Kiccha Sudeepa:
ಸ್ಯಾಂಡಲ್‌ವುಡ್‌ನ ನಟ ಕಿಚ್ಚ ಸುದೀಪ್ ಸೀಸನ್ 11 CCL ಗಾಗಿ ಸಖತ್ ಪ್ರಾಕ್ಟೀಸ್ ಮಾಡ್ತಿದ್ದಾರೆ. ಫೆಬ್ರವರಿ-8 ರಂದು ನಡೆಯೋ ತೆಲುಗು ವಾರಿಯರ್ಸ್ ಜೊತೆಗಿನ ಪಂದ್ಯಕ್ಕಾಗಿಯೇ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸ್ಯಾಂಡಲ್‌ವುಡ್ನಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹೊರ ವಲಯದ ಮೈದಾನನಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಸಖತ್ ಪ್ರ್ಯಾಕ್ಟೀಸ್ ಮಾಡುತ್ತಿದೆ. ಕಿಚ್ಚ ಸುದೀಪ್ ತಮ್ಮ ಹುಡುಗರನ್ನು ಮಸ್ತ್ ಆಗಿಯೇ ತಯಾರು ಮಾಡುತ್ತಿದ್ದಾರೆ. ಇದರ ಮಧ್ಯೆ ಸ್ವತಃ ಕಿಚ್ಚ ಸುದೀಪ್ ಒಂದು ವಿಡಿಯೋ ಮಾಡಿದ್ದಾರೆ. ವಿಡಿಯೋ ಮೂಲಕ ಎಲ್ಲರಿಗೂ ಪಂದ್ಯ ನೋಡಲು ಬನ್ನಿ ಅಂತಲೂ ಆಹ್ವಾನಿಸಿದ್ದಾರೆ. ಡೇಟ್ ಮತ್ತು ಟೈಮ್ ಬಗ್ಗೆನೂ ಮಾಹಿತಿ ಕೊಟ್ಟಿದ್ದಾರೆ.
ಮೊದಲ ದಿನ ನಡೆಯುವ ಮೊದಲ ಪಂದ್ಯದಲ್ಲಿ ಚೆನ್ನೈ ರಿನ್ಹೋಸ್ ತಂಡವನ್ನು ಬೆಂಗಾಲ್ ಟೈಗರ್ಸ್ ತಂಡ ಎದುರಿಸಲಿದೆ. ಅದೇ ದಿನ ಮತ್ತೊಂದು ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಮತ್ತು ತೆಲುಗು ವಾರಿಯರ್ಸ್ ತಂಡಗಳು ಮುಖಾಮುಖಿ ಆಗಲಿವೆ. ಕರ್ನಾಟಕ ಬುಲ್ಡೋಜರ್ಸ್, ಚೆನ್ನೈ ರೈನೋಸ್, ಪಂಜಾಬ್ ಡಿ ಶೇರ್, ಬೆಂಗಾಲ್ ಟೈಗರ್ಸ್, ಭೋಜ್‌ಪುರಿ ದಬಾಂಗ್ಸ್, ತೆಲುಗು ವಾರಿಯರ್ಸ್, ಮುಂಬೈ ಹೀರೋಸ್ ಮತ್ತು ಕೇರಳ ಸ್ಟ್ರೈಕರ್ಸ್ ತಂಡಗಳು ಈ ಬಾರಿ ಟೂರ್ನಿಯಲ್ಲಿ ಆಡುತ್ತಿವೆ.
ಕರ್ನಾಟಕ ಬುಲ್ಡೋಜರ್ಸ್ ಎರಡು ಬಾರಿ ಟ್ರೋಫಿ ಎತ್ತಿ ಹಿಡಿದಿತ್ತು. 10 ಸೀಸನ್‌ಗಳಲ್ಲಿ 5 ಬಾರಿ ರನ್ನರ್ ಅಪ್ ಆಗಿದೆ. ಒಟ್ಟು 10 ಸೀಸನ್‌ಗಳಲ್ಲಿ 48 ಪಂದ್ಯಗಳನ್ನು ಆಡಿ 31 ಪಂದ್ಯಗಳಲ್ಲಿ ತಂಡ ಗೆದ್ದಿದೆ. ಇನ್ನು ತಂಡವನ್ನು ಕಿಚ್ಚ ಸುದೀಪ್ ಮುನ್ನಡೆಸುತ್ತಾ ಬರುತ್ತಿದ್ದಾರೆ. ಈ ಬಾರಿ ಫೆಬ್ರವರಿ 8ರಂದು ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.
ಕಿಚ್ಚ ಸುದೀಪ್ ಸಿಸಿಎಲ್ ಪಂದ್ಯಕ್ಕೆ ಸಿನಿಮಾ ಕೆಲಸವನ್ನು ಪಕ್ಕಕ್ಕೂ ಇಟ್ಟಿ ರೆಡಿ ಆಗುತ್ತಿದ್ದಾರೆ. ಬಿಗ್ ಬಾಸ್ ಮುಗಿದಮೇಲೆ ನೇರವಾಗಿಯೇ ಮೈದಾನಕ್ಕೆ ಇಳಿದ ಕಿಚ್ಚ ಸುದೀಪ್, ನಿತ್ಯವೂ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ. ಈ ಮೂಲಕ ಫೆಬ್ರವರಿ-8 ರಂದು ನಡೆಯೋ ಪಂದ್ಯಕ್ಕಾಗಿಯೇ ಸಖತ್ ತಯಾರಿ ಶುರು ಮಾಡಿದ್ದಾರೆ. ಕಿಚ್ಚ ಸುದೀಪ್ ವಿಡಿಯೋದಲ್ಲಿ ಫೆಬ್ರವರಿ-8 ರಂದು ನಮ್ಮ ಪಂದ್ಯ ಇದೆ. ತೆಲುಗು ವಾರಿಯರ್ಸ್ ಜೊತೆಗೆ ನಾವು ಆಡ್ತಾ ಇದ್ದೇವೆ. ಆ ದಿನ ನೀವೆಲ್ಲ ಬನ್ನಿ. ನಿಮ್ಮನ್ನ ನೋಡೋಕೆ ನಾವು ಕಾಯ್ತಾ ಇದ್ದೇವೆ ಅಂತಲೇ ಸುದೀಪ್ ಹೇಳಿಕೊಂಡಿದ್ದಾರೆ. ಸಿಸಿಎಲ್ ಪಂದ್ಯ ಒಂದು ವರ್ಷದ ಬಳಿಕ ಆಗುತ್ತಿದೆ. ನನಗೆ ಇನ್ನು ನೆನಪಿದೆ. ನಮ್ಮ ಪಂದ್ಯ ಚೆನ್ನೈ ಜೊತೆಗೆ ಇತ್ತು. ಆ ದಿನ ಇಡೀ ಸ್ಟೇಡಿಯಂ ತುಂಬಿತ್ತು. ಜನ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಸಲವೂ ಅದೇ ರೀತಿನೆ ಇರುತ್ತದೆ ಅಂತ ನಿರೀಕ್ಷೆ ಮಾಡುತ್ತೇನೆ ಅಂತಲೂ ಸುದೀಪ್ ವಿಡಿಯೋ ಮೂಲಕ ಅಭಿಮಾನಿಗಳಿಗೆ ಹೇಳಿದ್ದಾರೆ.