ಕೋಲಾರ: ರಸ್ತೆ ವಿಚಾರಕ್ಕೆ ಜಗಳ | ಮನೆ ಮುಂದೆಯೇ ವ್ಯಕ್ತಿಯ ಹತ್ಯೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೋಲಾರ

ಕೋಲಾರ:

ಕೋಲಾರ ಜಿಲ್ಲೆಯ ಕೆ.ಜಿ.ಎಫ್‌ ತಾಲೂಕಿನ ಕಣ್ಣೂರು ಗ್ರಾಮದಲ್ಲಿ ಮನೆಯ ಎದುರಿನ ರಸ್ತೆಯ ವಿಚಾರಕ್ಕೆ ಜಗಳ ನಡೆದು ವ್ಯಕ್ತಿಯೊಬ್ಬನನ್ನು ಹಾರೆಯಿಂದ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಕಣ್ಣೂರು ಗಾಮದಲ್ಲಿ ಮನೆ ಎದುರಿರುವ ರಸ್ತೆ ವಿಚಾರಕ್ಕೆ ಮಾತಿನಿಂದ ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕಣ್ಣೂರು ಗ್ರಾಮದ ನಿವಾಸಿ ಮಂಜುನಾಥ್‌ ಮೃತ ವ್ಯಕ್ತಿಯಾಗಿದ್ದಾನೆ. ಮನೆ ಮುಂದೆ ಇರುವ ರಸ್ತೆ ವಿಚಾರಕ್ಕೆ ಮಂಜುನಾಥ್‌, ಮುನಿವೆಂಕಟಪ್ಪ ಹಾಗೂ ರಾಜೇಶ್‌ ಮಧ್ಯೆ ಜಗಳ ಶುರುವಾಗಿ ಆರೋಪಿಗಳು ಹಾರೆಯಿಂದ ಮುಂಜುನಾಥ್‌ ಗೆ ಹೊಡೆದಿದ್ದಾರೆ, ಪರಿಣಾಮ ಮಂಜುನಾಥ್‌ ಸಾವನ್ನಪ್ಪಿದ್ದಾರೆ. ಮುನಿವೆಂಕಟಪ್ಪ ಹಾಗೂ ರಾಜೇಶ್‌ ಎಂಬುವರು ಈ ಹತ್ಯೆ ಮಾಡಿದ ಆರೋಪಿಗಳಾಗಿದ್ದಾರೆ. 

ಸ್ಥಳಕ್ಕೆ ಕ್ಯಾಸಂಬಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಕ್ಯಾಸಂಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು. ಪೊಲೀಸರು ಆರೋಪಿಗಳಾದ ಮುನಿವೆಂಕಟಪ್ಪ ಹಾಗೂ ರಾಜೇಶ್‌ ಎನ್ನುವವರನ್ನು ಬಂಧಿಸಿದ್ದಾರೆ. ಮಾತಿನಿಂದ ಪ್ರಾರಂಭವಾದ ಜಗಳ ಹತ್ಯೆಯಲ್ಲಿ ಅಂತ್ಯಗೊಂಡಿದೆ ಎಂದು ಪೊಲೀಸ್‌ ತನಿಖೆಯಲ್ಲಿ ತಿಳಿದುಬಂದಿದೆ.

Author:

share
No Reviews