾಡಬಹುದು.

ಪಾಯಸಕ್ಕೆ ಬಳಸುವ ಮುಖ್ಯ ವಸ್ತು (ಸಬ್ಬಕ್ಕಿ/ಶಾವಿಗೆ) ಅಲ್ಲದೆ ಹಾಲು, ತೆಂಗಿನಕಾಯಿ ಮತ್ತು ಸಿಹಿಗಾಗಿ ಸಕ್ಕರೆ/ಬೆಲ್ಲ ಪಾಯಸದ ಮುಖ್ಯ ಪದಾರ್ಥಗಳು. ಸಬ್ಬಕ್ಕಿ/ಶಾವಿಗೆ ಇತ್ಯಾದಿಯನ್ನು ಕೆಲವು ನಿಮಿಷಗಳ ಕಾಲ ತುಪ್ಪದಲ್ಲಿ ಹುರಿದು ನಂತರ ಬಿಸಿ ಹಾಲಿನಲ್ಲಿ ಬೇಯಿಸಲಾಗುತ್ತದೆ. ನಂತರ ಸಕ್ಕರೆ/ಬೆಲ್ಲವನ್ನು ಸೇರಿಸಲಾಗುತ್ತದೆ. ಪಾಯಸಕ್ಕೆ ಬಳಸಿದ ಮುಖ್ಯ ಪದಾರ್ಥವನ್ನು ಅವಲಂಬಿಸಿ ತಯಾರಿಸುವ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ. ರುಚಿ ವರ್ಧಕಗಳಾದ ಏಲಕ್ಕಿ, ಗೋಡಂಬಿ, ಒಣ ದ್ರಾಕ್ಷಿ, ಬಾದಾಮಿ ಇತ್ಯಾದಿಗಳನ್ನು ನಮಗೆ ಬೇಕಾದಷ್ಟು ಪ್ರಮಾಣದಲ್ಲಿ ಪಾಯಸಕ್ಕೆ ಸೇರಿಸಬಹುದು.

ಹೆಚ್ಚಿನ ಉಪಹಾರ ಗೃಹಗಳಲ್ಲಿ ನೀಡಲಾಗುವ ತಟ್ಟೆ ಊಟದಲ್ಲಿ ಅಥವಾ ಬಫೆ ಊಟದಲ್ಲಿ ಸಾಮಾನ್ಯವಾಗಿ ಪಾಯಸ ಅವಿಭಾಜ್ಯ ಅಂಗವಾಗಿರುತ್ತದೆ. ದಕ್ಷಿಣ ಭಾರತದ ವಿವಾಹ ನಾಮಕರಣ ಮುಂತಾದ ವಿಶೇಷ ಸಂದರ್ಭದ ಊಟದಲ್ಲಿ, ಪಾಯಸವನ್ನು ಬಾಳೆ ಎಲೆಯಲ್ಲಿ ಮೊದಲು ಬಡಿಸಲಾಗುತ್ತದೆ. ಕೇರಳದ ಅಡುಗೆಯಲ್ಲಿ ಬೇರೆ ಬೇರೆ ಹಣ್ಣುಗಳಿಂದ ಪಾಯಸ ಮಾಡುತ್ತಾರೆ. ಇದು ಕೇರಳದ ಓಣಂ ಹಬ್ಬದ ಸಾಡ್ಯ ಎಂಬ ಹೆಸರಿನಲ್ಲೂ ಕೇಳಿಬರುತ್ತದೆ. ಇದರಲ್ಲಿ ಹಲಸಿನ ಹಣ್ಣಿನ ಪಾಯಸ ಪ್ರಮುಖವಾಗಿದೆ. ಹೈದರಾಬಾದ್‌ ನಲ್ಲಿ ಹಾಲು ಮತ್ತು ಸೋರೆಕಾಯಿಯಿಂದ ತಯಾರಿಸಿದ ಪಾಯಸ ತುಂಬಾ ಪ್ರಸಿದ್ದವಾಗಿದೆ.

 

Author:

...
Editor

ManyaSoft Admin

Ads in Post
share
No Reviews